ಕೋಲ್ಕತಾ: ದೇಶದ‌ ಗಮನ ಸೆಳೆದಿರುವ ಪಶ್ಚಿಮ ಬಂಗಾಳದಲ್ಲಿ (West Bengal Election) ಇಂದು ಐದನೇ ಹಂತದ ಮತದಾನ ನಡೆಯಲಿದೆ. 6 ಜಿಲ್ಲೆಗಳ ಒಟ್ಟು 45 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ‌. ಪಶ್ಚಿಮ ಬಂಗಾಳ ಚುನಾವಣೆ ದಿನದಿಂದ ದಿನಕ್ಕೆ ಅತ್ಯಂತ ಸೂಕ್ಷ್ಮವಾಗುತ್ತಿದ್ದು ಇಂದಿನ ಮತದಾನದ ಪ್ರಕ್ರಿಯೆಗೆ ಭಾರೀ  ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ.


COMMERCIAL BREAK
SCROLL TO CONTINUE READING

ಇಲ್ಲಿಯವರೆಗೆ ಪಶ್ಚಿಮ ಬಂಗಾಳದ (West Bengal) 294 ಸ್ಥಾನಗಳ ಪೈಕಿ ಮೊದಲ 4 ಹಂತಗಳಲ್ಲಿ 135 ಸ್ಥಾನಗಳಿಗೆ ಮತದಾನ ನಡೆದಿತ್ತು, ಉಳಿರುವ 159 ಸ್ಥಾನಗಳಿಗೆ ಮಂದಿನ 4 ಹಂತಗಳಲ್ಲಿ ಮತದಾನ ನಡೆಯಲಿದೆ. ಇಂದು 5ನೇ ಹಂತದಲ್ಲಿ 45 ಕ್ಷೇತ್ರಗಳ 342 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.


ಬಿಜೆಪಿ, ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ, ರಾಜ್ಯಪಾಲರಿಗೆ ಕರೆ ಮಾಡಿದ ದೀದಿ


ಇಂದು ನಡೆಯುವ ಐದನೇ ಹಂತದ ಮತದಾನ (West Bengal Election)  ಆಡಳಿತಾರೂಢ ಟಿಎಂಸಿ (TMC) ಮತ್ತು ಬಿಜೆಪಿಗೆ ಬಹಳ ಮುಖ್ಯವಾದುದಾಗಿದೆ. ಏಕೆಂದರೆ ಇಂದು ಮತದಾನ ನಡೆಯುತ್ತಿರುವ 45 ವಿಧಾನಸಭಾ ಕ್ಷೇತ್ರಗಳ ಪೈಕಿ ಟಿಎಂಸಿ 2016ರ ವಿಧಾನಸಭಾ ಚುನಾವಣೆಯಲ್ಲಿ 32 ಸ್ಥಾನಗಳನ್ನು ಗೆದ್ದಿತ್ತು. ಆದರೆ 2019ರ ಲೋಕಸಭಾ ಚುನಾವಣೆಯಲ್ಲಿ ಇದೇ ಪ್ರದೇಶದಲ್ಲಿ ತನ್ನ ಪ್ರಾಬಲ್ಯ ಮೆರೆದಿತ್ತು.‌ ಲೋಕಸಭಾ ಚುನಾವಣೆಯಲ್ಲಿ ಇಲ್ಲಿ ಟಿಎಂಸಿ ಶೇಕಡಾ  41.5ರಷ್ಟು ಮತ ಪಡೆದಿದ್ದರೆ ಬಿಜೆಪಿ ಅಚ್ಚರಿ ಎಂಬಂತೆ ಶೇಕಡಾ 45 ರಷ್ಟು ಮತ ಗಳಿಸಿತ್ತು. ಟಿಎಂಸಿ 23 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ ಬಿಜೆಪಿ 22 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿತ್ತು. ಅದರಿಂದಾಗಿ ಈ ಬಾರಿ ಈ 45 ಕ್ಷೇತ್ರಗಳಲ್ಲಿ ಟಿಎಂಸಿ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ.


ಇದನ್ನೂ ಓದಿ - Karnataka By-Polls: ಕಾಂಗ್ರೆಸ್, ಬಿಜೆಪಿ ಪಾಲಿಗೆ ಪ್ರತಿಷ್ಟೆಯಾಗಿರುವ ರಾಜ್ಯದ ಉಪಚುನಾವಣೆಗೆ ಇಂದು ಮತದಾನ


ಏತನ್ಮಧ್ಯೆ ಆರನೇ ಹಂತದ ಚುನಾವಣಾ ಪ್ರಚಾರವು ವೇಗವನ್ನು ಪಡೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಗೃಹ ಸಚಿವ ಅಮಿತ್ ಶಾ (Amith Sha) ಇಂದು ಪಶ್ಚಿಮ ಬಂಗಾಳದ ಕೆಲವು ಕಡೆ ಚುನಾವಣಾ ಸಮಾವೇಶಗಳನ್ನು ನಡೆಸಲಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.