Weather Updates:ಮುಂಬರುವ ಕೆಲ ದಿನಗಳಲ್ಲಿ ಉತ್ತರ ಭಾರತದಲ್ಲಿ ಭೀಕರ ಚಳಿಯ ಅಲೆಗಳು ಏಳುವ ಸಾಧ್ಯತೆ ಇದ್ದು, ಇಂತಹ ಸಂದರ್ಭದಲ್ಲಿ ಮನೆಯಲ್ಲಿಯೇ ಕುಳಿತು ಅಥವಾ ನೂತನ ವರ್ಷಾಚರಣೆಯ ಔತಣಕೂಟಗಳಲ್ಲಿ ಮದ್ಯ ಸೇವನೆ ಆರೋಗ್ಯಕ್ಕೆ ಭಾರಿ ಹಾನಿಯುಂಟು ಮಾಡಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಸುದ್ದಿ ಸಂಸ್ಥೆ ಪಿಟಿಐನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಡಿಸೆಂಬರ್ 28 ರಿಂದ ಪಂಜಾಬ್, ಹರಿಯಾಣಾ, ದೆಹಲಿ, ಉತ್ತರಪ್ರದೇಶ ಹಾಗೂ ಉತ್ತರ ರಾಜಸ್ಥಾನಗಳಲ್ಲಿ ಭೀಕರ ಶೀತ ಅಲೆಗಳು ಏಳುವ ಸಾಧ್ಯತೆ ಇದ್ದು, ಈ ಅವಧಿಯಲ್ಲಿ  ಫ್ಲೂ, ಶೀತ, ಮೂಗಿನಿಂದ ರಕ್ತಸ್ರಾವಗಳಂತಹ ಸಮಸ್ಯೆಗಳು ಹುಟ್ಟುವ ಸಾಧ್ಯತೆ ಇದೆ ಎಂದು ಇಲಾಖೆ ಹೇಳಿದೆ. ಈಗಾಗಲೇ ಇಂತಹ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಹೆಚ್ಚಿನ ತೊಂದರೆ ಎದುರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಚಳಿಯಲ್ಲಿ ಮದ್ಯ ಸೇವನೆಯ ಪರಿಣಾಮ
ಈ ಕುರಿತು ಸಲಹೆ ಹೀದಿರುವ ಇಲಾಖೆ ಈ ಅವಧಿಯಲ್ಲಿ ಮದ್ಯಪಾನದಿಂದ ದೂರ ಉಳಿಯಬೇಕು ಎಂದಿದ್ದು, ಮದ್ಯ ಸೇವನೆಯಿಂದ ಶರೀರದ ತಾಪಮಾನ ಇಳಿಕೆಯಾಗುತ್ತದೆ ಎಂದು ಹೇಳಿದೆ. ಹೀಗಾಗಿ ಆದಷ್ಟು ಮನೆಯಲ್ಲಿಯೇ ಇದ್ದು, ವಿಟಮಿನ್ ಸಿ ಹೊಂದಿರುವ ಹಣ್ಣುಗಳನ್ನು ಸೇವಿಸಿ ಎಂದು ಸಲಹೆ ನೀಡಿದೆ. ನಿಮ್ಮ ತ್ವಚೆಯನ್ನು ಆದಷ್ಟು ಮೃದುವಾಗಿರಿಸಿ ಚಳಿಯಿಂದ ಪಾರಾಗಿ. ಈ ಬಗ್ಗೆ ಹೇಳಿಕೆ ನೀಡಿರುವ ಹವಾಮಾನ ಇಲಾಖೆಯ ಪ್ರಾದೇಶಿಕ ಕೇಂದ್ರದ ಮುಖ್ಯಸ್ಥ ಕುಲದೀಪ್ ಶ್ರೀವಾಸ್ತವ್, ಹಿಮಾಲಯದ ಮೇಲ್ಭಾಗದಲ್ಲಿ ಉದ್ಭವಿಸಿರುವ ತಾಜಾ ಪಾಶ್ಚಿಮಾತ್ಯ ಅಡೆತಡೆಯಿಂದಾಗಿ ಭಾನುವಾರ ಮತ್ತು ಸೋಮವಾರ ತಾಪಮಾನದಲ್ಲಿ ಸ್ವಲ್ಪ ಹೆಚ್ಚಳವಾಗಲಿದ್ದು, ಈ ಪರಿಹಾರ ಕೇವಲ ಅಲ್ಪಾವಧಿಗಾಗಿ ಮಾತ್ರ ಇರಲಿದೆ ಎಂದು ಹೇಳಿದ್ದಾರೆ.


ಇದನ್ನು ಓದಿ- ರಾಜ್ಯದ ಜನರೇ ಎಚ್ಚರ! ಇನ್ನೂ ಒಂದು ತಿಂಗಳು ರಾಜ್ಯದಲ್ಲಿ ಮೈ ಕೊರೆಯುವ ಚಳಿ!


ಈ ರಾಜ್ಯಗಳಲ್ಲಿ ಹಿಮವೃಷ್ಟಿ ಸಾಧ್ಯತೆ
ಪಾಶ್ಚಿಮಾತ್ಯ ಅಸ್ತವ್ಯಸ್ತತೆಯಿಂದಾಗಿ ಜಮ್ಮು ಮತ್ತು ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಹಿಮಪಾತ ಉಂಟಾಗುವ ಸಾಧ್ಯತೆ ಇದೆ. ಈ ಅಡಚಣೆ ದೂರಾದ ಬಳಿಕ , ಪಶ್ಚಿಮ ಹಿಮಾಲಯದಿಂದ ಶೀತ ಮತ್ತು ಶುಷ್ಕ ಪಶ್ಚಿಮ ಗಾಳಿ ಬೀಸಲಿದೆ. ಇದು ಉತ್ತರ ಭಾರತದಲ್ಲಿ ಕನಿಷ್ಠ ತಾಪಮಾನ ಕುಸಿಯಲು ಕಾರಣವಾಗುತ್ತದೆ ಮತ್ತು ಇದು ಮೂರರಿಂದ ಐದು ಡಿಗ್ರಿ ಸೆಲ್ಸಿಯಸ್ ನಡುವೆ ತಾಪಮಾನ ಇರಲಿದೆ ಎಂದು ಹವಾಮಾನ ಇಲಾಖೆ  (IMD) ಹೇಳಿದೆ.


ಇದನ್ನು ಓದಿ-GOOGLE ನಿಂದ ಹೊಸ ಸೇವೆ ಪರಿಚಯ, 6 ಗಂಟೆ ಮುಂಚಿತವಾಗಿ ಸಿಗಲಿದೆ ALERT


ಚಳಿಯಲ್ಲಿ ಏರಿಕೆ
ಉತ್ತರ ಭಾರತದ ಹೆಚ್ಚಿನ ರಾಜ್ಯಗಳಲ್ಲಿ ಚಳಿಯಿಂದ ದೊರೆತ ಪರಿಹಾರದ ಬಳಿಕ ಇದೀಗ ಮತ್ತೊಮ್ಮೆ ಚಳಿ ಹೆಚ್ಚಾಗತೊಡಗಿದೆ. ಡಿಸೆಂಬರ್ 25 ರಂದು ದೆಹಲಿ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಹರಿಯಾಣ ಮತ್ತು ಉತ್ತರಾಖಂಡದಲ್ಲಿ ಚಳಿ ಮತ್ತೆ ಹೆಚ್ಚಾಗತೊಡಗಿದೆ. ದೆಹಲಿಯ ಸಫ್ದರ್ಜಂಗ್ ನಲ್ಲಿ ಶುಕ್ರವಾರ ಕನಿಷ್ಠ 4.6 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ದಾಖಲಿಸಲಾಗಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ಹಿಮಪಾತ ಮತ್ತು ಈಶಾನ್ಯದಿಂದ ಬರುವ ಗಾಳಿಯಿಂದಾಗಿ, ಚಳಿ ಮತ್ತೆ ತನ್ನ ಹಿಡಿತ ಸಾಧಿಸಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.