Petrol-Diesel Price: ಹೆಚ್ಚಾಗುತ್ತಿರುವ Petrol-Disel ಹಣದುಬ್ಬರಕ್ಕೆ ಶೀಘ್ರವೇ ಕಡಿವಾಣ! ಮೋದಿ ಸರ್ಕಾರದ ಸೂಪರ್ ಹಿಟ್ ಪ್ಲಾನ್ ಇಲ್ಲಿದೆ

Petrol-Diesel Price to Decline: ಕೇಂದ್ರ ಸರ್ಕಾರ ತನ್ನ ಎಮರ್ಜೆನ್ಸಿ ಸ್ಟ್ರಾಟೆಜಿಕ್ ರಿಸರ್ವ್‌ನಿಂದ 5 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಬಿಡುಗಡೆಗೊಳಿಸುವ  ನಿರ್ಣಯವನ್ನು ಕೈಗೊಂಡಿದೆ.

Written by - Nitin Tabib | Last Updated : Nov 23, 2021, 07:30 PM IST
  • ಮುಂಬರುವ ದಿನಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗುವ ನಿರೀಕ್ಷೆ ಇದೆ.
  • ಏಕೆಂದರೆ ಕಚ್ಚಾ ತೈಲದ ಬೆಲೆಯಲ್ಲಿ ಭಾರಿ ಇಳಿಕೆಯಾಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ.
  • ಕೇಂದ್ರ ಸರ್ಕಾರವು ತನ್ನ ಎಮರ್ಜೆನ್ಸಿ ಸ್ಟ್ರಾಟೆಜಿಕ್ ರಿಸರ್ವ್‌ನಿಂದ 5 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ನಿರ್ಧರಿಸಿದೆ.
Petrol-Diesel Price: ಹೆಚ್ಚಾಗುತ್ತಿರುವ Petrol-Disel ಹಣದುಬ್ಬರಕ್ಕೆ ಶೀಘ್ರವೇ ಕಡಿವಾಣ! ಮೋದಿ ಸರ್ಕಾರದ ಸೂಪರ್ ಹಿಟ್ ಪ್ಲಾನ್ ಇಲ್ಲಿದೆ title=
Petrol-Diesel Price to Decline

Petrol-Diesel Price to Decline: ಮುಂಬರುವ ದಿನಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ (Petrol-Diesel Latest Rates) ಇಳಿಕೆಯಾಗುವ ನಿರೀಕ್ಷೆ ಇದೆ. ಏಕೆಂದರೆ ಕಚ್ಚಾ ತೈಲದ ಬೆಲೆಯಲ್ಲಿ ಭಾರಿ ಇಳಿಕೆಯಾಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಕೇಂದ್ರ ಸರ್ಕಾರವು (Govt Plan On Petrol-Diesel) ತನ್ನ ಎಮರ್ಜೆನ್ಸಿ ಸ್ಟ್ರಾಟೆಜಿಕ್ ರಿಸರ್ವ್‌ನಿಂದ 5 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ನಿರ್ಧರಿಸಿದೆ. ಸರ್ಕಾರದ ಈ ಕ್ರಮದಿಂದ ಕಚ್ಚಾ ತೈಲ ಬೆಲೆ ಇಳಿಕೆಯಾಗುವ ನಿರೀಕ್ಷೆ ಇದೆ.

38 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲ Strategic Reserve ನಲ್ಲಿದೆ
ಮೂಲಗಳ ಪ್ರಕಾರ, ಭಾರತವು 38 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲ ನಿಕ್ಷೇಪಗಳನ್ನು ಹೊಂದಿದೆ,  ಇದು ದೇಶದ ಪೂರ್ವ ಮತ್ತು ಪಶ್ಚಿಮ ಕರಾವಳಿ ಪ್ರದೇಶಗಳ ನೆಲದಡಿಯಲ್ಲಿ ಸಂಗ್ರಹಿಸಲಾಗಿದೆ. ಈ ಪೈಕಿ 5 ಮಿಲಿಯನ್ ಬ್ಯಾರೆಲ್ ತೈಲವನ್ನು ಮುಂದಿನ 7 ರಿಂದ 10 ದಿನಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು. ಇದಕ್ಕೂ ಮುನ್ನ ಅಮೆರಿಕ, ಜಪಾನ್, ಚೀನಾ ಸೇರಿದಂತೆ ಇತರ ಕೆಲವು ದೇಶಗಳು ಕಚ್ಚಾ ತೈಲದ ಬೆಲೆ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು ಮಾರುಕಟ್ಟೆಯಲ್ಲಿ ತಮ್ಮ ಆಯಕಟ್ಟಿನ ಮೀಸಲುಗಳಿಂದ ಕಚ್ಚಾ ತೈಲವನ್ನು ಮಾರಾಟ ಮಾಡಲು ನಿರ್ಧರಿಸಿವೆ. ಈ ದೇಶಗಳ ಈ ನಿರ್ಧಾರದ ನಂತರ ಏರುತ್ತಿರುವ ಕಚ್ಚಾ ತೈಲ ಬೆಲೆಗೂ ಕಡಿವಾಣ ಬಿದ್ದಿದೆ.

ಇದನ್ನೂ ಓದಿ-Flex Fuel Engines: ಸರ್ಕಾರದ ಈ ಕ್ರಮದಿಂದ ಪೆಟ್ರೋಲ್ ಬೆಲೆ ಏರಿಕೆಯಿಂದ ಸಿಗಲಿದೆಯೇ ಮುಕ್ತಿ

ಪೈಪ್‌ಲೈನ್ ಮೂಲಕ ಪೂರೈಕೆ ಮಾಡಲಾಗುವುದು (Petrol-Diesel Price Update)
ಕೇಂದ್ರ ಸರ್ಕಾರವು ತನ್ನ ಸ್ಟ್ರಾಟೆಜಿಕ್ ರಿಸರ್ವ್‌ನಲ್ಲಿ ಸಂಗ್ರಹವಾಗಿರುವ ಈ ಕಚ್ಚಾ ತೈಲವನ್ನು ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್‌ಗೆ ಮಾರಾಟ ಮಾಡಲಿದೆ. ಏಕೆಂದರೆ ಈ ಕಂಪನಿಗಳ ಸಂಸ್ಕರಣಾಗಾರವು ಈ ನಿಕ್ಷೇಪಗಳಿಗೆ ಪೈಪ್‌ಲೈನ್‌ಗಳ ಮೂಲಕ ಸಂಪರ್ಕ ಹೊಂದಿದೆ.

ಇದನ್ನೂ ಓದಿ-Petrol Diesel Price: ಯಾವ ರೀತಿ ಕಡಿಮೆಯಾಗಲಿದೆ ಪೆಟ್ರೋಲ್-ಡೀಸೆಲ್ ದರ? ಇಲ್ಲಿದೆ ಸೂತ್ರ

ಅಗತ್ಯ ಬಿದ್ದರೆ ಪೂರೈಕೆ ಹೆಚ್ಚಿಸಲಾಗುವುದು
ಅಗತ್ಯಬಿದ್ದರೆ, ಮಾರುಕಟ್ಟೆಯಲ್ಲಿ ಈ ಆಯಕಟ್ಟಿನ ನಿಕ್ಷೇಪಗಳಿಂದ ಸರ್ಕಾರವು ಹೆಚ್ಚಿನ ಕಚ್ಚಾ ತೈಲವನ್ನು ಮಾರಾಟ ಮಾಡಬಹುದು, ಇದರಿಂದ ಸಾಮಾನ್ಯ ಜನರಿಗೆ ದುಬಾರಿ ಇಂಧನ ವೆಚ್ಚದಿಂದ ಪರಿಹಾರ ಸಿಗಲಿದೆ ಎಂದು ಸರ್ಕಾರ ಹೇಳಿದೆ. 

ಇದನ್ನೂ ಓದಿ-ಭಾರತದಲ್ಲಿ ಫ್ಲೆಕ್ಸ್ ಇಂಜಿನ್ ಗಳನ್ನು ಕಡ್ಡಾಯ ಮಾಡುವುದಾಗಿ ನಿತಿನ್ ಗಡ್ಕರಿ ಘೋಷಣೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News