Lok Sabha Elections 2024 Schedule : ಲೋಕಸಭೆ ಚುನಾವಣೆ 2024ರ  ದಿನಾಂಕ ನಾಳೆ ಪ್ರಕಟವಾಗಲಿದೆ. ಚುನಾವಣಾ ಆಯೋಗ (ECI) ನಾಳೆ ಮಧ್ಯಾಹ್ನ 3 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಿ ಚುನವಣಾ ದಿನಾಂಕ ಪ್ರಕಟಿಸಲಿದೆ. ಸಾರ್ವತ್ರಿಕ ಚುನಾವಣೆಗಳ ಜೊತೆಗೆ ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನೂ ಆಯೋಗ ಇದೇ ವೇಳೆ ಪ್ರಕಟಿಸಲಿದೆ.ಚುನಾವಣೆ ಘೋಷಣೆಯಾದ ತಕ್ಷಣ ನೀತಿ ಸಂಹಿತೆ (MCC) ಜಾರಿಗೆ ಬರಲಿದೆ. ಮುಖ್ಯ ಚುನಾವಣಾ ಆಯುಕ್ತ (CEC) ರಾಜೀವ್ ಕುಮಾರ್ ಅವರು ನೀತಿ ಸಂಹಿತೆ ಜಾರಿಯನ್ನು ಪ್ರಕಟಿಸಲಿದ್ದಾರೆ.


COMMERCIAL BREAK
SCROLL TO CONTINUE READING

ಮಾದರಿ ನೀತಿ ಸಂಹಿತೆ ಎಂದರೆ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ನೀಡುವ ಮಾರ್ಗಸೂಚಿಗಳು.ಚುನಾವಣೆ ಘೋಷಣೆಯಾದಾಗಿನಿಂದ ಫಲಿತಾಂಶ ಪ್ರಕಟವಾಗುವವರೆಗೆ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ.ಸಂವಿಧಾನದಲ್ಲಿ ಮಾದರಿ ನೀತಿ ಸಂಹಿತೆಗೆ ಅವಕಾಶವಿಲ್ಲ.ಭಾರತದ ಚುನಾವಣಾ ಪ್ರಕ್ರಿಯೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಪ್ರಸಿದ್ಧ ಚುನಾವಣಾ ಆಯುಕ್ತ ಟಿಎನ್ ಶೇಷನ್ ಅವರು ಕಟ್ಟುನಿಟ್ಟಾಗಿ ಜಾರಿಗೆ ತಂದರು. MCC ಅಡಿಯಲ್ಲಿ, ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಅನುಸರಿಸಬೇಕಾದ ಕೆಲವು ನಿಯಮಗಳಿವೆ. ಈ ನಿಯಮಗಳು  ಉಲ್ಲಂಘನೆಯಾದಲ್ಲಿ ಚುನಾವಣಾ ಆಯೋಗ ಕಠಿಣ ಕ್ರಮ ಕೈಗೊಳ್ಳುತ್ತದೆ.


ಇದನ್ನೂ ಓದಿ : Lok Sabha Election Date: ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಗೆ ಮುಹೂರ್ತ ಫಿಕ್ಸ್


ಲೋಕಸಭೆ ಚುನಾವಣೆ 2024: ಮಾದರಿ ನೀತಿ ಸಂಹಿತೆ ಎಂದರೇನು ?: 
ಮಾದರಿ ನೀತಿ ಸಂಹಿತೆಯು ಚುನಾವಣಾ ಆಯೋಗವು ಮಾಡಿರುವ ಮಾರ್ಗಸೂಚಿಗಳ ಸಂಗ್ರಹವಾಗಿದೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುವ ಉದ್ದೇಶದಿಂದ ಇದನು ಜಾರಿಗೆ ತರಲಾಗುತ್ತದೆ. ಸದರಿ ನೀತಿ ಸಂಹಿತೆಯನ್ನು ಎಂಟು ಭಾಗಗಳಾಗಿ ವಿಂಗಡಿಸಲಾಗಿದೆ. ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದ ನಿಯಮಗಳು, ಜಾಹೀರಾತುಗಳು ಮತ್ತು ನಡವಳಿಕೆಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಒಳಗೊಂಡಿದೆ. MCC ಕಾನೂನುಬದ್ಧವಾಗಿ ಪರಿಣಾಮಕಾರಿಯಾಗಿಲ್ಲ ಆದರೆ ಚುನಾವಣಾ ಆಯೋಗವು ಜನಪ್ರತಿನಿಧಿ ಕಾಯಿದೆಯಡಿ ತನ್ನ ಅಧಿಕಾರವನ್ನು ಚಲಾಯಿಸುತ್ತದೆ.


ಮಾದರಿ ನೀತಿ ಸಂಹಿತೆಯ ಮುಖ್ಯ ನಿಯಮಗಳು :
ಮಾದರಿ ನೀತಿ ಸಂಹಿತೆ ಜಾರಿಯಾದ ತಕ್ಷಣದಿಂದ ಸರ್ಕಾರ ಜನಪರ ಘೋಷಣೆಗಳನ್ನು ಮಾಡುವಂತಿಲ್ಲ. ಸರ್ಕಾರ ಯಾವುದೇ ನೀತಿ ನಿರ್ಧಾರ ಕೈಗೊಳ್ಳುವಂತಿಲ್ಲ.


MCC ಜಾರಿಯಲ್ಲಿರುವಾಗ, ಯಾವುದೇ ಹೊಸ ಯೋಜನೆಗಳನ್ನು ಜಾರಿಗೆ ತರುವಂತಿಲ್ಲ. ಮಂತ್ರಿಗಳು ಚುನಾವಣಾ ಕೆಲಸಗಳಿಗೆ ಸರ್ಕಾರಿ ಯಂತ್ರಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ.


ಮಾದರಿ ನೀತಿ ಸಂಹಿತೆಯ ಅವಧಿಯಲ್ಲಿ ಸರ್ಕಾರವು ಯಾವುದೇ ರೀತಿಯ ಹಣಕಾಸಿನ ಅನುದಾನ, ರಸ್ತೆ ಅಥವಾ ಇತರ ಸೌಲಭ್ಯಗಳ ಭರವಸೆ, ತಾತ್ಕಾಲಿಕ ನೇಮಕಾತಿ ಮಾಡಲು ಸಾಧ್ಯವಿಲ್ಲ.


ಇದನ್ನೂ ಓದಿ : CAA: ಈ ಮೂರು ರಾಜ್ಯಗಳಲ್ಲಿ ಜಾರಿಯಾಗುವುದಿಲ್ಲ ಸಿಎಎ, ಮುಖ್ಯಮಂತ್ರಿಗಳು ಹೇಳಿದ್ದೇನು?


ಮಾದರಿ ನೀತಿ ಸಂಹಿತೆ ಈಗಾಗಲೇ ಜಾರಿಯಲ್ಲಿರುವ ಅಭಿವೃದ್ಧಿ ಕಾಮಗಾರಿಗಳು ಮತ್ತು ಯೋಜನೆಗಳಿಗೆ ಅಡ್ಡಿಯಾಗುವುದಿಲ್ಲ.ಚುನಾವಣಾ ಪ್ರಚಾರಕ್ಕೆ ಅವುಗಳ ಬಳಕೆಯ ಮೇಲೆ ಖಂಡಿತವಾಗಿಯೂ ನಿಷೇಧವಿರುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.