ನವದೆಹಲಿ: ಅಯೋಧ್ಯೆ ಪ್ರಕರಣಕ್ಕೆ(Ayodhya case) ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಇಂದು ಬೆಳಿಗ್ಗೆ 10: 30 ಕ್ಕೆ ತೀರ್ಪು ನೀಡಲಿದೆ. ತೀರ್ಪು ಬರುವ ಮೊದಲು ಪ್ರಧಾನಿ ನರೇಂದ್ರ ಮೋದಿ (Narendra modi) ಮೂರು ಸರಣಿ ಟ್ವೀಟ್‌ಗಳನ್ನು ಮಾಡಿದ್ದು, ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕೆಂದು ದೇಶವಾಸಿಗಳಿಗೆ ಮನವಿ ಮಾಡಿದ್ದಾರೆ. 'ಅಯೋಧ್ಯೆ ಕುರಿತು ಶನಿವಾರ ಸುಪ್ರೀಂ ಕೋರ್ಟ್‌ನ(Supreme Court) ತೀರ್ಪು ಬರಲಿದೆ' ಎಂದು ಪಿಎಂ ಮೋದಿ ಮೊದಲ ಟ್ವೀಟ್‌ನಲ್ಲಿ ಬರೆದಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಸುಪ್ರೀಂ ಕೋರ್ಟ್ ಈ ವಿಷಯದ ಬಗ್ಗೆ ನಿರಂತರವಾಗಿ ವಿಚಾರಣೆ ನಡೆಸುತ್ತಿತ್ತು, ಇಡೀ ದೇಶವು ಕುತೂಹಲದಿಂದ ಇದರ ತೀರ್ಪಿಗಾಗಿ ಎದುರು ನೋಡುತ್ತಿತ್ತು. ಈ ಸಮಯದಲ್ಲಿ, ಸಮಾಜದ ಎಲ್ಲಾ ವರ್ಗದವರು ಸದ್ಭಾವನೆಯ ವಾತಾವರಣವನ್ನು ಕಾಪಾಡಿಕೊಳ್ಳಲು ಮಾಡಿದ ಪ್ರಯತ್ನಗಳನ್ನು ಬಹಳವಾಗಿ ಪ್ರಶಂಸಿಸಲಾಗುತ್ತದೆ.


COMMERCIAL BREAK
SCROLL TO CONTINUE READING

ಇದರ ಬೆನ್ನಲ್ಲೇ ಇನ್ನೊಂದು ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, 'ಸಮಾಜದ ಎಲ್ಲರೂ, ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆಗಳು, ಎಲ್ಲಾ ಪಕ್ಷಗಳು ಈ ಹಿಂದೆ ಸಾಮರಸ್ಯ ಮತ್ತು ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸಿದ್ದು, ದೇಶದ ನ್ಯಾಯಾಂಗದ ಗೌರವವನ್ನು ಉಳಿಸಿಕೊಂಡಿದೆ. ಈಗಲೂ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸೋಣ. ನ್ಯಾಯಾಲಯದ ತೀರ್ಪಿನ ನಂತರವೂ ನಾವೆಲ್ಲರೂ ಒಟ್ಟಾಗಿ ಸಾಮರಸ್ಯವನ್ನು ಕಾಪಾಡಿಕೊಳ್ಳಬೇಕು.


ಅದೇ ಸಮಯದಲ್ಲಿ, 'ಅಯೋಧ್ಯೆಯ ಬಗ್ಗೆ ಸುಪ್ರೀಂ ಕೋರ್ಟ್‌ ಯಾವುದೇ ತೀರ್ಪು ಪ್ರಕಟಿಸಲಿ, ಅದು ಯಾರಿಗೂ ಗೆಲುವು ಅಥವಾ ಸೋಲು ಆಗುವುದಿಲ್ಲ. ಈ ನಿರ್ಧಾರವು ಭಾರತದ ಶಾಂತಿ, ಐಕ್ಯತೆ ಮತ್ತು ಸದ್ಭಾವನೆಯ ಶ್ರೇಷ್ಠ ಸಂಪ್ರದಾಯವನ್ನು ಮತ್ತಷ್ಟು ಬಲಪಡಿಸಬೇಕು ಎಂಬುದು ನಮ್ಮೆಲ್ಲರ ಆದ್ಯತೆಯಾಗಿರಬೇಕು ಎಂಬುದು ದೇಶವಾಸಿಗಳಿಗೆ ನನ್ನ ಮನವಿ' ಎಂದು  ಈ ವಿಷಯದ ಬಗ್ಗೆ ತಮ್ಮ ಕೊನೆಯ ಟ್ವೀಟ್‌ನಲ್ಲಿ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ.



ಪ್ರಾದೇಶಿಕ ವದಂತಿಗಳನ್ನು ನಿರ್ಲಕ್ಷಿಸಿ: ಸಿಎಂ ಯೋಗಿ
ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, "ಅಯೋಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೌರವಾನ್ವಿತ ಸುಪ್ರೀಂ ಕೋರ್ಟ್ ನೀಡುವ ಸಂಭಾವ್ಯ ನಿರ್ಧಾರವನ್ನು ಗಮನದಲ್ಲಿಟ್ಟುಕೊಂಡು, ಮುಂಬರುವ ನಿರ್ಧಾರವನ್ನು ಗೆಲುವು-ನಷ್ಟವೆಂದು ನೋಡಬಾರದು ಎಂದು ರಾಜ್ಯದ ಜನರಿಗೆ ಮನವಿ" ಎಂದು ಹೇಳಿದರು. ರಾಜ್ಯದಲ್ಲಿ ಶಾಂತಿಯುತ ಮತ್ತು ಸೌಹಾರ್ದಯುತ ವಾತಾವರಣವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ವದಂತಿಗಳನ್ನು ನಿರ್ಲಕ್ಷಿಸುವಂತೆ ನಾನು ದೇಶದ ಜನರಿಗೆ ಮನವಿ ಮಾಡುತ್ತೇನೆ. ಎಲ್ಲರನ್ನೂ ರಕ್ಷಿಸಲು ಮತ್ತು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಆಡಳಿತ ಸಂಪೂರ್ಣ ಬದ್ಧವಾಗಿದೆ. ಯಾವುದೇ ವ್ಯಕ್ತಿ ಕಾನೂನು ಸುವ್ಯವಸ್ಥೆಯೊಂದಿಗೆ ಆಟವಾಡಲು ಪ್ರಯತ್ನಿಸಿದರೆ, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.


ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಮಾತನಾಡಿ, 'ಅಯೋಧ್ಯೆ ಪ್ರಕರಣದ ತೀರ್ಪು ಬರುತ್ತಿದೆ. ತೀರ್ಪು ಏನೇ ಇದ್ದರೂ ಎಲ್ಲರೂ ನ್ಯಾಯಾಲಯದ ತೀರ್ಪನ್ನು ಗೌರವಿಸಬೇಕು ಎಂದು ದೇಶದ ಎಲ್ಲ ಜನರಿಗೆ ನಾನು ಮನವಿ ಮಾಡುತ್ತೇನೆ. ಈ ತೀರ್ಪು ಯಾರಿಗೂ ಸೋಲು ಅಥವಾ ಗೆಲುವಲ್ಲ. ಅದನ್ನು ಹೃದಯದಿಂದ ಸ್ವೀಕರಿಸಿ, ದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ನಾವು ಯಾವುದೇ ವರ್ಗ ಮತ್ತು ಸಮಾಜದವರೇ ಆಗಿರಲಿ, ಧರ್ಮವನ್ನು ನಂಬಿ, ಒಗ್ಗಟ್ಟಿನಿಂದ ಉಳಿಯುತ್ತೇವೆ. ಶಾಂತಿಯನ್ನು ಕಾಪಾಡಿಕೊಳ್ಳಿ ಎಂದಿದ್ದಾರೆ.