Agnipath Scheme : ಅಗ್ನಿಪಥ ಯೋಜನೆಗೆ ಸಂಬಂಧಿಸಿದಂತೆ ಇಂದು ಭಾರತೀಯ ಮೂರು ಸೇನೆಗಳ ಜಂಟಿ ಸುದ್ದಿಗೋಷ್ಠಿ ನಡೆಸಿ ಸಂಪೂರ್ಣ ಮಾಹಿತಿ ನೀಡಿವೆ. ಅಲ್ಲದೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅಗ್ನಿಪಥ ಯೋಜನೆಗೆ ಸಂಬಂಧಿಸಿದಂತೆ ಮೂರು ಸೇನಾ ಮುಖ್ಯಸ್ಥರ ಜೊತೆ ಚರ್ಚೆ ನಡೆಸಿದರು. ಅದರ ನಂತರ ಇದೀಗ ಸೇನಾ ಅಧಿಕಾರಿಗಳು ಯೋಜನೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.


COMMERCIAL BREAK
SCROLL TO CONTINUE READING

ಪ್ರತಿ ವರ್ಷ ಸುಮಾರು 17,600 ಸಿಬ್ಬಂದಿ ಅಕಾಲಿಕ ನಿವೃತ್ತಿ ಹೊಂದುತ್ತಾರೆ, ಇದು ಕೂಡ ಅಗ್ನಿಪಥ್ ಯೋಜನೆಯಡಿ ಮಾತ್ರವಲ್ಲ ಇಲ್ಲದಿದ್ದರೂ ಹೊರಬರುತ್ತಾರೆ ಎಂದು ಈ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಶಸ್ತ್ರ ಪಡೆಗಳ ವಯಸ್ಸಿಗೆ ಸಂಬಂಧಿಸಿದ ಪ್ರೊಫೈಲ್ ಅನ್ನು ಕಡಿಮೆ ಮಾಡಲು ನಾವು ಈ ಸುಧಾರಣೆಯನ್ನು ತರುತ್ತಿದ್ದೇವೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿ ಅಗ್ನಿಪಥ್ ನೇಮಕಾತಿ ಯೋಜನೆಯಲ್ಲಿ ತಿಳಿಸಿದ್ದಾರೆ.


ಇದನ್ನೂ ಓದಿ : ಅಗ್ನಿಪಥ್ ವಿರುದ್ಧ ಬಿಹಾರದಲ್ಲಿ ಗಲಾಟೆ ಏಕೆ? ಕಾರಣ ತಿಳಿಸಿದ ಪ್ರಶಾಂತ್ ಕಿಶೋರ್! 


4 ವರ್ಷಗಳ ನಂತರ ಅಗ್ನಿವೀರರಿಗೆ ಅವಕಾಶಗಳೇನು?


ಈ ಪ್ರಶ್ನೆಗೆ ಉತ್ತರಿಸಿದ ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ, 4 ವರ್ಷಗಳ ನಂತರ ಅಗ್ನಿವೀರರಿಗೆ ಅವಕಾಶಗಳೇನು? ಇದಕ್ಕೆ ಪ್ರತಿಕ್ರಿಯಿಸಿದ ಅವರು, ಒಮ್ಮೆ ಸೇನೆಗೆ ಸೇರಿದರೆ ಅವರನ್ನು ಸೈನಿಕ ಎಂದೇ ಕರೆಯುತ್ತಾರೆ. ಹೀಗಾಗಿ ಅವರಿಗೆ ಶೇ.25 ರಷ್ಟು ಜನರಿಗೆ ಮತ್ತಷ್ಟು ಉದ್ಯೋಗ ನೀಡುತ್ತೇವೆ. ಉಳಿದ ಶೇ. 75 ರಷ್ಟು ಜನರು ತಮ್ಮ ರಾಜ್ಯಗಳಿಗೆ ಹಿಂತಿರುಗುತ್ತಾರೆ, ಅವರು ಅನೇಕ ಸ್ಥಳಗಳಲ್ಲಿ ಉದ್ಯೋಗಾವಕಾಶಗಳನ್ನು ಪಡೆಯುತ್ತಾರೆ. ಪ್ರಕ್ರಿಯೆ ಮುಂದುವರಿಯಲಿ, ಅವುಗಳ ಬಗ್ಗೆಯೂ ಒಂದಿಷ್ಟು ಪರಿಹಾರ ಕಂಡುಕೊಳ್ಳಲಾಗುವುದು ಎಂದರು.


ಸಾಮಾನ್ಯ ಸೈನಿಕನಿಗಿಂತ ಅಗ್ನಿವೀರರು ಹೇಗೆ ಭಿನ್ನ?


ಅಗ್ನಿವೀರರು ಸೇವಾ ಷರತ್ತುಗಳು ಸಾಮಾನ್ಯ ಸೈನಿಕರಂತೆಯೇ ಇರುತ್ತವೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿ ತಿಳಿಸಿದ್ದಾರೆ. ಇಲ್ಲಿಯವರೆಗೆ ಇವರ ಸೇವಾ ನಿಯಮಗಳಲ್ಲಿ ಯಾವುದೇ ವ್ಯತ್ಯಾಸವನ್ನು ಹೇಳಿಲ್ಲ.


ನೇಮಕಾತಿ ಯಾವಾಗ ಪ್ರಾರಂಭವಾಗುತ್ತದೆ?


ವಾಯುಪಡೆಯು ಅಗ್ನಿಪಥ್ ಯೋಜನೆಯಡಿ ನೋಂದಣಿ ಪ್ರಕ್ರಿಯೆಯನ್ನು ಜೂನ್ 24 ರಂದು ಪ್ರಾರಂಭಿಸುತ್ತದೆ, ಆನ್‌ಲೈನ್ ಪರೀಕ್ಷೆ ಪ್ರಕ್ರಿಯೆಯು ಜುಲೈ 24 ರಂದು ಪ್ರಾರಂಭವಾಗುತ್ತದೆ. ಅಗ್ನಿವೀರ್‌ಗಳ ಮೊದಲ ಬ್ಯಾಚ್ ಡಿಸೆಂಬರ್‌ನಲ್ಲಿ ವಾಯುಪಡೆಗೆ ಸೇರ್ಪಡೆಗೊಳ್ಳಲಿದ್ದು, ಡಿಸೆಂಬರ್ 30 ರಂದು ತರಬೇತಿ ಪ್ರಾರಂಭವಾಗುತ್ತದೆ.


ಇದನ್ನೂ ಓದಿ : Viral Video: ವಿದ್ಯಾರ್ಥಿನಿಯರೊಂದಿಗೆ ಸರ್ಕಾರಿ ಶಾಲಾ ಶಿಕ್ಷಕಿಯ ಭರ್ಜರಿ ಡ್ಯಾನ್ಸ್..!


ಹಿಂಪಡೆಯುವುದಿಲ್ಲ ಈ ಯೋಜನೆ


ಈ ಯೋಜನೆಯನ್ನು ಹಿಂಪಡೆಯುವಂತೆ ಪ್ರತಿಪಕ್ಷಗಳ ನಿರಂತರ ಆಗ್ರಹವಿದೆ. ಆದರೆ ಈ ಯೋಜನೆಯನ್ನು  ಹಿಂಪಡೆಯುವುದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.