ಬೆಂಗಳೂರು: ರಾಜ್ಯದಲ್ಲಿ ಇನ್ನೂ ಒಂದು ತಿಂಗಳು ಭೀಕರ ಚಳಿ ಕಾಡುವ ಸೂಚನೆ ಇದೆ. ಇತ್ತೀಚಿಗೆ ಕಾಣಿಸಿಕೊಂಡಿದ್ದ ಚಂಡಮಾರುತಗಳೂ ಕೂಡ ಇದಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ.
ಹವಾಮಾನ ಇಲಾಖೆ ನೀಡಿರುವ ಡಿಸೆಂಬರ್‌ನಿಂದ ಫೆಬ್ರವರಿವರೆಗಿನ ಚಳಿಗಾಲದ ಮುನ್ಸೂಚನೆಯಲ್ಲಿ ರಾಜ್ಯದಲ್ಲಿ ಇನ್ನೂ ಒಂದು ತಿಂಗಳು ಚಳಿಯ ತೀವ್ರತೆ ಹೆಚ್ಚಾಗಲಿದೆ ಎಂದು ಮಾಹಿತಿ ನೀಡಿದೆ.
ಇತ್ತೀಚಿಗೆ ಕಾಣಿಸಿಕೊಂಡಿದ್ದ ಬುರೇವಿ ಚಂಡಮಾರುತದ (Burevi Cyclone) ಪ್ರಭಾವದಿಂದಾಗಿ ಕಳೆದ ವಾರ ರಾಜ್ಯದಲ್ಲಿ ಮೋಡದ ವಾತಾವರಣ ಕಂಡು ಬಂದಿತ್ತು. ರಾಜ್ಯದ ಹಲವೆಡೆ ಮಳೆಯಾಗಿತ್ತು. ಆ ಸಂದರ್ಭದಲ್ಲಿ ಚಳಿ ವಾಡಿಕೆಗಿಂತ ಕೊಂಚ ಕಡಿಮೆಯೇ ಇತ್ತು. ಇದೀಗ ರಾಜ್ಯದಲ್ಲಿ ಒಣಹವೆ ಮುಂದುವರೆಯಲ್ಲಿದ್ದು ಚಳಿಯ ಪ್ರಮಾಣವೂ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಚಳಿಗಾಲದಲ್ಲಿ ತಪ್ಪದೇ ಈ 5 ಹಣ್ಣುಗಳನ್ನು ಸೇವಿಸಿ, ಪಡೆಯಿರಿ ಈ ಆರೋಗ್ಯಕರ ಪ್ರಯೋಜನ
ಈ ವರ್ಷ ಮಳೆಯ ಪ್ರಮಾಣ ಸಾಮಾನ್ಯಕ್ಕಿಂತ ಹೆಚ್ಚಾಗಿತ್ತಲ್ಲದೇ ಈ ತಿಂಗಳ ಮೊದಲ ವಾರದವರೆಗೂ ಮಳೆಯಾಗಿದೆ. ಇದರ ಪರಿಣಾಮ ನವೆಂಬರ್ ತಿಂಗಳಲ್ಲಿ ಚಳಿ (Winter) ಪ್ರಮಾಣ ನಿರೀಕ್ಷೆಗಿಂತಲೂ ಕಡಿಮೆ ಇತ್ತು ಐಎಂಡಿ ತಿಳಿಸಿದೆ.
Health Benefits of Guava: ಚಳಿಗಾಲದಲ್ಲಿ ಸೀಬೆಹಣ್ಣನ್ನು ಸೇವಿಸಿ ಈ ರೋಗಗಳಿಂದ ದೂರವಿರಿ
ಈಗಾಗಲೇ ರಾಜ್ಯದ ಬಹುತೇಕ ಭಾಗಗಳಲ್ಲಿ ಚಳಿ ಹೆಚ್ಚಾಗಿದ್ದು ಸಂಕ್ರಾಂತಿವರೆಗೂ ಕೊರೆಯುವ ಚಳಿ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.