Law Minister Arjun Ram Meghwal On UCC: ಏಕರೂಪ ನಾಗರಿಕ ಸಂಹಿತೆ ಕುರಿತು ಮತ್ತೊಮ್ಮೆ ದೇಶಾದ್ಯಂತ ಮತ್ತೊಮ್ಮೆ ಬಿಸಿಬಿಸಿ ಚರ್ಚೆಗಳು ಆರಂಭಗೊಂಡಿವೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರದೇಶದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಮಾತನಾಡಿದ್ದರು. ಇದಾದ ಬಳಿಕ ಯುಸಿಸಿ ವಿಚಾರದಲ್ಲಿ ಮತ್ತೊಮ್ಮೆ ರಾಜಕೀಯ ಶುರುವಾಗಿದೆ. ಬಿಜೆಪಿ ಏಕರೂಪ ನಾಗರಿಕ ಸಂಹಿತೆ ತರಲು ಬಯಸಿದರೆ ಸಂಸತ್ತಿನಲ್ಲಿ ಮಸೂದೆಯನ್ನು ತರಬೇಕು ಎಂದು ಕಾಂಗ್ರೆಸ್ ಹೇಳಿದೆ. ಇನ್ನೊಂದೆಡೆ ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಮೋದಿ ಸರ್ಕಾರದ 9 ವರ್ಷಗಳ ಬಗ್ಗೆ ಪತ್ರಿಕಾಗೋಷ್ಠಿಗೆ ನಡೆಸಿದ್ದಾರೆ, ಆಗ ಮಾಧ್ಯಮಗಳು ಅವರನ್ನು ಯುಸಿಸಿ ಕುರಿತು ಪ್ರಶ್ನಿಸಿದ್ದಾರೆ. ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ಕಾನೂನು ಸಚಿವರು ಜುಲೈ 13ರವರೆಗೆ ನಿರೀಕ್ಷಿಸುವಂತೆ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಭಾರತೀಯ ಕಾನೂನು ಆಯೋಗವು ಏಕರೂಪ ನಾಗರಿಕ ಸಂಹಿತೆಯ ಸಮಸ್ಯೆಯನ್ನು ಸಾರ್ವಜನಿಕ ಡೊಮೇನ್‌ನಲ್ಲಿ ಇರಿಸಿದೆ ಎಂದು ಕೇಂದ್ರ ಕಾನೂನು ಸಚಿವರು ಹೇಳಿದ್ದಾರೆ. ಇದರ ಕೊನೆಯ ಅವಧಿ ಜುಲೈ 13 ಆಗಿದೆ. ಅಲ್ಲಿಯವರೆಗೆ ಎಲ್ಲರೂ ಕಾಯಬೇಕು ಎಂದು ಅವರು ಹೇಳಿದ್ದಾರೆ.


ಈ ಕುರಿತು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಮಂಗಳವಾರ ಮಾತನಾಡಿದ್ದು, ಬಿಜೆಪಿಯು ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಬಯಸಿದರೆ, ಅದನ್ನು ಸಂಸತ್ತಿನ ಮೂಲಕ ತರಬೇಕು, ಯಾರು ತಡೆದಿದ್ದಾರೆ? ಅದನ್ನು ಸಂಸತ್ತಿನಲ್ಲಿ ಮಂಡಿಸುವ ಮುನ್ನವೇ ವಿರೋಧ ಪಕ್ಷಗಳಿಗೆ ಈ ಬಗ್ಗೆ ಹಿಡಿಶಾಪ ಹಾಕಲು ಆರಂಭಿಸುತ್ತೀರಿ. ಯುಸಿಸಿ ಹೆಸರಿನಲ್ಲಿ ನೀವು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳನ್ನು ದೂಷಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ .


9 ವರ್ಷಗಳ ಮೋದಿ ಸರ್ಕಾರದ ಬಗ್ಗೆ ಮೇಘವಾಲ್ ಹೇಳಿದ್ದೇನು?
ಕಳೆದ 9 ವರ್ಷಗಳ ಮೋದಿ ಸರ್ಕಾರದ ಕುರಿತು ಮಾತನಾಡಿರುವ ಕೇಂದ್ರ ಕಾನೂನು ಸಚಿವರು, 9 ವರ್ಷಗಳಲ್ಲಿ ಸರಿಸಾಟಿಯಿಲ್ಲದ ಕೆಲಸ ಮಾಡಲಾಗಿದೆ. ಮೇ 30ರಿಂದ ಜೂನ್ 30ರವರೆಗೆ ಬಿಜೆಪಿ ಕಾರ್ಯಕ್ರಮ ಆರಂಭಿಸಿದೆ. ಕೇಂದ್ರದ ಯೋಜನೆಗಳನ್ನು ಜನರಿಗೆ ತಿಳಿಯಪಡಿಸಲಾಗುವುದು. 2014ಕ್ಕೂ ಮೊದಲು ಹಲವು ಯೋಜನೆಗಳಿದ್ದವು. 100 ಕ್ಕೂ ಹೆಚ್ಚು ಯೋಜನೆಗಳು ಬಂದವು, ಆದರೆ ಪ್ರಮಾಣ ಮತ್ತು ವೇಗವನ್ನು ಬದಲಾಗಿದೆ. ತಂತ್ರಜ್ಞಾನವನ್ನು ಬಳಸಲಾಯಿತು ಮತ್ತು ಡಿಬಿಟಿ ಬಳಸಿ ಬೋಗಸ್ ಪಿಂಚಣಿಗಳನ್ನು ಕಡಿಮೆ ಮಾಡಲಾಯಿತು, ಆಧಾರ್ ಲಿಂಕ್ ಮಾಡಿ, ಪಿಂಚಣಿ ಕೆಲಸವನ್ನು ಸರಳಗೊಳಿಸಲಾಯಿತು.


ಇಂದಿರಾ ಆವಾಸ್ ಯೋಜನೆ ಅಡಿ ಕೇವಲ 43 ಸಾವಿರ ರೂ. ನೀಡಲಾಗುತ್ತಿತ್ತು ಮತ್ತು ಅದರಲ್ಲಿ ಹಲವು ರೀತಿಯ ಸಮಸ್ಯೆಗಳಿದ್ದವು. ಪ್ರಧಾನಿ ಮೋದಿ ಅವರು ಬಂದ ಬಳಿಕ,  ಎಲ್ಲವೂ ಬದಲಾಗಿದೆ. ಪಿಎಂ ಆವಾಸ್ ಅಡಿಯಲ್ಲಿ ಹೆಚ್ಚಿನ ಅರ್ಜಿಗಳು ಬರಲಾರಂಭಿಸಿದವು. ಈ ಹಿಂದೆ ಮನೆ ಕಟ್ಟಲು ಬರೀ 43 ಸಾವಿರ ರೂಪಾಯಿ ನೀಡಲಾಗುತ್ತಿತ್ತು, ಮೋದಿ ಸರ್ಕಾರ ಬಂದ ಮೇಲೆ ಒಂದೂವರೆ ಲಕ್ಷ ನೀಡಲಾಗುತ್ತಿದೆ, ಹಲವು ರಾಜ್ಯಗಳ ನೆರವಿನಿಂದ ಆ ಮೊತ್ತ 2.5 ಲಕ್ಷ ಏರಿಕೆಯಾಗಿದೆ.


ಇದನ್ನೂ ಓದಿ-UCC: ಏಕರೂಪ ನಾಗರಿಕ ಸಂಹಿತೆ, ಮೋದಿ ಸರ್ಕಾರಕ್ಕೆ ಕೆಜ್ರಿವಾಲ್ ಬೆಂಬಲ


ಪ್ರಧಾನಿ ಮೋದಿ ಬಂದ ಬಳಿಕ ಜಿಯೋ ಟ್ಯಾಗ್ ತಂತ್ರಜ್ಞಾನವನ್ನು ಆರಂಭಿಸಿದರು  ಎಂದು ಅರ್ಜುನ್ ರಾಮ್ ಮೇಘವಾಲ್ ಹೇಳಿದ್ದಾರೆ. ಫಲಾನುಭವಿಯಿಂದ ಮನೆ ನಿರ್ಮಾಣದ ಫೋಟೋಗಳನ್ನು ಕೇಳಲಾಗುತ್ತದೆ, ನಂತರ ಕೇಂದ್ರ ಘಟಕದಲ್ಲಿ ಫೋಟೋವನ್ನು ಪ್ರಕ್ರಿಯೆಗೊಳಿಸಲಾಗುತ್ತದೆ ಮತ್ತು ಸಂಪೂರ್ಣ ಮನೆ ನಿರ್ಮಾಣಗೊಂಡ ಬಳಿಕ ಕಂತು ನೇರವಾಗಿ ಅರ್ಜಿದಾರರ ಖಾತೆಗೆ ಹೋಗುತ್ತದೆ. ನಮ್ಮ ಯೋಜನೆಯಿಂದಾಗಿ 4.5 ಕೋಟಿ ಪ್ರಧಾನಮಂತ್ರಿ ವಸತಿಯ ಪ್ರಯೋಜನ ಪ್ರತಿ ಗ್ರಾಮಕ್ಕೂ ತಲುಪಿದೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ-Amit Malviya ವಿರುದ್ಧ ಕರ್ನಾಟಕದಲ್ಲಿ ಆಫ್ಐಆರ್, ಟ್ವಿಟ್ಟರ್ ನಲ್ಲಿ ರಾಹುಲ್ ವಿರುದ್ಧ ವಿಡಿಯೋ ಹಂಚಿಕೆ ಆರೋಪ


ಇದಕ್ಕೂ ಮುಂದುವರೆದು ಮಾತನಾಡಿರುವ ಅರ್ಜುನ್ ರಾಮ್ ಮೇಘವಾಲ್ , '2015ರ ಸುಮಾರಿಗೆ ಶೌಚಾಲಯ ನಿರ್ಮಿಸುವ ವಿಷಯ ಪ್ರಸ್ತಾಪಿಸಲಾಗಿತ್ತು. ಆ ಸಮಯದಲ್ಲಿ ನಾನು ಗ್ರೌಂಡ್ ಮ್ಯಾನೇಜ್ಮೆಂಟ್ ಗೆ ಹೋಗಿದ್ದೆ. ಕಾಂಗ್ರೆಸ್‌ನ ಮಾಜಿ ಸಚಿವರೊಬ್ಬರು ಅಲ್ಲಿದ್ದರು, ಅವರು ಹೇಳಿದರು - 10 ಕೋಟಿ ಶೌಚಾಲಯಗಳನ್ನು ನಿರ್ಮಿಸುವುದಿಲ್ಲ. 1 ಕೋಟಿ ಗುರಿ ಇಟ್ಟುಕೊಳ್ಳುವಂತೆ ಸಲಹೆ ನೀಡಿದರು. ನನಗೆ ಮಸೂದೆಗೆ ಬಂಬಲ ಪಡೆಯಬೇಕಾಗಿಟ್ಟು.  ಹೀಗಾಗಿ ನಾನು ಅವರ ಸಲಹೆ ಕೇಳಬೇಕಾಯಿತು. ಆದರೆ ಇಂದು   11.5 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಅರ್ಜುನ್ ಮೇಘವಾಲ್ ಹೇಳಿದ್ದಾರೆ. 


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.