ವೈದ್ಯರು ರಾಷ್ಟ್ರವ್ಯಾಪಿ ಮೋದಿ ಸರ್ಕಾರದ ವಿರುದ್ಧ ಪ್ರತಿಭಟಿಸಲು ಕಾರಣವೇನು?
ಇಂದು ಬೆಳಿಗ್ಗೆ 6:00 ರಿಂದ ಸಂಜೆ 6: 00 ರವರೆಗೆ ಜಾರಿಯಲ್ಲಿರುವ ಹನ್ನೆರಡು ಗಂಟೆ ಮುಷ್ಕರ, ರಾಷ್ಟ್ರೀಯ ವೈದ್ಯಕೀಯ ಆಯೋಗದ ಮಸೂದೆಯನ್ನು ಪ್ರತಿಭಟಿಸುವುದು, ಇದು ಎಂಸಿಐ ಅನ್ನು ಬದಲಿಸುವ ಗುರಿ ಹೊಂದಿದೆ.
ನವದೆಹಲಿ: ಇಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ನಡೆಸುತ್ತಿರುವ ರಾಷ್ಟ್ರವ್ಯಾಪಿ ಮುಷ್ಕರದಲ್ಲಿ ಎರಡು ಲಕ್ಷ ವೈದ್ಯರು ಪಾಲ್ಗೊಂಡಿದ್ದಾರೆ.
ಇಂದು ಬೆಳಿಗ್ಗೆ 6:00 ರಿಂದ ಸಂಜೆ 6: 00 ರವರೆಗೆ ಜಾರಿಯಲ್ಲಿರುವ ಹನ್ನೆರಡು ಗಂಟೆ ಮುಷ್ಕರ, ರಾಷ್ಟ್ರೀಯ ವೈದ್ಯಕೀಯ ಆಯೋಗದ ಮಸೂದೆಯನ್ನು ಪ್ರತಿಭಟಿಸುವುದು, ಇದು ಎಂಸಿಐ ಅನ್ನು ಬದಲಿಸುವ ಗುರಿ ಹೊಂದಿದೆ. ಮಸೂದೆಯನ್ನು ವಿರೋಧಿಸಿ ವೈದ್ಯರು ಹೊರ ರೋಗಿಗಳ ತಪಾಸಣೆಯನ್ನು ನಿಲ್ಲಿಸಿರುವುದರಿಂದ ರೋಗಿಗಳು ಪರಿತಪಿಸುವಂತಾಗಿದೆ.
ಕೇರಳದಲ್ಲಿ, ರಾಜ್ಯ ನಡೆಸುತ್ತಿರುವ ವೈದ್ಯಕೀಯ ಕಾಲೇಜುಗಳ ವೈದ್ಯರು ಹೊರ ರೋಗಿಯ ಇಲಾಖೆಯಲ್ಲಿ ಬೆಳಿಗ್ಗೆ 8:00 ರಿಂದ 9: 00 ರವರೆಗೆ ಮತ್ತು ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ 9: 00 ರಿಂದ 10: 00 ಗಂಟೆವರೆಗೆ ಹೊರ ರೋಗಿಗಳಿಗೆ ಚಿಕಿತ್ಸೆಯನ್ನು ಸ್ಥಗಿತಗೊಳಿಸಲಾಗಿತ್ತು. ಅಲ್ಲದೆ, ಅನೇಕ ಖಾಸಗಿ ಆಸ್ಪತ್ರೆಗಳಲ್ಲಿ ಪ್ರತಿಭಟನೆ ಸಂಜೆ 6:00ರ ತನಕ ಮುಂದುವರಿಯುತ್ತದೆ.
ಆದಾಗ್ಯೂ, ತುರ್ತು ಸೇವೆಗಳಿಗೆ ಈ ಮುಷ್ಕರ ಯಾವುದೇ ಪರಿಣಾಮ ಬೀರುವುದಿಲ್ಲ.
ಹೊಸ ಮಸೂದೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ದಾಖಲಿಸಲು, 14 ಜಿಲ್ಲೆಗಳಿಂದ 3,000 ಕ್ಕಿಂತ ಹೆಚ್ಚು ವೈದ್ಯರು ತಿರುವನಂತಪುರಂನ ಗವರ್ನರ್ ಮನೆಯ ಮುಂದೆ ಧರಣಿ ನಡೆಸಿದರು.
ಅದೇ ರೀತಿ ಕರ್ನಾಟಕದಲ್ಲಿ, ನೂರಾರು ಖಾಸಗಿ ಆಸ್ಪತ್ರೆಗಳು ತಮ್ಮ ಒಪಿಡಿಗಳನ್ನು ಸ್ಥಗಿತಗೊಳಿಸಿ ಎನ್ಎಂಸಿ ಬಿಲ್ 2017 ರ ವಿರುದ್ಧ ಪ್ರತಿಭಟಿಸಲು ಸಾಥ್ ನೀಡಿವೆ.
ಹೆಚ್ಚಿನ ಖಾಸಗಿ ಆಸ್ಪತ್ರೆಗಳು ಮಂಗಳವಾರ 6:00 ರಿಂದ 6: 00 ರವರೆಗೆ ತಮ್ಮ OPD ಗಳನ್ನು ಕಾರ್ಯಗತಗೊಳಿಸುವುದಿಲ್ಲ ಎಂದು ಐಎಂಎ ಯ ರಾಜ್ಯ ಘಟಕದ ಅಧ್ಯಕ್ಷ ಡಾ. ಎಚ್.ಎಲ್. ರವೀಂದ್ರ ಹೇಳಿದ್ದಾರೆ.
ರಾಷ್ಟ್ರೀಯ ರಾಜಧಾನಿಯಲ್ಲೂ ಸಹ ವೈದ್ಯರ ಪ್ರತಿಭಟನೆ ನಡೆಯುತ್ತಿದೆ.
ಕೇಂದ್ರ ಸರ್ಕಾರ ರಾಷ್ಟ್ರೀಯ ವೈದ್ಯಕೀಯ ಆಯೋಗ(NMC) ಜಾರಿಗೊಳಿಸಲು ಕಾರಣಗಳೇನು?
• ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ(MCA) ಭ್ರಷ್ಟಾಚಾರ ನಡೆಸುತ್ತಿದೆ ಎಂಬ ಆರೋಪ ಹಿನ್ನೆಲೆ.
• ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕಾಗಿ ನೀತಿ ಆಯೋದ ಶಿಫಾರಸ್ಸು ಮಾಡಿದೆ.
• ಮಸೂದೆಯ ಪ್ರಕಾರ ಹೋಮಿಯೋಪತಿ, ಹಲೋಪತಿ, ಆರ್ಯವೇದ, ಯುನಾನಿ ಶಿಕ್ಷಣ ಮುಗಿಸಿದ ಅಭ್ಯರ್ಥಿ ಗಳಿಗೆ ಆರು ತಿಂಗಳು ತರಬೇತಿ ನೀಡಿ ಗ್ರಾಮೀಣ ಪ್ರದೇಶಗಳಲ್ಲಿ ಇಂಗ್ಲಿಷ್ ಮೆಡಿಸಿನ್ ನೀಡಲು ಅವಕಾಶ ನೀಡುವುದು.
• ನೀಟ್ ಬರೆದು ವೈದ್ಯಕೀಯ ಕೋರ್ಸ್ ಪಡೆಯಲು ಆಯ್ಕೆಯಾಗುವ ವಿದ್ಯಾರ್ಥಿಗಳು ತಮ್ಮ ವೈದ್ಯಕೀಯ ಶಿಕ್ಷದ ಬಳಿಕ ಪ್ರಾಯೋಗಿಕ ಅಭ್ಯಾಸಕ್ಕೆ (ಪ್ರ್ಯಾಕ್ಟೀಸ್ ಮಾಡಲು) ಎಕ್ಸಿಟ್ ಪರೀಕ್ಷೆ ಕಡ್ಡಾಯ.
• 60% ಸೀಟುಗಳು ವೈದ್ಯಕೀಯ ಕಾಲೇಜಿಗಳ ವ್ಯಾಪ್ತಿಗೆ ಬಂದರೆ, 40% ನ್ಯಾಷನಲ್ ಮೆಡಿಕಲ್ ಕಮಿಷನ್ ವ್ಯಾಪ್ತಿಗೆ ಬರಲಿದೆ. ಹಾಗಾಗಿ ಮಸೂದೆ ಜಾರಿಗೆ ಬಂದರೆ ವೈದ್ಯಕೀಯ ಸೀಟುಗಳು ಇನ್ನು ಮುಂದೆ ಶೇ.60:40 ಅನುಪಾತ ದಲ್ಲಿ ಹಂಚಿಕೆಯಾಗಲಿವೆ.
• ಎನ್ಎಂಸಿ ಜಾರಿಯಾದರೆ ಇನ್ನು ಮುಂದೆ ಮೆಡಿಕಲ್ ಸೀಟುಗಳ ಶುಲ್ಕ ನಿಗಧಿ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇರುವುದಿಲ್ಲ.
ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ಅವಶ್ಯಕತೆ ಏನು?
ಇದು ದೇಶದ ಎಲ್ಲ ವೈದ್ಯರು ಒಟ್ಟಗೂಡಿ ಸ್ಥಾಪಿತವಾಗಿರುವ ಸಂಸ್ಥೆ. ಈ ಸಂಸ್ಥೆಯಲ್ಲಿ ಒಟ್ಟು 112 ಸದಸ್ಯರು ಇರುತ್ತಾರೆ. ಅದರಲ್ಲಿ 94 ಜನರು ವೈದ್ಯರಿಂದ ಚುನಾಯಿತರಾಗಿ ಪ್ರತಿನಿಧಿಗಳಾಗಿರುತ್ತಾರೆ. ಈ ಚುನಾವಣೆಯಲ್ಲಿ ಪ್ರತಿ ರಾಜ್ಯಗಳಿಗೂ ಪ್ರಾತಿನಿಧ್ಯವಿರುತ್ತದೆ. ಇದರ ಮೂಲಕ ವೈದ್ಯಕೀಯ ಶುಲ್ಕ ನಿಗಧಿ ಪಡಿಸುವ ಅಧಿಕಾರವನ್ನು ಆಯಾ ರಾಜ್ಯಕ್ಕೆ ನೀಡಲಾಗುವುದು. ಶೈಕ್ಷಣಿಕ ವಿಚಾರಗಳಿಗೆ ಸಂಬಂಧಿಸಿದ ಯಾವುದೇ ವಿಚಾರವನ್ನು ಪರಿಣಿತ ವೈದ್ಯರು ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಲು ಈ ಸಂಸ್ಥೆ ಅವಶ್ಯಕವಾಗಿದೆ.
ಎನ್ಎಂಸಿ ಜಾರಿಯಿಂದ ಉಂಟಾಗುವ ಅನಾನಕೂಲಗಳೇನು?
• ರಾಜ್ಯದ ಸ್ವಾಯತ್ತತೆ ಇಲ್ಲದಂತಾಗುತ್ತದೆ.
• ರಾಜ್ಯಗಳಿಗೆ ವೈದ್ಯಕೀಯ ಶುಲ್ಕ ನಿಗಧಿಪಡಿಸುವ ಅಧಿಕಾರವಿರುವುದಿಲ್ಲ.
• ಜನಸಾಮಾನ್ಯರು ವೈದ್ಯಕೀಯ ಶಿಕ್ಷಣದಿಂದ ವಂಚಿತರಾಗುತ್ತಾರೆ.
• ಭಾರತೀಯ ವೈದ್ಯ ಪದ್ದತಿಯಲ್ಲಿ ಓದಿದ ವೈದ್ಯರಗಳಿಗೆ ಆರು ತಿಂಗಳ ತರಬೇತಿ ನೀಡಿ ಹಲೋಪತಿ ಔಷಧಿ ನೀಡಲು ಅವಕಾಶ ಮಾಡಿಕೊಡಲಾಗುವುದು. ಇದರಿಂದ ರೋಗಿಗಳ ಜೀವದ ಜೊತೆ ಚೆಲ್ಲಾಟ ಆಡಿದಂತಾಗುತ್ತದೆ.
• ವೈದ್ಯಕೀಯ ಶಿಕ್ಷಣದ ಗುಣಮಟ್ಟ ಕಡಿಮೆಯಾಗುತ್ತದೆ.