ನವದೆಹಲಿ : Weather Alert Latest Update: ಕೇರಳ ಸೇರಿದಂತೆ 4 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (India Meteorological Department) ಮುನ್ಸೂಚನೆ ನೀಡಿದೆ. ಕಳೆದ ಕೆಲವು ದಿನಗಳಿಂದ ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಅನೇಕ ಪ್ರದೇಶಗಳಲ್ಲಿ ಪ್ರವಾಹ ಸ್ಥಿತಿ  (Flood) ಎದುರಾಗಿದೆ. 


COMMERCIAL BREAK
SCROLL TO CONTINUE READING

ಈ ರಾಜ್ಯಗಳಲ್ಲಿ ಸುರಿಯಲಿದೆ ಭಾರೀ ಮಳೆ :
ಹವಾಮಾನ ಇಲಾಖೆಯ (IMD) ಮುನ್ಸೂಚನೆ ಮತ್ತು ಎಚ್ಚರಿಕೆಯ ಪ್ರಕಾರ, ಮುಂದಿನ 5 ದಿನಗಳಲ್ಲಿ ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ, ಆಂಧ್ರಪ್ರದೇಶ, ಕೇರಳ ಮತ್ತು ತಮಿಳುನಾಡು ಮತ್ತು ಪುದುಚೇರಿಯಲ್ಲಿ ಅತಿ ಹೆಚ್ಚು ಮಳೆಯಾಗುವ (Heavy Rainfall) ನಿರೀಕ್ಷೆಯಿದೆ. ಇದೇ ವೇಳೆ, ನವೆಂಬರ್ 25ರಿಂದ 27 ರ ನಡುವೆ ತಮಿಳುನಾಡು ಮತ್ತು ಪುದುಚೇರಿಯಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಇದಲ್ಲದೆ, ನವೆಂಬರ್ 27 ರಂದು ಆಂಧ್ರಪ್ರದೇಶದ ಯಾನಂ ಮತ್ತು ರಾಯಲಸೀಮೆ, ದಕ್ಷಿಣ ಕರಾವಳಿ ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗುವ ಸಂಭವವಿದೆ. ಇದರೊಂದಿಗೆ ನವೆಂಬರ್ 25-26 ರವರೆಗೆ ತಮಿಳುನಾಡಿನಲ್ಲಿ ಆರೆಂಜ್ ಅಲರ್ಟ್ (Orange alert) ಘೋಷಿಸಲಾಗಿದೆ. 


ಇದನ್ನೂ ಓದಿ : ರೈತರಿಗೆ ಮೊಬೈಲ್ ಖರೀದಿಸಲು ಸರ್ಕಾರ ನೀಡುತ್ತಿದೆ ಹಣ : ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ


ನವೆಂಬರ್ 26 ಮತ್ತು 27 ರಂದು ತಮಿಳುನಾಡು ಮತ್ತು ದಕ್ಷಿಣ ಆಂಧ್ರಪ್ರದೇಶದ ಕರಾವಳಿ ಮತ್ತು ಮನ್ನಾರ್  ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯಲ್ಲಿ (Bay of Bengal) ಭಾರೀ ಗಾಳಿ ಬೀಸುವ ಸಾಧ್ಯತೆಯಿದೆ. ಈ ಸಮಯದಲ್ಲಿ, ಗಾಳಿಯು ಗಂಟೆಗೆ 40-60 ಕಿಮೀ ವೇಗದಲ್ಲಿ ಬೀಸಬಹುದು ಏನು ಅಂದಾಜಿಸಲಾಗಿದೆ. 


ಸಮುದ್ರಕ್ಕೆ  ಇಳಿಯದಂತೆ ಮೀನುಗಾರರಿಗೆ ಸೂಚನೆ : 
ಭಾರೀ ಮಳೆ ಹಾಗೂ ಜೋರಾದ ಗಾಳಿಯಿಂದಾಗಿ ಮೀನುಗಾರರಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ (Fisherman) ಸೂಚನೆ ನೀಡಲಾಗಿದೆ. ಭಾರೀ ಮಳೆಯಿಂದಾಗಿ ಸಮುದ್ರದಲ್ಲಿ ದೊಡ್ಡ ಗಾತ್ರದ ಅಲೆಗಳು ಏಳುವ ಸಾಧ್ಯತೆ ಇದೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ. 


ಇದನ್ನೂ ಓದಿ : Petrol-Diesel Price: ಹೆಚ್ಚಾಗುತ್ತಿರುವ Petrol-Disel ಹಣದುಬ್ಬರಕ್ಕೆ ಶೀಘ್ರವೇ ಕಡಿವಾಣ! ಮೋದಿ ಸರ್ಕಾರದ ಸೂಪರ್ ಹಿಟ್ ಪ್ಲಾನ್ ಇಲ್ಲಿದೆ


ಕಾಶ್ಮೀರದಲ್ಲಿ ಶೀತ ಅಲೆಗಳು :
ಉತ್ತರ ಭಾರತದಲ್ಲಿ ಚಳಿ ನಿರಂತರವಾಗಿ ಹೆಚ್ಚುತ್ತಿದೆ. ಕಾಶ್ಮೀರದಲ್ಲಿ (kashmir) ಶೀತ ಅಲೆಗಳ ವಾತಾವರಣವಿದೆ. ಸೋಮವಾರ ರಾತ್ರಿ ಶ್ರೀನಗರದಲ್ಲಿ ಕನಿಷ್ಠ ಮೈನಸ್ 2.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕಳೆದ ಕೆಲವು ದಿನಗಳಿಂದ ಕಾಶ್ಮೀರದಲ್ಲಿ ಶೂನ್ಯಕ್ಕಿಂತ ಕಡಿಮೆ ತಾಪಮಾನ (Weather Alert) ದಾಖಲಾಗುತ್ತಿದೆ. ಈ ಋತುವಿನ ಸಾಮಾನ್ಯ ತಾಪಮಾನಕ್ಕಿಂತ ಎರಡರಿಂದ ಮೂರು ಡಿಗ್ರಿ ಸೆಲ್ಸಿಯಸ್ ಕಡಿಮೆ ದಾಖಲಾಗುತ್ತಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.