Mamata Banarjee Statement : ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚೆಗಷ್ಟೇ ಆರ್‌ಎಸ್‌ಎಸ್ ಅನ್ನು ಹೊಗಳಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು. ಆದರೆ ಇದೀಗ ಮಮತಾ ದಿದಿ ಅವರು ಕೇಂದ್ರೀಯ ಸಂಸ್ಥೆಗಳ ದುರ್ಬಳಕೆ ಕುರಿತು ಪ್ರಧಾನಿ ಮೋದಿಯನ್ನು ಪಾತ್ರವನ್ನು ಸಮರ್ಥಿಸಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ವಾಸ್ತವದಲ್ಲಿ, ಕೇಂದ್ರೀಯ ಸಂಸ್ಥೆಗಳ ದುರುಪಯೋಗದ ವಿರುದ್ಧ ತಂದ ನಿರ್ಣಯದ ಸಂದರ್ಭದಲ್ಲಿ ಸಿಎಂ ಮಮತಾ ಬ್ಯಾನರ್ಜಿ ವಿಧಾನಸಭೆಯಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸುತ್ತಿದ್ದರು. ಇದರ ಹಿಂದೆ ಪ್ರಧಾನಿ ಮೋದಿ ಕೈವಾಡವಿದೆ ಎಂದು ಭಾವಿಸುವುದಿಲ್ಲ ಎಂದು ಅವರು ಹೇಳಿದ್ದರು.


ಮಮತಾ ಅವರ ಈ ಹೇಳಿಕೆಗೆ ಇದೀಗ ಹಲವು ರಾಜಕೀಯ ಅರ್ಥಗಳನ್ನು ಕಲ್ಪಿಸಲಾಗುತ್ತಿದೆ.  ಒಂದೆಡೆ ಲೋಕಸಭೆ ಚುನಾವಣೆಯಲ್ಲಿ ಪ್ರತಿಪಕ್ಷಗಳ ಒಗ್ಗಟ್ಟಿನ ಮಾತು ಕೇಳಿಬರುತ್ತಿದ್ದರೆ, ಮತ್ತೊಂದೆಡೆ ಬಿಜೆಪಿಯ ಕಟ್ಟಾ ಎದುರಾಳಿ ಮಮತಾ ಬ್ಯಾನರ್ಜಿ ಅವರ ಮಾತು ಬದಲಾಗಿರುವುದು ಇದೀಗ ಹಲುವು ಊಹಾಪೋಹಗಳಿಗೆ ಎಡೆಮಾಡಿಕೊಡುತ್ತಿದೆ.


ತಮ್ಮ ಭಾಷಣದಲ್ಲಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದರೂ ಕೂಡ ಮಮತಾ ದಿದಿ  ಕೇಂದ್ರೀಯ ಸಂಸ್ಥೆಗಳ ದುರುಪಯೋಗದ ವಿಚಾರದಲ್ಲಿ ಅವರು ಪ್ರಧಾನಿ ಮೋದಿಯವರನ್ನು ಸಮರ್ಥಿಸುತ್ತಿದ್ದರೆ, ಅವರು ಯಾರನ್ನು ದೂಷಿಸುತ್ತಿದ್ದಾರೆ ಎಂಬುದು ತನ್ನಷ್ಟಕ್ಕೆ ತಾನೇ ದೊಡ್ಡ ಪ್ರಶ್ನೆಯಾಗಿ ಉಳಿದಿದೆ.


ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಮಮತಾ ಬ್ಯಾನರ್ಜಿ, 'ಪ್ರಧಾನಿ ಮೋದಿ ಸಿಬಿಐ, ಇಡಿ ದುರ್ಬಳಕೆ ಮಾಡುತ್ತಿದ್ದಾರೆ ಎಂದು ನಾನು ಭಾವಿಸುವುದಿಲ್ಲ, ಆದರೆ ಕೆಲವು ಬಿಜೆಪಿ ನಾಯಕರು ತಮ್ಮ ರಾಜಕೀಯ ಹಿತಾಸಕ್ತಿಗಳಿಗಾಗಿ ಇದನ್ನು ಮಾಡುತ್ತಿದ್ದಾರೆ. ಸರ್ಕಾರ ಮತ್ತು ಪಕ್ಷದ ಕಾರ್ಯವೈಖರಿಯನ್ನು ಪ್ರತ್ಯೇಕವಾಗಿ ಇರಿಸುವಂತೆ ನಾನು ಪ್ರಧಾನಿ ಮೋದಿಯವರನ್ನು ಒತ್ತಾಯಿಸುತ್ತೇನೆ, ಅದು ದೇಶಕ್ಕೆ ಒಳ್ಳೆಯದಲ್ಲ' ಎಂದಿದ್ದರು.


ಇದಕ್ಕೂ ಮುನ್ನ ಕೋಲ್ಕತ್ತಾದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಅನ್ನು ಹೊಗಳಿದ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, 'ಆರ್‌ಎಸ್‌ಎಸ್‌ನಲ್ಲಿ ಎಲ್ಲರೂ ಕೆಟ್ಟವರಲ್ಲ ಮತ್ತು ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸದ ಅನೇಕ ಜನರಿದ್ದಾರೆ' ಎಂದು ಹೇಳಿದ್ದರು. ಆರ್‌ಎಸ್‌ಎಸ್ ಅಷ್ಟೊಂದು ಕೆಟ್ಟದ್ದಲ್ಲ... ಬಿಜೆಪಿಯಂತೆ ಯೋಚಿಸದ ಹಲವರು ಇನ್ನೂ ಸಂಘದಲ್ಲಿದ್ದಾರೆ. ಬಿಜೆಪಿಯ ರಾಜಕಾರಣವನ್ನು ಒಪ್ಪಿಕೊಳ್ಳದ ಜನ ಸಂಘದಲ್ಲಿದ್ದಾರೆ ಎಂದಿದ್ದರು.


ಈ ಹೇಳಿಕೆಯ ನಂತರ ಮಮತಾ ಬ್ಯಾನರ್ಜಿ ಹಲವು ವಿರೋಧ ಪಕ್ಷದ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಮಮತಾ ಬ್ಯಾನರ್ಜಿ ಅವರಿಗೆ ಅವರು 2003 ರಲ್ಲಿ ನೀಡಿದ ಹೇಳಿಕೆಯನ್ನು ನೆನಪಿಸಿದ್ದಾರೆ.


2003ರಲ್ಲಿ ಮಮತಾ ಆರ್‌ಎಸ್‌ಎಸ್ ಅನ್ನು ದೇಶಭಕ್ತ ಎಂದು ಕರೆದಿದ್ದರು ಎಂದು ಓವೈಸಿ ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಆರೆಸ್ಸೆಸ್ ನಾಯಕರು ಆಕೆಯನ್ನು ‘ದುರ್ಗಾ’ ಎಂದು ಕರೆದಿದ್ದರು. ಆರ್‌ಎಸ್‌ಎಸ್‌ಗೆ ಹಿಂದೂ ರಾಷ್ಟ್ರ ಬೇಕು. ಆರ್‌ಎಸ್‌ಎಸ್‌ಗೆ ಮುಸ್ಲಿಮರ ದ್ವೇಷದ ಇತಿಹಾಸವಿದೆ. ಗುಜರಾತ್ ಗಲಭೆಯ ನಂತರ ಮಮತಾ ಅವರು ಸಂಸತ್ತಿನಲ್ಲಿ ಬಿಜೆಪಿ ಸರ್ಕಾರವನ್ನು ಸಮರ್ಥಿಸಿಕೊಂಡಿದ್ದರು. ಟಿಎಂಸಿಯ ಮುಸ್ಲಿಂ ಮುಖಗಳು ಅವರ ಪ್ರಾಮಾಣಿಕತೆ ಮತ್ತು ಸ್ಥಿರತೆಯನ್ನು ಮೆಚ್ಚುತ್ತವೆ ಎಂದು ಭಾವಿಸುತ್ತೇವೆ.


ಮಮತಾ ಅವರ ಈ ಹೇಳಿಕೆಗೆ ಕಾಂಗ್ರೆಸ್ ಕೂಡ ಟಿಎಂಸಿಯನ್ನು ಸುತ್ತುವರೆಯಲು ಹಿಂದಕ್ಕೆ ಬೀಳುತ್ತಿಲ್ಲ. ಮಮತಾ ಮತ್ತೊಮ್ಮೆ ತಮ್ಮ ನಿಜವಾದ ಬಣ್ಣ ಬಯಲು ಮಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ. ಅವಳು ಕೆಲವೊಮ್ಮೆ ಹಿಂದೂ ಮೂಲಭೂತವಾದಿಗಳನ್ನು ಮತ್ತು ಕೆಲವೊಮ್ಮೆ ಮುಸ್ಲಿಮರನ್ನು ಮತಕ್ಕಾಗಿ ಓಲೈಸುತ್ತಾಳೆ ಎಂದು ಹೇಳಿದ್ದಾರೆ. ಮಮತಾ ಬ್ಯಾನರ್ಜಿ ಆರೆಸ್ಸೆಸ್ ಜೊತೆ ನಂಟು ಹೊಂದಿರುವುದು ಇದರಿಂದ ಸಾಬೀತಾಗುತ್ತದೆ ಎಂದು ಪಶ್ಚಿಮ ಬಂಗಾಳದ ಸಿಪಿಐ(ಎಂ) ಪಕ್ಷದ ನಾಯಕ ಸುಜನ್ ಚಕ್ರವರ್ತಿ ಹೇಳಿದ್ದಾರೆ.


ಇದನ್ನೂ ಓದಿ-Big News: ಮುಂದಿನ ಕಾಂಗ್ರೆಸ್ ಅಧ್ಯಕ್ಷ ಗಾಂಧಿ ಕುಟುಂಬ ಸದಸ್ಯನಾಗಿರುವುದಿಲ್ಲ! ಸೋನಿಯಾ ಘೋಷಣೆ!


ಮಮತಾ ಬ್ಯಾನರ್ಜಿ ಮನಸ್ಸಿನಲ್ಲಿ ನಡೆಯುತ್ತಿರುವುದು ಏನು?
ರಾಜಕೀಯದಲ್ಲಿ ಶಾಶ್ವತ ಮಿತ್ರ ಅಥವಾ ಶತ್ರು ಇರುವುದಿಲ್ಲ ಎಂಬ ಸಂಗತಿ ಎಲ್ಲರಿಗೂ ತಿಳಿದೇ ಇದೆ. ಅದರಲ್ಲಿಯೂ ವಿಶೇಷವಾಗಿ ಭಾರತದ ರಾಜಕೀಯದಲ್ಲಿ ಇದು ಸಾಮಾನ್ಯ ಸಂಗತಿ. ಇದಕ್ಕೆ ದೊಡ್ಡ ಉದಾಹರಣೆ ಬಿಹಾರದಲ್ಲಿ ನಡೆದ ಇತ್ತೀಚಿನ ಘಟನೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರ ಟಿಎಂಸಿಯ ಪ್ರಮುಖ ಪ್ರತಿಸ್ಪರ್ಧಿ ಪಕ್ಷ ಈಗ ಬಿಜೆಪಿಯಾಗಿದೆ.


ಇದನ್ನೂ ಓದಿ-Asaduddin Owaisi: ಹೈದರಾಬಾದ್ ಹೊರತುಪಡಿಸಿದರೆ ಭಾರತ ಅಪೂರ್ಣ, ಅಮಿತ್ ಶಾಗೆ ಒವೈಸಿ ತಿರುಗೇಟು


ಲೋಕಸಭೆ ಚುನಾವಣೆಯಿಂದ ವಿಧಾನಸಭೆ ಚುನಾವಣೆವರೆಗೆ ಬಿಜೆಪಿ ಟಿಎಂಸಿಯ ನಂತರ ಎರಡನೇ ಸ್ಥಾನದಲ್ಲಿದೆ. ಎಡಪಕ್ಷ ಮತ್ತು ಕಾಂಗ್ರೆಸ್ ಒಟ್ಟಿಗೆ ಎಲ್ಲಿಯೂ ಉಳಿದಿಲ್ಲ. ಹಾಗಾದರೆ ಮಮತಾ ಬ್ಯಾನರ್ಜಿ ಅವರು ಆರ್‌ಎಸ್‌ಎಸ್-ಪ್ರಧಾನಿ ಮೋದಿಯವರ ಬಗ್ಗೆ ಏಕಾಏಕಿ ಏಕೆ ಮೃದು ಧೋರಣೆ ತಳೆಯುತ್ತಿದ್ದಾರೆ ಎಂಬ ಚರ್ಚೆಗಳು ಇದೀಗ ರಾಜಕೀಯ ಅಂಗಳದಲ್ಲಿ ವೇಗಪಡೆದುಕೊಳ್ಳುತ್ತಿರುವುದು ಮಾತ್ರ ನಿಜ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.