West Bengal ಸಿಎಂ ಮಮತಾ ಬ್ಯಾನರ್ಜಿ ಸಹೋದರ ಕರೋನಾಗೆ ಬಲಿ
ಸಿಎಂ ಮಮತಾ ಬ್ಯಾನರ್ಜಿಯ ಕಿರಿಯ ಸಹೋದರ ಅಶಿಮ್ ಬ್ಯಾನರ್ಜಿಯವರ ಮರಣದಿಂದಾಗಿ ಬ್ಯಾನರ್ಜಿ ಕುಟುಂಬದಲ್ಲಿ ದುಃಖದ ವಾತಾವರಣ ಮನೆಮಾಡಿದೆ.
ಕೋಲ್ಕತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಕಿರಿಯ ಸಹೋದರ ಆಶಿಮ್ ಬ್ಯಾನರ್ಜಿ ಇಂದು ಕೊನೆಯುಸಿರೆಳೆದಿದ್ದಾರೆ. ಕೊರೊನಾವೈರಸ್ ನಿಂದಾಗಿ ಆಶಿಮ್ ಬ್ಯಾನರ್ಜಿ ಅವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.
ಆಸ್ಪತ್ರೆಯಿಂದ ಆಶಿಮ್ ಬ್ಯಾನರ್ಜಿಯವರ ಪಾರ್ಥೀವ ಶರೀರವನ್ನು ಪಡೆದ ನಂತರ, ಕೋವಿಡ್ ಮಾರ್ಗಸೂಚಿಗಳ (Covid Guidelines) ಅಡಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಮಾಹಿತಿ ಲಭ್ಯವಾಗಿದೆ. ಸಿಎಂ ಮಮತಾ ಬ್ಯಾನರ್ಜಿಯ ಕಿರಿಯ ಸಹೋದರ ಅಶಿಮ್ ಬ್ಯಾನರ್ಜಿಯವರ ಮರಣದಿಂದಾಗಿ ಬ್ಯಾನರ್ಜಿ ಕುಟುಂಬದಲ್ಲಿ ದುಃಖದ ವಾತಾವರಣ ಮನೆಮಾಡಿದೆ.
ಇದನ್ನೂ ಓದಿ- Corona ರೋಗಿಗಳಿಗೆ 'ಆಮ್ಲಜನಕ'ವಾಗಿ ಕಾರ್ಯನಿರ್ವಹಿಸಲಿದೆ DRDO ಡ್ರಗ್
ದೇಶಾದ್ಯಂತ ಕರೋನಾ ಹಾವಳಿ:
ದೇಶಾದ್ಯಂತ ಕರೋನಾವೈರಸ್ (Coronavirus) ಅಟ್ಟಹಾಸ ಕಡಿಮೆಯಾಗುತ್ತಿಲ್ಲ. ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ, ದೇಶಾದ್ಯಂತ ಹೊಸ 3,26,098 ಕರೋನಾ ಪ್ರಕರಣಗಳು ವರದಿಯಾಗಿದ್ದರೆ, ವೈರಸ್‌ನಿಂದ 3,890 ಜನರು ಸಾವನ್ನಪ್ಪಿದ್ದಾರೆ. ಇದೇ ವೇಳೆ 3,53,299 ರೋಗಿಗಳನ್ನು ಕರೋನಾ ಸೋಂಕಿನಿಂದಾಗಿ ಗುಣಪಡಿಸಲಾಗಿದೆ ಎಂಬುದು ಸಮಾಧಾನಕರ ವಿಷಯವಾಗಿದೆ.
ಇದನ್ನೂ ಓದಿ - Corona Vaccine: ಮಕ್ಕಳಿಗೆ ಈಗಲೇ ಕರೋನಾ ಲಸಿಕೆ ಹಾಕಬೇಡಿ ಎಂದು WHO ಮನವಿ ಮಾಡಿದ್ದೇಕೆ?
ಭಾರತದಲ್ಲಿ ಕರೋನಾದ ಒಟ್ಟು ಸಕ್ರಿಯ ಪ್ರಕರಣಗಳು:
ಭಾರತದಲ್ಲಿ ಈವರೆಗೆ ಒಟ್ಟು 2,43,72,907 ಕರೋನಾ ಪ್ರಕರಣಗಳು ವರದಿಯಾಗಿವೆ ಮತ್ತು 2,66,207 ರೋಗಿಗಳು ಸಾವನ್ನಪ್ಪಿದ್ದಾರೆ. ಪ್ರಸ್ತುತ ದೇಶದಲ್ಲಿ 36,73,802 ಸಕ್ರಿಯ ಕರೋನಾ ಪ್ರಕರಣಗಳಿವೆ. 18,04,57,579 ಜನರಿಗೆ ಈವರೆಗೆ ಕರೋನಾ ಲಸಿಕೆ ನೀಡಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.