ನವದೆಹಲಿ: ಕೋರೋನಾ ಸಂಕಷ್ಟದ ಕಾಲದಲ್ಲಿ ಹೆಚ್ಚಿನ ಜನರು ಮನೆಯಿಂದಲೇ ತಮ್ಮ ಕಚೇರಿಯ ಕೆಲಸಗಳನ್ನು ನಿರ್ವಹಿಸುವಲ್ಲಿ ತೊಡಗಿದ್ದಾರೆ. ಈ ಕುರಿತು ಹೊರಬಂದಿರುವ ದತಾಂಶಗಳ ಪ್ರಕಾರ ದೇಶಾದ್ಯಂತ ಡೇಟಾ ಬಳಕೆ ಹಾಗೂ ಇಂಟರ್ನೆಟ್ ಬಳಕೆಯ ಅವಧಿಯಲ್ಲಿ ವ್ಯಾಪಕ ಏರಿಕೆಯಾಗಿದೆ. ಹೆಚ್ಚಾಗುತ್ತಿರುವ ವರ್ಕ್ ಫ್ರಮ್ ಹೋಮ್ ಕಲ್ಚರ್ ನಿಂದ ಸೈಬರ್ ಸುರಕ್ಷತೆಯ ಅಪಾಯ ಕೂಡ ಹೆಚ್ಚಾಗಿದೆ. ಹಲವು ರೀತಿಯ ವೈರಸ್ ಗಳು ನಿಮ್ಮ ಸಿಸ್ಟಮ್ ಮೇಲೆ ಹಲ್ಲೆ ನಡೆಸುವ ಸಾಧ್ಯತೆ ಇದೆ. ಹೀಗಾಗಿ ತಮ್ಮ ಕಂಪ್ಯೂಟರ್ ಅನ್ನು ಸುರಕ್ಷಿತಗೊಳಿಸಲು ಹೆಚ್ಚಿನ ಜನರು ಅಂತಿ ವೈರಸ್ ಬಳಸುತ್ತಿದ್ದಾರೆ.


COMMERCIAL BREAK
SCROLL TO CONTINUE READING

ನಿಮ್ಮಲ್ಲಿಯೂ ಕೂಡ ಹಲವರು ಕೂಡ ನಿಮ್ಮ PC ಅಥವಾ ಲ್ಯಾಪ್ ಟಾಪ್ ನಲ್ಲಿ ಆಂಟಿ ವೈರಸ್ ಅನ್ನು ಇನ್ಸ್ಟಾಲ್ ಮಾಡಿರಬಹುದು. ಆದರೆ, ಮಾರುಕಟ್ಟೆಯಲ್ಲಿ ಲಭ್ಯವಿರುವ ನಕಲಿ ಆಂಟಿ ವೈರಸ್ ಗಳು ನಿಮ್ಮ ವೈಯಕ್ತಿಕ ಮಾಹಿತಿಗೆ ಕನ್ನ ಹಾಕಲಿವೆ ಎಂಬುದು ನಿಮಗೆ ತಿಳಿದಿದೆಯೇ. ಅಗ್ಗದ ಬೆಲೆಯಲ್ಲಿ ದೊರೆಯುವ ಈ ಆಂಟಿ ವೈರಸ್ ಗಳಿಂದ ನಿಮ್ಮ ಡೇಟಾಗೆ ಅಪಾಯ ಉಂಟಾಗುವ ಸಾಧ್ಯತೆ ಇದೆ.


ನಕಲಿ ಆಂಟಿ ವೈರಸ್ ಅಂದರೇನು?
ನಕಲಿ ಆಂಟಿ ವೈರಸ್ ಒಂದು ಮಾಲ್ವೇರ್ ಆಗಿದೆ. ಇದನ್ನು ಯಾವುದೇ ಒಂದು ಒರಿಜಿನಲ್  ಸಾಫ್ಟ್ವೇರ್ ನ ನಕಲು ಮಾಡಿ ವೈಯಕ್ತಿಕ ಮಾಹಿತಿ ಲೀಕ್ ಮಾಡಲು ಹ್ಯಾಕರ್ ಗಳು ಬಳಸುತ್ತಾರೆ. ಇದನ್ನು ಒಂದು ವೇಳೆ ನೀವು ನಿಮ್ಮ ಕಂಪ್ಯೂಟರ್ ನಲ್ಲಿ ಇನ್ಸ್ಟಾಲ್ ಮಾಡಿದರೆ, ಇದು ನೀವು ನೀಡುವ ಕಮಾಂಡ್ ಕೇಳದೆ ಇರಬಹುದು.


ಇದು ಕಂಪ್ಯೂಟರ್ ನಲ್ಲಿ ಹೇಗೆ ಬರುತ್ತದೆ?
ಒಂದುವೇಳೆ ನೀವು ಮಾರುಕಟ್ಟೆಯಲ್ಲಿ ಲಭ್ಯವಿರುವ ಯಾವುದೇ ಅಗ್ಗದ ಬೆಲೆಯ ಆಂಟಿ ವೈರಸ್ ಖರೀದಿಸಿ ಅದನ್ನು ನಿಮ್ಮ PCಗೆ ಇನ್ಸ್ಟಾಲ್ ಮಾಡಿದಾಗ ಇದು ನಿಮ್ಮ ಕಂಪ್ಯೂಟರ್ ಸೇರುತ್ತದೆ. ಎರಡನೆಯದಾಗಿ ನೀವು ಆನ್ಲೈನ್ ಅಥವಾ ಇಂಟರ್ನೆಟ್ ಮೇಲೆ ಕಾರ್ಯನಿರ್ವಹಿಸುವಾಗ ಯಾವುದೇ ಒಂದು ಫ್ರೀ ವೇರ್ ಇನ್ಸ್ಟಾಲ್ ಮಾಡಿದರೆ ಅದರ ಜೊತೆಗೆ ನಕಲಿ ಆಂಟಿ ವೈರಸ್ ಕೂಡ ಇನ್ಸ್ಟಾಲ್ ಆಗುವ ಸಾಧ್ಯತೆ ಇದೆ. ಬಹುತೇಕ ಹ್ಯಾಕರ್ ಗಳು ಇ-ಮೇಲ್, ಸಾಮಾಜಿಕ ಮಾಧ್ಯಮ ಸೈಟ್, ಇಂಟರ್ನೆಟ್ ಜಾಹಿರಾತು ಹಾಗೂ ಇತರೆ ಮಾಲ್ವೇಯರ್ ಗಳನ್ನೂ ಬಳಸಿ ಈ ರೀತಿಯ ಉಚಿತ ಆಂಟಿ ವೈರಸ್ ಸಾಫ್ಟ್ ವೇರ್ ಗಳನ್ನು ನಿಮ್ಮ PCಯಲ್ಲಿ ಇನ್ಸ್ಟಾಲ್ ಮಾಡಿ ನಿಮ್ಮ ಮಾಹಿತಿಗೆ ಕನ್ನಹಾಕುತ್ತಾರೆ.


ಸಿಸ್ಟಂನಲ್ಲಿ ಮಾಲ್ವೇಯರ್ ಇದೆಯೋ ಅಥವಾ ಇಲ್ಲವೋ ಹೇಗೆ ಪತ್ತೆ ಹಚ್ಚಬೇಕು?
ವೈಯಕ್ತಿಕ ಮಾಹಿತಿ ಕೇಳುವ ಯಾವುದೇ ಪಾಪ್-ಅಪ್, ಒಂದು ನಕಲಿ ಆಂಟಿ ವೈರಸ್ ಪತ್ತೆಹಚ್ಚುವ ಸುಲಭ ಮಾರ್ಗವಾಗಿದೆ.


ಸಿಸ್ಟಂ ಅನ್ನು ಹೇಗೆ ಸೇಫಾಗಿ ಇಟ್ಟುಕೊಳ್ಳಬೇಕು?


  • ಯಾವುದೇ ವೆಬ್ ಲಿಂಕ್‌ಗೆ ಭೇಟಿ ನೀಡುವಾಗ ಜಾಗರೂಕರಾಗಿರಿ.

  • ಸಿಸ್ಟಮ್ ಸಾಫ್ಟ್‌ವೇರ್ ಅನ್ನು ಯಾವಾಗಲು ಅಪ್ಡೇಟ್ ಮಾಡಿ.

  • ಸಾಫ್ಟ್‌ವೇರ್ ಪ್ಯಾಚಿಂಗ್‌ನ ಮಹತ್ವದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಪ್ಯಾಚ್‌ಗಳನ್ನು ಅರ್ಥಮಾಡಿಕೊಳ್ಳಿ.

  • ಸೈಬರ್ ಅಪರಾಧ ಅಥವಾ ವಂಚನೆಯನ್ನು ವರದಿ ಮಾಡಲು, ಸೈಬರ್ ಅಪರಾಧ ಸೆಲ್ ಗೆ ದೂರು ನೀಡಿ.