Weather Update 29-4-2023: ಮುಂದಿನ 5 ದಿನಗಳಲ್ಲಿ ತಮಿಳುನಾಡು, ಕೇರಳ, ಕರಾವಳಿ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕದ ಒಳನಾಡು ಭಾಗಗಳು ಮತ್ತು ಪುದುಚೇರಿಗಳಲ್ಲಿ ಮಿಂಚು ಮತ್ತು ಬಿರುಗಾಳಿ (40-50 ಕಿಮೀ) ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಮನೀಶ್ ಸಿಸೋಡಿಯಾಗೆ ಜಾಮೀನು ನಿರಾಕರಿಸಿದ ದೆಹಲಿ ಕೋರ್ಟ್ 


  • ಏಪ್ರಿಲ್ 29ನೇ ತಾರೀಖಿನಂದು ಉತ್ತರ ಒಳನಾಡಿನಲ್ಲಿ ಮತ್ತು ಕಳೆದ ದಿನದಿಂದ 30ನೇ ತಾರೀಖಿನ ಅವಧಿಯಲ್ಲಿ ಲಕ್ಷದ್ವೀಪದಲ್ಲಿ ಭಾರೀ ಮಳೆ

  • ತೆಲಂಗಾಣದಲ್ಲಿ ಕಳೆದ ದಿನ ಅಂದರೆ ಏಪ್ರಿಲ್ 28 ರಿಂದ 30 ರವರೆಗೆ ಪ್ರತ್ಯೇಕ ಸ್ಥಳಗಳಲ್ಲಿ ಆಲಿಕಲ್ಲು ಸಹಿತ ಮಳೆಯಾಗುವ ಸಾಧ್ಯತೆಯಿದೆ.

  • ಮುಂದಿನ 5 ದಿನಗಳಲ್ಲಿ ಮಧ್ಯ ಮಹಾರಾಷ್ಟ್ರ ಮತ್ತು ಮರಾಠವಾಡದಲ್ಲಿ ಚದುರಿದ ಮಳೆಯಾಗುವ ಸಾಧ್ಯತೆಯಿದೆ ಮತ್ತು ಗುಜರಾತ್ ಪ್ರದೇಶದಲ್ಲಿ ಲಘುವಾಗಿ ಪ್ರತ್ಯೇಕವಾದ ಮಳೆಯಾಗುತ್ತದೆ.

  • ಮುಂದಿನ 5 ದಿನಗಳಲ್ಲಿ ಮಹಾರಾಷ್ಟ್ರದ ವಿದರ್ಭ ಪ್ರದೇಶ, ಮಧ್ಯಪ್ರದೇಶ ಮತ್ತು ಛತ್ತೀಸ್‌ ಗಢದಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ (40-50 kmph) ಜೊತೆಗೆ ಸಾಕಷ್ಟು ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ.

  • ಏಪ್ರಿಲ್ 29 ರಿಂದ 30 ರವರೆಗೆ ವಿದರ್ಭದ ಪ್ರತ್ಯೇಕ ಸ್ಥಳಗಳಲ್ಲಿ ಮತ್ತು ಮಧ್ಯಪ್ರದೇಶದ ಕೆಲವು ಭಾಗಗಳಲ್ಲಿ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ.

  • ಏಪ್ರಿಲ್ 30 ರಂದು ವಿದರ್ಭದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

  • ಏಪ್ರಿಲ್ 30 ರಂದು ಒಡಿಶಾದ ಪ್ರತ್ಯೇಕ ಸ್ಥಳಗಳಲ್ಲಿ ಆಲಿಕಲ್ಲು ಮಳೆಯಾಗುವ ಸಾಧ್ಯತೆ

  • ಜಾರ್ಖಂಡ್ ಮತ್ತು ಗಂಗಾನದಿ ಪಶ್ಚಿಮ ಬಂಗಾಳ ಏಪ್ರಿಲ್ 30 ಮತ್ತು ಮೇ 1 ರಂದು ಮಳೆಯಾಗುವ ಸಾಧ್ಯತೆ


ಇನ್ನು ದೆಹಲಿ-ಎನ್‌’ಸಿಆರ್‌’ನಲ್ಲಿ ಮತ್ತೊಮ್ಮೆ ಆಹ್ಲಾದಕರ ವಾರಾಂತ್ಯ ಪ್ರಾರಂಭವಾಗಿದೆ. ಹವಾಮಾನ ಇಲಾಖೆಯ ಪ್ರಕಾರ, ಏಪ್ರಿಲ್ 27 ರಿಂದ ಈ ಪ್ರದೇಶದಲ್ಲಿ ಪ್ರಾರಂಭವಾದ ಆಹ್ಲಾದಕರ ವಾತಾವರಣವು ಮೇ 3 ರವರೆಗೆ ಮುಂದುವರಿಯುತ್ತದೆ. ಈ ಸಮಯದಲ್ಲಿ, ಮಳೆ ಬೀಳುವ ಸಾಧ್ಯತೆ ಇದೆ. ನಿರಂತರ ಮೋಡ ಕವಿದ ಆಕಾಶ ಮತ್ತು ಸೀಮಿತ ಸೂರ್ಯನ ಬೆಳಕು ಇರುವ ಸಾಧ್ಯತೆ ಕೂಡ ಇದೆ.


ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಪ್ರಕಾರ, ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ, ಈ ಬಾರಿ ಏಪ್ರಿಲ್ ತಿಂಗಳು ಸಾಮಾನ್ಯವಾಗಿ ಶಾಂತವಾಗಿದೆ. ಈ ತಿಂಗಳಲ್ಲಿ, ಏಪ್ರಿಲ್ 15 ರಿಂದ 18 ರ ನಡುವೆ, ಹವಾಮಾನದ ತಾಪಮಾನವು 4 ದಿನಗಳವರೆಗೆ 40 ಡಿಗ್ರಿ ಸೆಲ್ಸಿಯಸ್ ದಾಟಿದೆ. ಇದು ಸಾಮಾನ್ಯ ತಾಪಮಾನಕ್ಕಿಂತ ಕಡಿಮೆಯಾಗಿದೆ.


ಈ ರಾಜ್ಯಗಳಲ್ಲಿ ಮಳೆ ಮುನ್ನೆಚ್ಚರಿಕೆ:


ಉತ್ತರಾಖಂಡದಲ್ಲಿ ಏಪ್ರಿಲ್ 29 ರಿಂದ ಮೇ 2 ರವರೆಗೆ, ರಾಜಸ್ಥಾನದಲ್ಲಿ ಏಪ್ರಿಲ್ 29 ರಿಂದ, ಯುಪಿ, ಹಿಮಾಚಲ ಪ್ರದೇಶ, ಪಂಜಾಬ್ ಮತ್ತು ಹರಿಯಾಣದಲ್ಲಿ ಮೇ 1 ರಿಂದ 2 ರವರೆಗೆ ಆಲಿಕಲ್ಲು ಮಳೆಯಾಗಬಹುದು. ಏಪ್ರಿಲ್ 30 ಮತ್ತು ಮೇ 1 ರ ನಡುವೆ ಜಾರ್ಖಂಡ್‌ನ ಹಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಏಪ್ರಿಲ್ 29 ಮತ್ತು ಮೇ 1 ರಂದು ಪಶ್ಚಿಮ ಬಂಗಾಳ, ಸಿಕ್ಕಿಂನಲ್ಲಿ ಮಳೆಯಾಗುವ ಸಾಧ್ಯತೆಗಳಿವೆ. ಏಪ್ರಿಲ್ 30 ರಂದು ಒಡಿಶಾದಲ್ಲಿ ಮಳೆಯಾಗಬಹುದು. ಇವುಗಳ ಜೊತೆಗೆ ತೆಲಂಗಾಣ, ತಮಿಳುನಾಡು, ಕರ್ನಾಟಕ (ಮಲೆನಾಡು, ಕರಾವಳಿ, ಕೊಡಗು) ಕೇರಳ ಮತ್ತು ಪುದುಚೇರಿಯಲ್ಲಿ ಮುಂದಿನ 5 ದಿನಗಳ ಕಾಲ ಮಳೆಯಾಗುವ ನಿರೀಕ್ಷೆಯಿದೆ.


ಇದನ್ನೂ ಓದಿ: "ಕುಸ್ತಿಪಟುಗಳು ಪ್ರತಿಭಟನೆಯನ್ನು ಹಿಂಪಡೆಯುವುದಾಗಿ ಭರವಸೆ ನೀಡಿದರೆ ರಾಜೀನಾಮೆ ನೀಡಲು ಸಿದ್ಧ"


ಏಜೆನ್ಸಿಯ ಪ್ರಕಾರ, ಏಪ್ರಿಲ್ 29 ಮತ್ತು 30 ರಂದು ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಮೇ 1 ಮತ್ತು 3 ರ ನಡುವೆ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3Lw