ಸಲಿಂಗ ವಿವಾಹ ವೈದಿಕ ಸಂಸ್ಕೃತಿ ವಿರುದ್ಧವಾಗಿದೆ : ಸಿಜೆಐಗೆ ಸ್ವಾಮಿ ಅವಧೇಶಾನಂದ ಬಹಿರಂಗ ಪತ್ರ 

ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸುವ ವಿಚಾರವಾಗಿ ಸ್ವಾಮಿ ಅವಧೇಶಾನಂದ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಕುರಿತಾಗಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರಿಗೆ ಬಹಿರಂಗ ಪತ್ರ ಬರೆದಿರುವ ಅವರು ಸಲಿಂಗ ವಿವಾಹ ವೈದಿಕ ಸಂಸ್ಕೃತಿಯ ವಿರುದ್ಧವಾಗಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Written by - Zee Kannada News Desk | Last Updated : Apr 28, 2023, 07:31 PM IST
  • ಇದು ನಮ್ಮ ವಿಷಯ.ಇದರಲ್ಲಿ ನ್ಯಾಯಾಲಯ ತಲೆ ಕೆಡಿಸಿಕೊಳ್ಳಬಾರದು
  • ಅಂತಹವರನ್ನು ಪ್ರಕೃತಿ ಶಿಕ್ಷಿಸುತ್ತದೆ ಎಂದು ನ್ಯಾಯಾಧೀಶರಿಗೆ ಹೇಳಬೇಕು
  • ನ್ಯಾಯಾಲಯದಿಂದ ಅಂತಹ ತೀರ್ಪು ಬಂದರೆ ಅದನ್ನು ಒಪ್ಪಿಕೊಳ್ಳುವ ಅಗತ್ಯವಿಲ್ಲ
ಸಲಿಂಗ ವಿವಾಹ ವೈದಿಕ ಸಂಸ್ಕೃತಿ ವಿರುದ್ಧವಾಗಿದೆ : ಸಿಜೆಐಗೆ ಸ್ವಾಮಿ ಅವಧೇಶಾನಂದ ಬಹಿರಂಗ ಪತ್ರ  title=
file photo

ನವದೆಹಲಿ: ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸುವ ವಿಚಾರವಾಗಿ ಸ್ವಾಮಿ ಅವಧೇಶಾನಂದ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಕುರಿತಾಗಿ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರಿಗೆ ಬಹಿರಂಗ ಪತ್ರ ಬರೆದಿರುವ ಅವರು ಸಲಿಂಗ ವಿವಾಹ ವೈದಿಕ ಸಂಸ್ಕೃತಿಯ ವಿರುದ್ಧವಾಗಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸುವ ವಿಚಾರಕ್ಕೆ ಕಳವಳ ವ್ಯಕ್ತಪಡಿಸುತ್ತಾ ಅವರು ಪತ್ರದಲ್ಲಿ, ಸಲಿಂಗ ವಿವಾಹವನ್ನು ಅನುಮತಿಸುವುದು ವೈದಿಕ ನಂಬಿಕೆಗಳು, ಭಾರತದ ಸಾಂಸ್ಕೃತಿಕ ಆಚರಣೆಗಳು ಮತ್ತು ಸಾಮಾಜಿಕ ಅಭಿವೃದ್ಧಿಯ ಅಡಿಪಾಯವನ್ನು ನಾಶಪಡಿಸುತ್ತದೆ ಎಂದು ಅವರು ವಾದಿಸಿದ್ದಾರೆ.

"ಭಾರತವು ಕೇವಲ 146 ಕೋಟಿ ಜನರ ದೇಶವಲ್ಲ, ಆದರೆ ಇದು ಪ್ರಾಚೀನ ವೈದಿಕ ಸನಾತನ ಧರ್ಮ-ಸಂಸ್ಕೃತಿ, ಸಂಪ್ರದಾಯ ಮತ್ತು ಪ್ರಾಚೀನ ಮಾನವ ಸಂವೇದನೆಗಳ ಪರಂಪರೆಯಾಗಿದೆ, ಅಲ್ಲಿ ಮದುವೆಯು ಅತ್ಯಂತ ಪವಿತ್ರ ಕಲ್ಯಾಣ ಆಚರಣೆಯಾಗಿದೆ; ಇದು ಕುಟುಂಬದ ಬೆಳವಣಿಗೆಯಲ್ಲಿ ಪುರುಷರು ಮತ್ತು ಮಹಿಳೆಯರನ್ನು ಸಂಯೋಜಿಸುತ್ತದೆ, ಕೌಟುಂಬಿಕ ಮೌಲ್ಯಗಳು ಮತ್ತು ಸಾಮಾಜಿಕ ಜವಾಬ್ದಾರಿಗಳ ಸಂರಕ್ಷಣೆಯನ್ನು ಹೊಂದಿರುತ್ತದೆ. ಆದ್ದರಿಂದ ಸಲಿಂಗಕಾಮಿ ವಿವಾಹದ ಕಾನೂನು ಮಾನವ ಅಸ್ತಿತ್ವಕ್ಕೆ ಹಾನಿಕಾರಕವೆಂದು ಸಾಬೀತುಪಡಿಸುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Karnataka Election 2023: ಯತ್ನಾಳರ ‘ವಿಷಕನ್ಯೆ’ ಹೇಳಿಕೆಗೆ ಪ್ರಧಾನಿ ಮೋದಿ ಒಪ್ಪಿಗೆ ಇರಬಹುದೇನೋ? ಕಾಂಗ್ರೆಸ್

ಸಲಿಂಗಕಾಮಿ ವಿವಾಹವನ್ನು ಕಾನೂನುಬದ್ಧಗೊಳಿಸುವುದು ದೈವಿಕ ವೈದಿಕ ನಂಬಿಕೆಗಳು, ಸಾಂಸ್ಕೃತಿಕ ಆಚರಣೆಗಳು ಮತ್ತು ಭಾರತ ದೇಶದ ಸಾಮಾಜಿಕ ಅಭಿವೃದ್ಧಿಯ ವಿವಿಧ ವಿಧಾನಗಳನ್ನು ನಾಶಪಡಿಸುವ ಮೂಲಕ ಮತ್ತು ಭಾರತದಂತಹ ದೇಶದಲ್ಲಿ ತೀವ್ರ ವೈಪರೀತ್ಯಗಳನ್ನು ಉಂಟುಮಾಡುವ ಮೂಲಕ ಮಾನವ ಅಸ್ತಿತ್ವಕ್ಕೆ ಹಾನಿಕಾರಕವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.ಸದ್ಯ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸ್ವಾಮಿ ಅವಧೇಶಾನಂದ ಅವರ ಪತ್ರ ಬಂದಿದೆ.

ಗುರುವಾರದಂದು ರಾಜಸ್ಥಾನದ ಹಿಂದೂ ಧರ್ಮದರ್ಶಿಯೊಬ್ಬರು ಸಲಿಂಗ ವಿವಾಹದ ಬಗೆಗಿನ ತೀರ್ಪು ಮಾನವೀಯತೆಯ ಮೇಲೆ ಕಳಂಕವಾಗಲಿದೆ ಎಂದು ಹೇಳಿದ್ದಾರೆ. ಇಂತಹ ತೀರ್ಪನ್ನು ದೇಶದ ಜನತೆ ಒಪ್ಪಿಕೊಳ್ಳಬಾರದು ಎಂದು ಆಗ್ರಹಿಸಿದ್ದರು.

"ಇದು ನಮ್ಮ ವಿಷಯ. ಇದರಲ್ಲಿ ನ್ಯಾಯಾಲಯ ತಲೆ ಕೆಡಿಸಿಕೊಳ್ಳಬಾರದು. ಅಂತಹವರನ್ನು ಪ್ರಕೃತಿ ಶಿಕ್ಷಿಸುತ್ತದೆ ಎಂದು ನ್ಯಾಯಾಧೀಶರಿಗೆ ಹೇಳಬೇಕು.ನ್ಯಾಯಾಲಯದಿಂದ ಅಂತಹ ತೀರ್ಪು ಬಂದರೆ ಅದನ್ನು ಒಪ್ಪಿಕೊಳ್ಳುವ ಅಗತ್ಯವಿಲ್ಲ" ಎಂದು ನಿಶ್ಚಲಾನಂದ ಸರಸ್ವತಿ, ಪುರಿಯ ಗೋವರ್ಧನ ಪೀಠದ 145ನೇ ಶಂಕರಾಚಾರ್ಯರು ಗೋಪೇಶ್ವರ ಮಹಾದೇವ ದೇವಸ್ಥಾನದಲ್ಲಿ ಗುರು ದೀಕ್ಷಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂ ಓದಿ: ದಲಿತರು, ಹಿಂದುಳಿದವರು ಭಿಕ್ಷುಕರೇ?: ಡಿಕೆಶಿ ಹೇಳಿಕೆಗೆ ಸಿಎಂ ಬೊಮ್ಮಾಯಿ ತಿರುಗೇಟು

ಇನ್ನೊಂದೆಡೆಗೆ ಸುಪ್ರೀಂಕೋರ್ಟ್ ಗುರುವಾರದಂದು ನಡೆದ ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ 'ಸಲಿಂಗ ಪಾಲುದಾರರ ಸಹಬಾಳ್ವೆಯ ಹಕ್ಕನ್ನು ಕೇಂದ್ರವು ಮೂಲಭೂತ ಹಕ್ಕಾಗಿ ಅಂಗೀಕರಿಸುವುದರಿಂದ ಅದರ ಸಾಮಾಜಿಕ ಪರಿಣಾಮಗಳನ್ನು ಗುರುತಿಸಲು ಅದರ ಮೇಲೆ ಅನುಗುಣವಾದ ಕರ್ತವ್ಯವನ್ನು ವಿಧಿಸುತ್ತದೆ.ಆದ್ದರಿಂದ ಈ ಹಿನ್ನೆಲ್ಲೆಯಲ್ಲಿ ಈಗ ಅವರ ವಿವಾಹವನ್ನು ಕಾನೂನುಬದ್ಧಗೊಳಿಸದೆ ಅವರಿಗೆ ಸಾಮಾಜಿಕ ಕಲ್ಯಾಣ ಸೌಲಭ್ಯಗಳನ್ನು ನೀಡಲು ಏನೆಲ್ಲಾ ಮಾಡಲು ಸಾಧ್ಯ ಎನ್ನುವುದನ್ನು ತಿಳಿಸಲು ಸರ್ಕಾರಕ್ಕೆ ಕೋರಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3Lw

 

 

Trending News