ನವದೆಹಲಿ: ಗಾಂಧಿಜಿ ಅವರು ಎದುರಿಸಿದ ಪರಿಸ್ಥಿತಿ ಹಾಗೂ ಅವರಿಗೆ ಸಿಕ್ಕ ಸಮಾಜದ ಕುರಿತು ಯೋಚಿಸಿ. ಇಂದಿನ ಪರಿಸ್ಥಿತಿಯಲ್ಲಿ ನಾವು ಕಾರ್ಬನ್ ಕಾಪಿ ಮಾಡಲು ಸಾಧ್ಯವಿಲ್ಲ. ಗಾಂಧಿಜಿ ಅವರು ಇದ್ದರೂ ಕೂಡ ಅದನ್ನು ನಿಲ್ಲಿಸುತ್ತಿದ್ದರು. ನಿರ್ಭಯರಾಗಿರುವವರಿಗೆ ಮಾತ್ರ ಸದ್ಯ ಸಿಗುತ್ತದೆ. ಗಾಂಧಿಜಿ ಅವರ ಸತ್ಯನಿಷ್ಠೆಗೆ ಸಾಟಿ ಇಲ್ಲ. ಗಾಂಧಿಜಿ ಅವರನ್ನು ತೀವ್ರ ವಿರೋಧಿಸುವವರೂ ಕೂಡ ಅದನ್ನು ಪ್ರಶ್ನಿಸುವಂತಿಲ್ಲ. ಹೀಗಂತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥರಾಗಿರುವ ಡಾ. ಮೋಹನ್ ಭಾಗವತ್ ಹೇಳಿದ್ದರೆ. ಸೋಮವಾರ ದೆಹಲಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞ ಜಗಮೋಹನ್ ಸಿಂಗ್ ರಾಜಪೂತ್ ಅವರು ಬರೆದ "गांधी को समझने का यही समय" ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.


COMMERCIAL BREAK
SCROLL TO CONTINUE READING

ಈ ವೇಳೆ ಮಾತನಾಡಿರುವ ಅವರು, "ಗಾಂಧಿಜಿ ಬ್ಯಾರಿಸ್ಟರ್ ಪದವಿ ಪಡೆದು ಮರಳಿದ್ದರು. ಅವರು ಹಣ ಸಂಪಾದಿಸಬಹುದಿತ್ತು. ಗಾಂಧಿಜಿ ಅವರಿಗೆ ತಾವು ಹಿಂದೂ ಆಗಿರುವ ಕುರಿತು ಹೇಳಲು ನಾಚಿಕೆ ಪಡುತ್ತಿರಲಿಲ್ಲ. ಸನಾತನವಾಗಿ ಹಿಂದೂ ಧರ್ಮಕ್ಕೆ ಸೇರಿದ ಗಾಂಧಿಜಿ ಅವರು ಇತರ ಧರ್ಮದ ಜನರನ್ನೂ ಕೂಡ ಗೌರವಿಸುತ್ತಿದ್ದರು. ಅವರು ಎಂದಿಗೂ ಕೂಡ ಜನಪ್ರೀಯತೆ, ಸಫಲತೆ ಹಾಗೂ ಅಸಫಲತೆ ಕುರಿತು ಯೋಚಿಸುತ್ತಿರಲಿಲ್ಲ. ಸಮಾಜದ ಕೊನೆ ವ್ಯಕ್ತಿಯ ವಿಕಾಸಕ್ಕೆ ಶ್ರಮಿಸುತ್ತಿದ್ದರು. ಇದು ಅವರ ಪ್ರಯೋಗವಾಗಿತ್ತು ಹಾಗೂ ಈ ಪ್ರಯೋಗದಲ್ಲಿ ಏನಾದರು ಏರುಪೇರಾದರೆ, ಅನುಸರಿಸಿದ ಮಾರ್ಗ ತಪ್ಪಾಗಿತ್ತು ಒಂದು ಒಪ್ಪಿಕೊಳ್ಳುತ್ತಿದ್ದರು" ಎಂದಿದ್ದಾರೆ.


ಈ ಕುರಿತು ಮಾತನಾಡಿರುವ ಸಂಘ ಪ್ರಮುಖರು, "ನಾವು ಇಂದಿನಿಂದ ಗಾಂಧೀಜಿಯವರ ಪ್ರಾಮಾಣಿಕತೆಯ ಪಾಠವನ್ನು ಪ್ರಾರಂಭಿಸಬೇಕು. ಪ್ರಾಮಾಣಿಕತೆ ಅತ್ಯುತ್ತಮ ನೀತಿಯಾಗಿದೆ." ಎಂದಿದ್ದಾರೆ. "ಒಮ್ಮೆ ಗಾಂಧಿಜಿ ಅವರ ಕುರಿತು ಹೇಳಿಕೆ ನೀಡಿದ್ದ ಹೇಡ್ಗೆವಾರ್ ಅವರೂ ಕೂಡ ಗಾಂಧಿಜಿ ಅವರ ಜೀವನವನ್ನು ಅನುಸರಿಸಬೇಕು ಎಂದಿದ್ದರು. ನಮ್ಮ ಕೆಲ ಸಂಗತಿಗಳನ್ನು ತಪ್ಪು ಎಂದು ತಿಳಿಯಲಾಗುತ್ತಿತ್ತು. ಆದರೆ, ಇಂದು ಪರಿಸ್ಥಿತಿ ಬದಲಾಗುತ್ತಿದೆ. ಶಿಕ್ಷಣದಲ್ಲಿ ಇವರು ನಮ್ಮ ಪಕ್ಷದವರು ಮತ್ತು ಇವರು ವಿರೋಧ ಪಕ್ಷದವರು ಎಂದು ಹೇಳಬಾರದು. ಶಿಕ್ಷಣದಲ್ಲಿ ಸತ್ಯನಿಷ್ಟತೆ ಇರಬೇಕು" ಎಂದು ಹೇಳಿದ್ದಾರೆ.


"ಮುಂದೆಯೂ ಕೂಡ ಪರಿಸ್ಥಿತಿಯಲ್ಲಿ ಬದಲಾವಣೆಯಾಗಲಿದೆ ಎಂಬುದಾಗಿ ತಾವು ಆಶಿಸುವೆವು ಮತ್ತು ಎಲ್ಲ ಬಣ್ಣಗಳು ಒಂದಾಗಲಿವೆ. ತಮ್ಮ ಆಂದೋಲನದಲ್ಲಿ ಯಾವುದೇ ತಪ್ಪಾಗಿದ್ದರೆ ಗಾಂಧಿಜಿ ಅದರ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಿದ್ದರು.  ಆದರೆ, ಇಂದು ನಡೆಸಲಾಗುವ ಆಂದೋಲನದಲ್ಲಿ ಯಾರೂ ಪ್ರಾಯಶ್ಚಿತ್ತ ಮಾಡುವುದಿಲ್ಲ. ಆದರೆ, ಇಂದಿನ ಆಂದೋಲನಗಳಲ್ಲಿ ಹೊಡೆದು ಜೈಲು ಸೇರುವವರು ಮಾತ್ರ ಪ್ರಾಯಶ್ಚಿತ್ತ ಮಾಡುತ್ತಾರೆ. ಯಾರು ಪ್ರಾಯಶ್ಚಿತ್ತ ಮಾಡುತ್ತಾರೋ ಅಂತಿಮವಾಗಿ ಅವರೇ ಗೆಲ್ಲುತ್ತಾರೆ" ಎಂದು ಮೋಹನ್ ಭಾಗವತ್ ಹೇಳಿದ್ದಾರೆ.