West bengal Election Results 2021: ಮಹಿಳೆಗೆ ಅವಮಾನಿಸಿದ ಬಿಜೆಪಿಗೆ ತಕ್ಕ ಪ್ರತಿಕ್ರಿಯೆ ಸಿಕ್ಕಿದೆ: ದೀದಿ ಗೆಲುವಿಗೆ ಅಖಿಲೇಶ್ ಹೇಳಿಕೆ
10 ವರ್ಷಗಳ ಆಡಳಿತವಿರೋಧಿ ಅಲೆಯನ್ನು ಮೆಟ್ಟಿನಿಂತು ಮತ್ತೆ ಪಶ್ಚಿಮ ಬಂಗಾಳದಲ್ಲಿ ಗೆಲುವು ಸಾಧಿಸಿರುವ ಮಮತಾ ಬ್ಯಾನರ್ಜಿ ಸತತವಾಗಿ ಮೂರನೇ ಬಾರಿಗೆ ಸರ್ಕಾರ ರಚಿಸುವುದು ಖಾತರಿ ಆಗುತ್ತಿದೆ. ಈ ಮೂಲಕ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಫಲಿತಾಂಶ ಐಸಿಹಾಸಿಕ ಎನಿಸಿಕೊಳ್ಳುತ್ತಿದೆ.
ನವದೆಹಲಿ: ತೀವ್ರ ಕುತೂಹಲ ಮೂಡಿಸಿದ್ದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟ ಆಗುತ್ತಿದ್ದು ಮಮತಾ ಬ್ಯಾನರ್ಜಿ ಅವರು ಸತತವಾಗಿ ಮೂರನೇ ಬಾರಿಗೆ ಸರ್ಕಾರ ರಚಿಸುವುದು ಖಾತರಿ ಆಗುತ್ತಿದೆ. ಆಡಳಿತಾರೂಢ ಟಿಎಂಸಿಗೆ 200ಕ್ಕೂ ಹೆಚ್ಚು ಸ್ಥಾನಗಳು ಸಿಗುತ್ತಿರುವುದು ಸದ್ಯದ ಟ್ರೆಂಡ್ ಮೂಲಕ ಸ್ಪಷ್ಟವಾಗಿದೆ.
10 ವರ್ಷಗಳ ಆಡಳಿತವಿರೋಧಿ ಅಲೆಯನ್ನು ಮೆಟ್ಟಿನಿಂತು ಮತ್ತೆ ಪಶ್ಚಿಮ ಬಂಗಾಳದಲ್ಲಿ ಗೆಲುವು ಸಾಧಿಸಿರುವ ಮಮತಾ ಬ್ಯಾನರ್ಜಿ ಸತತವಾಗಿ ಮೂರನೇ ಬಾರಿಗೆ ಸರ್ಕಾರ ರಚಿಸುವುದು ಖಾತರಿ ಆಗುತ್ತಿದೆ. ಈ ಮೂಲಕ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಫಲಿತಾಂಶ ಐಸಿಹಾಸಿಕ ಎನಿಸಿಕೊಳ್ಳುತ್ತಿದೆ.
ಇದೇ ಸಮಯದಲ್ಲಿ, ಮುಖ್ಯ ವಿರೋಧ ಪಕ್ಷವಾದ ಬಿಜೆಪಿ 'ತ್ರಿಬಲ್ ಡಿಸಿಟ್' ಸ್ಥಾನ ತಲುಪುತ್ತದೆ ಎಂಬ ಊಹೆಗಳು ಹುಸಿಯಾಗುವಂತೆ ತೋರುತ್ತಿದೆ. ಮಮತಾ ಬ್ಯಾನರ್ಜಿಯವರು 2021ರ ವಿಧಾನಸಭಾ ಚುನಾವಣೆ ಜಯಗಳಿಸುತ್ತಿದ್ದಂತೆ ದೇಶಾದ್ಯಂತದ ವಿರೋಧ ಪಕ್ಷದ ನಾಯಕರು ಅವರನ್ನು ಅಭಿನಂದಿಸಲು ಪ್ರಾರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ಗೆಲುವು ಪ್ರತಿಪಕ್ಷಗಳಿಗೆ ಆಮ್ಲಜನಕ (Oxygen) ಸಿಕ್ಕಂತಾಗಿದೆ ಎಂಬ ವ್ಯಾಖ್ಯಾನಗಳು ಕೇಳಿಬರುತ್ತಿವೆ.
ಇದನ್ನೂ ಓದಿ - Tamil Nadu Election Result 2021 : ತಮಿಳುನಾಡು ಸಿಎಂ ಆಗಿ ಸ್ಟಾಲಿನ್ ಅಧಿಕಾರಕ್ಕೆ ಮುಹೂರ್ತ ಫಿಕ್ಸ್..!
ಉತ್ತರ ಪ್ರದೇಶದ ಮಾಜಿ ಸಿಎಂ ಮತ್ತು ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ಅವರು ಪಶ್ಚಿಮ ಬಂಗಾಳದ ಫಲಿತಾಂಶಕ್ಕಾಗಿ ಮಮತಾ ಬ್ಯಾನರ್ಜಿ ಅವರನ್ನು ಅಭಿನಂದಿಸಿದ್ದಾರೆ. 'ಇದು ಬಿಜೆಪಿಯ ಮಹಿಳೆಯೊಬ್ಬರ ಮೇಲೆ ಮಾಡಿದ ದೀದಿ ಒ ದೀದಿಎಂಬ ಅವಮಾನಕರ ವ್ಯಂಗ್ಯಕ್ಕೆ ಸಾರ್ವಜನಿಕರು ನೀಡಿದ ಸೂಕ್ತ ಉತ್ತರವಾಗಿದೆ' ಎಂದು ಟ್ವೀಟ್ ಮಾಡಿದ್ದಾರೆ.
Mamata Banerjee) ಅವರ ಟಿಎಂಸಿ ಭಾರೀ ಅಂತರದಲ್ಲಿ ಗೆದ್ದಿರುವುದಕ್ಕಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಅವರು ಟ್ವೀಟ್ ಮಾಡಿ, 'ಈ ದೊಡ್ಡ ವಿಜಯಕ್ಕಾಗಿ ಮಮತಾ ಬ್ಯಾನರ್ಜಿಗೆ ಅಭಿನಂದನೆಗಳು, ಈಗ ಜನರ ಯೋಗಕ್ಷೇಮಕ್ಕಾಗಿ ಒಟ್ಟಾಗಿ ಕೆಲಸ ಮಾಡಿ ಮತ್ತು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಿ' ಎಂದು ಹೇಳಿದ್ದಾರೆ.
Randeep Surjewala : ಪಂಚರಾಜ್ಯ ಚುನಾವಣಾ ಫಲಿತಾಂಶದ ನಡುವೆಯೇ ಕಾಂಗ್ರೆಸ್ ನಿಂದ ಮಹತ್ವದ ನಿರ್ಧಾರ!
ಕಾಂಗ್ರೆಸ್ ಮುಖಂಡ ರಶೀದ್ ಅಲ್ವಿ ಅವರು ಮಮತಾ ಅವರ ಗೆಲುವಿನ ಕುರಿತು 'ಬಂಗಾಳದ ಜನರು ಬಿಜೆಪಿಯ ಭರವಸೆಯನ್ನು ದೂರ ಮಾಡಿದ್ದಾರೆ. ಮಮತಾ ಜಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿದ್ದಾರೆ, ನಾನು ಅವರನ್ನು ಅಭಿನಂದಿಸುತ್ತೇನೆ. ಯಾವುದೇ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಪ್ರಧಾನ ಮಂತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೊರೋನಾವನ್ನು ಹರಡಿದರು. ಎಂದು ಹೇಳಿದ್ದಾರೆ.
ಇಲ್ಲಿಯವರೆಗಿನ ಟ್ರೆಂಡ್ ಪ್ರಕಾರತೃಣಮೂಲ ಕಾಂಗ್ರೆಸ್ (ಟಿಎಂಸಿ) 292 ಸ್ಥಾನಗಳಲ್ಲಿ 202 ಸ್ಥಾನಗಳಲ್ಲಿ ಮುಂಚೂಣಿಯಲ್ಲಿದೆ. ಇದು ಬಹುಮತದ 147 ಸ್ಥಾನಗಳಿಗಿಂತ ಹೆಚ್ಚಿನದಾಗಿದೆ ಮತ್ತು ಬಿಜೆಪಿ ಕೇವಲ 77 ಸ್ಥಾನಗಳನ್ನು ಗಳಿಸಿದೆ. ಮತ ಹಂಚಿಕೆಯ ವಿಷಯದಲ್ಲಿ, ಟಿಎಂಸಿಗೆ 48.5 ಶೇಕಡಾ ಮತಗಳು ಮತ್ತು ಬಿಜೆಪಿಗೆ 37.4 ಶೇಕಡಾ ಮತಗಳು ದೊರೆತಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.