ಈ ವರ್ಷ ಕೊರೊನಾ ಭಾರಿ ಅಪಾಯಕಾರಿಯಾಗಿರಲಿದೆ-WHO ಎಚ್ಚರಿಕೆ

ಒಲಿಂಪಿಕ್ಸ್ ನ್ನು ರದ್ದುಗೊಳಿಸಬೇಕೆಂದು ಹೆಚ್ಚುತ್ತಿರುವ ಕರೆಗಳ ಮಧ್ಯೆ ಜಪಾನ್ ತುರ್ತು ಪರಿಸ್ಥಿತಿಯನ್ನು ವಿಸ್ತರಿಸಿದ್ದರಿಂದ, ಈ ಬಾರಿ ಕೊರೊನಾ ಹೆಚ್ಚು ಮಾರಕ ಎಂದು ವಿಶ್ವ ಆರೋಗ್ಯ ತಜ್ಞರು ಶುಕ್ರವಾರ ಕಠಿಣ ಎಚ್ಚರಿಕೆ ನೀಡಿದೆ.

Last Updated : May 14, 2021, 11:51 PM IST
ಈ ವರ್ಷ ಕೊರೊನಾ ಭಾರಿ ಅಪಾಯಕಾರಿಯಾಗಿರಲಿದೆ-WHO ಎಚ್ಚರಿಕೆ  title=
file photo

ನವದೆಹಲಿ: ಒಲಿಂಪಿಕ್ಸ್ ನ್ನು ರದ್ದುಗೊಳಿಸಬೇಕೆಂದು ಹೆಚ್ಚುತ್ತಿರುವ ಕರೆಗಳ ಮಧ್ಯೆ ಜಪಾನ್ ತುರ್ತು ಪರಿಸ್ಥಿತಿಯನ್ನು ವಿಸ್ತರಿಸಿದ್ದರಿಂದ, ಈ ಬಾರಿ ಕೊರೊನಾ ಹೆಚ್ಚು ಮಾರಕ ಎಂದು ವಿಶ್ವ ಆರೋಗ್ಯ ತಜ್ಞರು ಶುಕ್ರವಾರ ಕಠಿಣ ಎಚ್ಚರಿಕೆ ನೀಡಿದೆ.

'ಈ ಸಾಂಕ್ರಾಮಿಕ ರೋಗದ ಎರಡನೆಯ ವರ್ಷವು ಮೊದಲಿಗಿಂತ ಹೆಚ್ಚು ಮಾರಕವಾಗಿದೆ" ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಹೇಳಿದ್ದಾರೆ.

ಇದನ್ನೂ ಓದಿ: ಅಭಿಮಾನಿಗಳ ಜೊತೆಗೆ ತನ್ನ ಸಾವಿನ ಸುದ್ದಿ ಹಂಚಿಕೊಂಡ Paresh Rawal! ಅಭಿಮಾನಿಗಳು ಮಾಡಿದ್ದೇನು?

ಒಲಿಂಪಿಕ್ಸ್‌ಗೆ ಕೇವಲ 10 ವಾರಗಳ ಮೊದಲು ಮತ್ತೊಂದು ಮೂರು ಪ್ರದೇಶಗಳಲ್ಲಿ ಕೊರೊನಾ ವಿರಾಟ್ ರೂಪ ತಾಳುತ್ತಿರುವ ಹಿನ್ನಲೆಯಲ್ಲಿ ಈಗ ಜಪಾನಿನಲ್ಲಿ ಸುಮಾರು ಮೂರುವರೆ ಲಕ್ಷಕ್ಕೂ ಅಧಿಕ ಜನರು ಜಾಗತಿಕ ಕ್ರೀಡಾಕೂಟವನ್ನು ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಿದ್ದಾರೆ.

ಟೋಕಿಯೊ ಮತ್ತು ಇತರ ಪ್ರದೇಶಗಳು ಈಗಾಗಲೇ ಮೇ ಅಂತ್ಯದವರೆಗೆ ತುರ್ತು ಆದೇಶದಲ್ಲಿದ್ದು, ಒಲಿಂಪಿಕ್ ಮ್ಯಾರಥಾನ್‌ಗೆ ಆತಿಥ್ಯ ವಹಿಸಲಿರುವ ಹಿರೋಷಿಮಾ, ಒಕಯಾಮಾ ಮತ್ತು ಉತ್ತರ ಹೊಕ್ಕೈಡೋ ಈಗ ಅದರೊಂದಿಗೆ ಸೇರಿಕೊಳ್ಳಲಿವೆ.

ಇದನ್ನೂ ಓದಿ: Covaxin, Covishield, Sputnik-V: ಭಾರತದ ಬಳಿ ಮೂರು ಅಸ್ತ್ರಗಳು, ಯಾವುದು ಎಷ್ಟು ಪರಿಣಾಮಕಾರಿ?

ಜಪಾನ್‌ನ ವೈದ್ಯಕೀಯ ವ್ಯವಸ್ಥೆಯನ್ನು ತಗ್ಗಿಸುವ ನಾಲ್ಕನೇ ಅಲೆಯನ್ನು ಎದುರಿಸುವ ಕ್ರಮವು ಈ ಬೇಸಿಗೆಯಲ್ಲಿ ಕ್ರೀಡಾಕೂಟವನ್ನು ನಡೆಸಲು ಸಾರ್ವಜನಿಕರು ವಿರೋಧಿಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News