Weather Update: ರಾಜ್ಯದಲ್ಲಿ ಸೈಕ್ಲೋನ್ ಭೀತಿ: ಮುಂದಿನ 5 ದಿನ ಈ ಪ್ರದೇಶಗಳಲ್ಲಿ ಭಾರೀ ವರ್ಷಧಾರೆ! ಎಚ್ಚರಿಕೆ ನೀಡಿದ ಇಲಾಖೆ
Weather Update 5 May 2023: ಬೆಂಗಳೂರು ನಗರದಲ್ಲಿ ಶನಿವಾರ ಮತ್ತು ಭಾನುವಾರವೂ ಮಳೆಯಾಗಲಿದೆ. ಆದರೆ ಶನಿವಾರದಂದು ಪ್ರಧಾನಿ ನರೇಂದ್ರ ಮೋದಿ ಅವರು ನಗರದಲ್ಲಿ ಸರಣಿ ರ್ಯಾಲಿ ನಡೆಸಲಿದ್ದು, ಮಳೆರಾಯ ಅಡ್ಡಿಪಡಿಸಲಿದ್ದಾನೆಯೇ ಎಂಬುದು ಪ್ರಶ್ನೆಯಾಗಿದೆ. ಜೊತೆಗೆ ಬಿಜೆಪಿಗೆ ತಲೆಬಿಸಿಯಾಗಿ ಪರಿಣಮಿಸಿದೆ
Weather Update 5 May 2023: ಮುಂದಿನ ಐದು ದಿನಗಳ ಕಾಲ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಅದರಲ್ಲೂ ವಿಶೇಷವಾಗಿ ದಕ್ಷಿಣ ಒಳನಾಡು ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ಬೆಂಗಳೂರು ನಗರದಲ್ಲಿ ಶನಿವಾರ ಮತ್ತು ಭಾನುವಾರವೂ ಮಳೆಯಾಗಲಿದೆ. ಆದರೆ ಶನಿವಾರದಂದು ಪ್ರಧಾನಿ ನರೇಂದ್ರ ಮೋದಿ ಅವರು ನಗರದಲ್ಲಿ ಸರಣಿ ರ್ಯಾಲಿ ನಡೆಸಲಿದ್ದು, ಮಳೆರಾಯ ಅಡ್ಡಿಪಡಿಸಲಿದ್ದಾನೆಯೇ ಎಂಬುದು ಪ್ರಶ್ನೆಯಾಗಿದೆ. ಜೊತೆಗೆ ಬಿಜೆಪಿಗೆ ತಲೆಬಿಸಿಯಾಗಿ ಪರಿಣಮಿಸಿದೆ.
ಇದನ್ನೂ ಓದಿ; DA Hike: ಶೇ.45ಕ್ಕೆ ತಲುಪಿದ ತುಟ್ಟಿಭತ್ಯೆ, ಸರ್ಕಾರಿ ನೌಕರರಿಗೊಂದು ಭರ್ಜರಿ ಸುದ್ದಿ!
IMD ಅಧಿಕಾರಿಗಳ ಪ್ರಕಾರ, ನೈಋತ್ಯ ಮಧ್ಯಪ್ರದೇಶದಿಂದ ತಮಿಳುನಾಡಿಗೆ ಒಳನಾಡಿನ ಕರ್ನಾಟಕದಾದ್ಯಂತ ಗಾಳಿಯ ಪ್ರಭಾವ ವಿರಳಗೊಂಡಿದೆ. ಉತ್ತರ ತಮಿಳುನಾಡಿನ ಮೇಲೆ ಚಂಡಮಾರುತದ ಪರಿಚಲನೆಯೂ ಇದೆ. ಈ ವ್ಯವಸ್ಥೆಗಳ ರಚನೆಯಿಂದಾಗಿ ಮಳೆಯ ಮುನ್ಸೂಚನೆ ನೀಡಲಾಗಿದೆ.
ಹಗಲಿನಲ್ಲಿ ಹಗುರದಿಂದ ಸಾಧಾರಣ ಮಳೆಯಿದ್ದರೆ, ಬೆಂಗಳೂರು ಸೇರಿದಂತೆ ಕರ್ನಾಟಕದ ಒಳನಾಡಿನ ಬಹುತೇಕ ಭಾಗಗಳಲ್ಲಿ ರಾತ್ರಿಯಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಮುಂದಿನ ದಿನಗಳಲ್ಲಿ ಕ್ಯುಮುಲೋನಿಂಬಸ್ ಮೋಡಗಳು ಕೂಡ ರಚನೆಯಾಗಲಿದ್ದು, ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ಐಎಂಡಿ ಅಧಿಕಾರಿಗಳು ಬೆಂಗಳೂರಿಗೆ ಯಾವುದೇ ಎಚ್ಚರಿಕೆ ನೀಡಿಲ್ಲ. ಸದ್ಯ ಮಳೆಯು ಬೇಸಿಗೆಯ ತಾಪಕ್ಕೆ ಕೊಂಚ ವಿರಾಮ ತಂದಿದೆ. ನಗರದಲ್ಲಿ ಬುಧವಾರ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 29.9 ಡಿಗ್ರಿ ಸೆಲ್ಸಿಯಸ್ ಮತ್ತು ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ 29.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ನಗರದಲ್ಲಿ 1 ಮಿ.ಮೀ ಮಳೆ, ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 0.2 ಮಿ.ಮೀ ಮತ್ತು ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಸಂಜೆ 5.30 ರವರೆಗೆ ಕೇವಲ ಒಂದು ಕುರುಹು ದಾಖಲಾಗಿದೆ.
ಇನ್ನು ದೇಶದ ವಿಚಾರಕ್ಕೆ ಬಂದರೆ, ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ನಡೆಯುತ್ತಿರುವ ಹವಾಮಾನವು ವಿಜ್ಞಾನಿಗಳನ್ನು ಸಹ ಆಶ್ಚರ್ಯಗೊಳಿಸಿದೆ. ಮೇ ತಿಂಗಳಲ್ಲಿ ಮಲೆನಾಡಿನಲ್ಲಿ ಭಾರೀ ಹಿಮಪಾತವಿದ್ದರೆ, ಬಯಲು ಸೀಮೆಯಲ್ಲಿ ತಂಪು ಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ. ಚಳಿಯಿಂದ ತಪ್ಪಿಸಿಕೊಳ್ಳಲು ಮತ್ತೆ ಕಂಬಳಿ ತೆಗೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಸಾಮಾನ್ಯವಾಗಿ ದೇಶದಲ್ಲಿ ಮೇ ಮತ್ತು ಜೂನ್ ತಿಂಗಳು ಸುಡುವ ಶಾಖಕ್ಕೆ ಹೆಸರುವಾಸಿಯಾಗಿರುತ್ತದೆ. ಈ ದಿನಗಳಲ್ಲಿ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ತಲುಪುತ್ತದೆ. ಈ ಮಧ್ಯೆ ಹವಾಮಾನ ಇಲಾಖೆಯು ವರದಿಯನ್ನು ಬಿಡುಗಡೆ ಮಾಡಿದೆ.
ಹವಾಮಾನ ಇಲಾಖೆಯ ಪ್ರಕಾರ, ಮುಂದಿನ 3 ದಿನಗಳಲ್ಲಿ ವಾಯುವ್ಯ ಭಾರತದಲ್ಲಿ ತಾಪಮಾನದಲ್ಲಿ 4-6 ಡಿಗ್ರಿಗಳಷ್ಟು ಏರಿಕೆಯಾಗಬಹುದು. ಮುಂದಿನ 5 ದಿನಗಳವರೆಗೆ ಶಾಖದ ಅಲೆ ಮುಂದುವರಿಯುವ ಸಾಧ್ಯತೆ ತೀರಾ ಕಡಿಮೆ ಇದೆ. ಈ ಸಮಯದಲ್ಲಿ, ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ ಎಂದು ಹೇಳಿದೆ.
ಹವಾಮಾನ ಇಲಾಖೆ ಪ್ರಕಾರ, ಈ ವಾರ 14 ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. 5 ರಾಜ್ಯಗಳಲ್ಲಿ ಲಘು ಮಳೆ ಮತ್ತು 10 ರಾಜ್ಯಗಳಲ್ಲಿ ಮೋಡ ಕವಿದ ವಾತಾವರಣವಿರಲಿದೆ. ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಎತ್ತರದ ಗುಡ್ಡಗಾಡು ಪ್ರದೇಶಗಳಲ್ಲಿ ಹಿಮಪಾತದ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ; WTC Final: ವಿರಾಟ್ ನಾಯಕತ್ವದಲ್ಲಿದ್ದ, ರೋಹಿತ್’ನಿಂದ ಹೊರಹಾಕಲ್ಪಟ್ಟ ಈ ಆಲ್’ರೌಂಡರ್ 1 ವರ್ಷದ ಬಳಿಕ Team Indiaಗೆ ಎಂಟ್ರಿ!
ದೆಹಲಿ-ಎನ್ ಸಿ ಆರ್ ನಲ್ಲಿ ಮೇ 12 ರವರೆಗೆ ಗರಿಷ್ಠ ತಾಪಮಾನ 35 ರಿಂದ 40 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 24 ರಿಂದ 30 ಡಿಗ್ರಿ ಎಂದು ನಿರೀಕ್ಷಿಸಲಾಗಿದೆ. ಮೇ 18 ರಂದು ದೆಹಲಿಯಲ್ಲಿ ಹವಾಮಾನದ ತಾಪಮಾನವು 45 ಡಿಗ್ರಿ ಸೆಲ್ಸಿಯಸ್ ಗೆ ಏರಬಹುದು. ದೆಹಲಿಯೊಂದಿಗೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಗರಿಷ್ಠ ತಾಪಮಾನವು 48 ಡಿಗ್ರಿ ಸೆಲ್ಸಿಯಸ್ ಗೆ ಏರಿಕೆಯಾಗುವ ಲಕ್ಷಣವಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.