ನವದೆಹಲಿ:ಕರೋನಾ ವೈರಸ್ ಪ್ರಕೋಪದ ನಡುವೆ ಇದೀಗ ದೇಶದ ಉಷ್ಣಾಂಶ ಕೂಡ ಹೆಚ್ಚುತ್ತಿದೆ. ಭಾನುವಾರ, ರಾಷ್ಟ್ರ ರಾಜಧಾನಿ ದೆಹಲಿಯ ಹಲವು ಪ್ರದೇಶಗಳಲ್ಲಿ ಉಷ್ಣಾಂಶ 45 ರಿಂದ 45.6 ಡಿಗ್ರಿ ಸೆಲ್ಸಿಯಸ್ ತಲುಪಿದೆ. ರಾಜಸ್ಥಾನ, ಹರ್ಯಾಣಾ ಮತ್ತು ಪಂಜಾಬ್ ರಾಜ್ಯಗಳಲ್ಲಿಯೂ ಕೂಡ ಇದೆ ಪರಿಸ್ಥಿತಿ ಇದೆ. ಸದ್ಯ ಭಾರತೀಯ ಹವಾಮಾನ ಇಲಾಖೆ ಉತ್ತರ ಭಾರತದ ಒಟ್ಟು 5 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ರೆಡ್ ಅಲರ್ಟ್ ಜಾರಿಗೊಳಿಸಿದೆ. ಈ ರೆಡ್ ಅಲರ್ಟ್ ಮೇ 25 ಮತ್ತು ಮೇ 26 ಕ್ಕೆ ಮಾತ್ರ ಸೀಮಿತವಾಗಿದೆ. ಈ ಅವಧಿಯಲ್ಲಿ ಈ ಪ್ರದೇಶಗಳಲ್ಲಿನ ಜನರು ಅನಾವಶ್ಯಕವಾಗಿ ಮನೆಯಿಂದ ಹೊರಬೀಳಬಾರದು ಎಂದು ಇಲಾಖೆ ಹೇಳಿದೆ. ಏಕೆಂದರೆ ಈ ಪ್ರದೇಶಗಳಲ್ಲಿ ಪಾದರಸ 47 ಡಿಗ್ರಿ ಮಟ್ಟ ದಾಟುವ ಸಾಧ್ಯತೆ ಇದೆ ಇಂದು ಇಲಾಖೆ ಮುನ್ಸೂಚನೆ ನೀಡಿದೆ.


COMMERCIAL BREAK
SCROLL TO CONTINUE READING

ಈ 5 ರಾಜ್ಯಗಳಲ್ಲಿ ರೆಡ್ ಅಲರ್ಟ್ ಘೋಷಣೆ 
ದೆಹಲಿ, ರಾಜಸ್ಥಾನ, ಹರಿಯಾಣ, ಪಂಜಾಬ್ ರಾಜ್ಯಗಳಲ್ಲಿ ಐಎಂಡಿ ರೆಡ್ ಅಲರ್ಟ್ ಘೋಷಿಸಿದೆ. ಏಕೆಂದರೆ ಈ ಪ್ರದೇಶಗಳಲ್ಲಿ ತಾಪಮಾನ ಹೆಚ್ಚುವ ಅಪಾಯವಿದ್ದು, ಉಷ್ಣಾಂಶದ ಹೊಡೆತದಿಂದ ಪಾರಾಗುವ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಿದೆ. ಅಲ್ಲದೆ ಜನರು ಅನಗತ್ಯವವಾಗಿ ಮನೆಯಿಂದ ಹೊರಬೀಳಬಾರದು ಎಂದು ಇಲಾಖೆ ಹೇಳಿದೆ.


ಮುಂಬರುವ ಎರಡು-ಮೂರು ದಿನಗಳಲ್ಲಿ ರಾಷ್ಟ್ರ ರಾಜಧಾನಿ ದೆಹಲಿ ಮತ್ತು NCR ಪ್ರಾಂತ್ಯದಲ್ಲಿ ಉಷ್ಮಾಂಶ 47ರ ಗಡಿ ದಾಟುತ್ತಿದ್ದು, ಇದೆ ಮೊದಲ ಬಾರಿಗೆ ಬೇಸಿಗೆಯಲ್ಲಿ ಬಿಸಿ ಗಾಳಿ ಬೀಸುವ ಕುರಿತು ರೆಡ್ ಅಲರ್ಟ್ ಘೋಷಿಸಲಾಗಿದೆ. ಪೂರ್ವ ಉತ್ತರ ಪ್ರದೇಶದಲ್ಲಿ IMD ಆರೆಂಜ್ ಅಲರ್ಟ್ ಜಾರಿಗೊಳಿಸಿದೆ. ಅಷ್ಟೇ ಅಲ್ಲ ಮೇ 28ರ ಬಳಿಕ ಮಾತ್ರ ಉಷ್ಣಾಂಶದಿಂದ ಕೊಂಚ ನೆಮ್ಮದಿ ಸಿಗುವ ಸಾಧ್ಯತೆ ಇದ್ದು, ಪಾಶ್ಚಿಮಾತ್ಯದ ಏರುಪೇರಿನಿಂದಾಗಿ ಲಘು ಮಳೆಯ ಸಿಂಚನ ಆಗುವ ಸಾಧ್ಯತೆ ಇದೆ.


ಈ ಪ್ರದೇಶಗಳಲ್ಲಿ ಬಿಸಿ ಗಾಳಿ ಬೀಸಲಿದೆ
ಮೇ 27ರವರೆಗೆ ಇಲಾಖೆ ನೀಡಿರುವ ಮುನ್ಸೂಚನೆಯ ಪ್ರಕಾರ, ರಾಜಸ್ಥಾನ, ದೆಹಲಿ, ಹರ್ಯಾಣಾ, ಪಂಜಾಬ್, ಮಧ್ಯ ಪ್ರದೇಶ, ಪಶ್ಚಿಮ ಉತ್ತರ ಪ್ರದೇಶ, ವಿದರ್ಭ ಮತ್ತು ತೆಲಂಗಾಣದ ಹಲವು ಪ್ರದೇಶಗಳಲ್ಲಿ ಬಿಸಿ ಗಾಳಿ ಮುಂದುವರೆಯಲಿದೆ.ಜೂನ್ 26 ರವರೆಗೆ ಚತ್ತೀಸ್ಗಡ್, ಓಡಿಷಾ, ಗುಜರಾತ್, ಮಧ್ಯ ಮಹಾರಾಷ್ಟ್ರ, ಕರಾವಳಿ ಆಂಧ್ರಪ್ರದೇಶದಲ್ಲಿ ಬೆಚ್ಚನೆಯ ಗಾಳಿಯ ಮುನ್ಸೂಚನೆಯನ್ನು ಜಾರಿಗೊಳಿಸಲಾಗಿದೆ.


ದೇಶದ ಒಟ್ಟು 10 ಉಷ್ಣ ಪ್ರದೇಶಗಳು
ಹವಾಮಾನ ವೈಪರೀತ್ಯದ ಅಂದಾಜುಗಳನ್ನೂ ಪ್ರಕಟಿಸುವ ಸ್ಕೈಮೇಟ್ ವೆಬ್ಸೈಟ್ ನೀಡಿರುವ ವರದಿಯ ಪ್ರಕಾರ ಮೇ 24 ರಂದು ದೇಶದ ಈ 10 ಸ್ಥಳಗಳಲ್ಲಿ ಅತಿ ಹೆಚ್ಚು ಉಷ್ಣಾಂಶ ಇರಲಿದೆ



ಹವಾಮಾನದ ಬಗ್ಗೆ ಅಂದಾಜು ನೀಡುವ ಸ್ಕೈಮೆಟ್‌ನ ವೆಬ್‌ಸೈಟ್‌ನ ಪ್ರಕಾರ, ಮೇ 24 ರಂದು ಈ 10 ಸ್ಥಳಗಳು ದೇಶದ ಅತಿ ಹೆಚ್ಚು ಸ್ಥಳಗಳಾಗಿವೆ.


  • ಪಿಲಾನಿ (ರಾಜಸ್ಥಾನ): 46.7 ಡಿಗ್ರಿ ಸಿ

  • ಚುರು (ರಾಜಸ್ಥಾನ): 46.6 ಡಿಗ್ರಿ ಸಿ

  • ನಾಗ್ಪುರ (ಮಹಾರಾಷ್ಟ್ರ): 46.5 ಡಿಗ್ರಿ ಸಿ

  • ಹಿಸಾರ್ (ಹರಿಯಾಣ): 46.1 ಡಿಗ್ರಿ ಸಿ

  • ಝಾನ್ಸಿ  (ಉತ್ತರ ಪ್ರದೇಶ): 46.1 ಡಿಗ್ರಿ ಸಿ

  • ನೌಗಾಂಗ್ (ಮಧ್ಯಪ್ರದೇಶ): 46.1 ಡಿಗ್ರಿ ಸಿ

  • ಅಕೋಲಾ (ಮಹಾರಾಷ್ಟ್ರ): 46.0 ಡಿಗ್ರಿ ಸಿ

  • ಖಜುರಾಹೊ (ಮಧ್ಯಪ್ರದೇಶ): 46.0 ಡಿಗ್ರಿ ಸಿ

  • ಗ್ವಾಲಿಯರ್ (ಮಧ್ಯಪ್ರದೇಶ): 45.9 ಡಿಗ್ರಿ ಸಿ

  • ಕೋಟಾ (ರಾಜಸ್ಥಾನ): 45.9 ಡಿಗ್ರಿ ಸಿ