Whatsapp Fake Message Alert: ಭಾರತದಲ್ಲಿ ಹೆಚ್ಚು ಬಳಕೆಯಾಗುವ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ನಲ್ಲಿ ಕೆಲ ದಿನಗಳಿಂದ ನಕಲಿ ಸಂದೇಶವನ್ನು ಪ್ರಸಾರ ಮಾಡಲಾಗುತ್ತಿದೆ. ಈ ನಕಲಿ ಸಂದೇಶದಿಂದ ಎಚ್ಚರವಾಗಿರಲು ಸರ್ಕಾರ ಎಲ್ಲಾ ಬಳಕೆದಾರರಿಗೆ ಸೂಚನೆ ನೀಡಿದೆ. ಕರೋನಾ ಯುಗದಲ್ಲಿ ಸೈಬರ್ ವಂಚನೆ ವೇಗವಾಗಿ ಬೆಳೆಯುತ್ತಿದೆ. ಹ್ಯಾಕರ್‌ಗಳು ಇದರ ಲಾಭವನ್ನು ಪಡೆದುಕೊಳ್ಳುತ್ತಿದ್ದು, ಬಳಕೆದಾರರನ್ನು ಹೊಸ ರೀತಿಯಲ್ಲಿ ಬಲೆಗೆ ಬೀಳಿಸಲು ಪ್ರಯತ್ನಿಸುತ್ತಿದ್ದಾರೆ. ಬಳಕೆದಾರರು ಕಾಲಕಾಲಕ್ಕೆ ಜಾಗರೂಕರಾಗಿರಲು ಸರ್ಕಾರವು ಎಚ್ಚರಿಕೆಗಳನ್ನು ನೀಡುತ್ತದೆ ಎಂಬುದು ಇಲ್ಲಿ ಗಮನಾರ್ಥ.


WhatsApp OTP ಹಗರಣ ಎಂದರೇನು? ಅದನ್ನು ಹೇಗೆ ತಪ್ಪಿಸಬೇಕು ಎಂದು ತಿಳಿಯಿರಿ


COMMERCIAL BREAK
SCROLL TO CONTINUE READING

ಸರ್ಕಾರ ಜಾರಿಗೊಳಿಸಿದೆ ಈ Alert
PIB Fact Check ತನ್ನ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಸರ್ಕಾರದ ಪರವಾಗಿ ಪೋಸ್ಟ್ ಪ್ರಕಟಿಸುವ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದೆ. ಪೋಸ್ಟ್ ಪ್ರಕಾರ, ಈ ಸಂದೇಶವನ್ನು ಸಂಪೂರ್ಣವಾಗಿ ನಕಲಿ ಎಂದು ಹೇಳಲಾಗಿದೆ. ಕೋವಿಡ್ ಬಗ್ಗೆ ಸರ್ಕಾರ ಅಂತಹ ಯಾವುದೇ ಫಂಡ್ ಬಿಡುಗಡೆ ಮಾಡಿಲ್ಲ. ಅಪ್ಪಿ-ತಪ್ಪಿಯೂ ಕೂಡ ಈ ಸಂದೇಶವನ್ನು ಬೇರೆ ಯಾರಿಗೂ ಫಾರ್ವರ್ಡ್ ಮಾಡದಂತೆ  ಬಳಕೆದಾರರಿಗೆ ಎಚ್ಚರಿಕೆ ನೀಡಲಾಗಿದೆ, ಹಾಗೆಯೇ ಈ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ. ಇಂತಹ ಸಂದೇಶಗಳು ನಿಮ್ಮ ಫೋನ್ ಅನ್ನು ಹ್ಯಾಕ್ ಮಾಡಬಹುದು, ನಿಮ್ಮ ವೈಯಕ್ತಿಕ ವಿವರಗಳನ್ನು ಕದಿಯಬಹುದು, ಜೊತೆಗೆ ನಿಮ್ಮ ಬ್ಯಾಂಕ್ ಖಾತೆಯಿಂದ ಹಣವನ್ನು ಕದಿಯಬಹುದು ಎಂದು ಎಚ್ಚರಿಕೆ ಕೂಡ ನೀಡಲಾಗಿದೆ.

Claim: A message circulating on #WhatsApp claims that the Government has ordered payment of ₹130,000 as #Covid funding to all citizens above the age of 18.#PIBFactCheck: The claim is #Fake. No such announcement has been made by the Government. pic.twitter.com/NF8dH08wLW


ಇದನ್ನು ಓದಿ-ಆನ್ಲೈನ್ ಶಾಪಿಂಗ್ ಸೇರಿದಂತೆ ಇತ್ತೀಚೆಗೆ 5 ಉತ್ತಮ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡಿದ WhatsApp


ಇಂತಹ ಮೆಸೇಜ್ ಗಳನ್ನು ಫಾರ್ವರ್ಡ್ ಮಾಡುವುದರಿಂದ ದೂರ ಇರಿ
ಈ ಸಂದೇಶದಲ್ಲಿ, ಕೋವಿಡ್ -19 ಫಂಡ್ ನಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಭಾರತೀಯ ನಾಗರಿಕರಿಗೆ 1.30 ಲಕ್ಷ ರೂ. ನೀಡಲಾಗುವುದು ಎನ್ನಲಾಗಿದೆ. ಆದರೆ, ಈ ಸಂದೇಶವು ಸಂಪೂರ್ಣವಾಗಿ ನಕಲಿ. ಈ ಸಂದೇಶಕ್ಕೆ ಲಿಂಕ್ ಅನ್ನು ಸಹ ಸೇರಿಸಲಾಗಿದೆ. ಈ ಲಿಂಕ್ ಅನ್ನು ಕ್ಲಿಕ್ ಮಾಡುವುದರ ಮೂಲಕ, 1.30 ಲಕ್ಷ ರೂ.ಗಳ ಹಣ ಯಾರಿಗೆ ಸಿಗಲಿದೆ ಮತ್ತು ಯಾರಿಗೆ ಇಲ್ಲ ಎಂಬುದನ್ನು ಪರಿಶೀಲಿಸಬಹುದು ಎಂದು ಹೇಳಲಾಗಿದೆ.


ಇದನ್ನು ಓದಿ- ವಾಟ್ಸಾಪ್‌ನಲ್ಲಿಯೇ ತೆರೆಯಿರಿ Fixed Deposit, ಇಲ್ಲಿದೆ ಅದನ್ನು ಬಳಸುವ ಸುಲಭ ವಿಧಾನ


ಈ ವಿಷಯಗಳನ್ನು  ನೆನಪಿನಲ್ಲಿಟ್ಟುಕೊಳ್ಳಿ
ಈ ಮೊದಲು ಕೂಡ  ಇಂತಹ ಅನೇಕ ನಕಲಿ ಸಂದೇಶಗಳನ್ನು ವಾಟ್ಸಾಪ್‌ನಲ್ಲಿ (WhatsApp) ಹಂಚಿಕೊಳ್ಳಲಾಗಿದೆ. ಈ ಕುರಿತು ಬಳಕೆದಾರರಿಗೆ ಎಚ್ಚರಿಕೆ ನೀಡಲಾಗಿದೆ. ಇಂತಹ  ಸಂದೇಶಗಳಿಗೆ ಬಲಿಯಾಗುವುದರಿಂದ ಪಾರಾಗಲು ಜಾಗರೂಕರಾಗಿರುವುದು ತುಂಬಾ ಆವಶ್ಯಕ.  ವಾಟ್ಸಾಪ್ನಲ್ಲಿ ಯಾವುದೇ ಅಜ್ಞಾತ ಸಂಖ್ಯೆಯಿಂದ ಬಂದ ವಾಟ್ಸಾಪ್ ಸಂದೇಶಗಳನ್ನು ನಂಬಬೇಡಿ. ವಾಟ್ಸಾಪ್‌ನಲ್ಲಿನ ಪ್ರತಿಯೊಂದು ಲಿಂಕ್ ಅನ್ನು ಕ್ಲಿಕ್ ಮಾಡುವುದನ್ನು ತಪ್ಪಿಸಿ. ಅಂತಹ ಸಂದೇಶಗಳನ್ನು ಯಾರಿಗೂ ರವಾನಿಸಬೇಡಿ. ಖಾತೆ ವಿವರಗಳನ್ನು ವಾಟ್ಸಾಪ್‌ನಲ್ಲಿ ಯಾರೊಂದಿಗೂ ಹಂಚಿಕೊಳ್ಳಬೇಡಿ.