ಈ ರಾಜ್ಯದಲ್ಲಿ 4.3 ಲಕ್ಷ ಮೆಟ್ರಿಕ್ ಟನ್ ಗೋಧಿ ಖರೀದಿಸಿದ ಸರ್ಕಾರಿ ಸಂಸ್ಥೆ!
“ಸರ್ಕಾರಿ ಸಂಸ್ಥೆಗಳು ಏಪ್ರಿಲ್ 10 ರವರೆಗೆ ಒಟ್ಟು 4.3 ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ಖರೀದಿಸಿದೆ. ಇದು ಕಳೆದ ಐದು ವರ್ಷಗಳಲ್ಲಿ ಅನುಗುಣವಾದ ದಿನಾಂಕದವರೆಗೆ ಗೋಧಿ ಖರೀದಿಯ ಎಲ್ಲಾ ದಾಖಲೆಗಳನ್ನು ಮುರಿದಿದೆ` ಎಂದು ಹೇಳಿದೆ.
ಚಂಡೀಗಢ (ಪಂಜಾಬ್) : ಸರ್ಕಾರಿ ಸಂಸ್ಥೆಗಳು 4.3 ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ಖರೀದಿಸುವ ಮೂಲಕ ಪಂಜಾಬ್‌ನಲ್ಲಿ ಗೋಧಿ ಖರೀದಿ ಐದು ವರ್ಷಗಳ ದಾಖಲೆಯನ್ನು ಮುರಿದಿದೆ ಎಂದು ಪಂಜಾಬ್‌ನ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ತಿಳಿಸಿದೆ.
“ಸರ್ಕಾರಿ ಸಂಸ್ಥೆಗಳು ಏಪ್ರಿಲ್ 10 ರವರೆಗೆ ಒಟ್ಟು 4.3 ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ಖರೀದಿಸಿದೆ. ಇದು ಕಳೆದ ಐದು ವರ್ಷಗಳಲ್ಲಿ ಅನುಗುಣವಾದ ದಿನಾಂಕದವರೆಗೆ ಗೋಧಿ ಖರೀದಿಯ ಎಲ್ಲಾ ದಾಖಲೆಗಳನ್ನು ಮುರಿದಿದೆ" ಎಂದು ಹೇಳಿದೆ.
ಇದನ್ನು ಓದಿ: Covid-19 XE Variant: ಭಾರತದಲ್ಲಿ ನಾಲ್ಕನೇ ಅಲೆ ತರಲಿದೆಯೇ XE ರೂಪಾಂತರ!
ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಗೋಧಿ ಬೆಳೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಸಂಸ್ಥೆಗಳು ಬೆಳೆಯನ್ನು ಖರೀದಿಸಲು ಹೆಚ್ಚಿನ ಮಟ್ಟದಲ್ಲಿ ಶ್ರಮಿಸುತ್ತಿದೆ. ಈ ವರ್ಷ ಸರ್ಕಾರಿ ಏಜೆನ್ಸಿಗಳು ಈಗಾಗಲೇ 4.3 ಲಕ್ಷ ಮೆ.ಟನ್ ಗೋಧಿಯನ್ನು ಸಂಗ್ರಹಿಸಿವೆ.
ಇನ್ನು 138 ಕೋಟಿ ರೂಪಾಯಿ ಮೌಲ್ಯದ ಎಂಎಸ್‌ಪಿ ಪಾವತಿಗಳನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ರಾಜ್ಯ ಸರ್ಕಾರವು ಈಗಾಗಲೇ ಖಚಿತಪಡಿಸಿದೆ ಎಂದು ಸಾರ್ವಜನಿಕ ಸಂಪರ್ಕ ಇಲಾಖೆ ತಿಳಿಸಿದೆ.
ಇದನ್ನು ಓದಿ: Ekadashi: ಪಾಪಗಳಿಂದ ಮುಕ್ತಿ ನೀಡುವ ಏಕಾದಶಿ ಉಪವಾಸವನ್ನು ಈ ರೀತಿ ಆಚರಿಸಿ, ಸಿಗುತ್ತೆ ಪೂರ್ಣ ಫಲ
ರಾಜ್ಯ ಸರ್ಕಾರವು ಮಾಡಿದ ನಿಖರವಾದ ವ್ಯವಸ್ಥೆಗಳ ಪರಿಣಾಮವಾಗಿ ಗೋಧಿ ಸಂಗ್ರಹ ಇಷ್ಟರಮಟ್ಟಿಗೆ ದಾಖಲೆ ಮಾಡಿದೆ. ರೈತರು ಕಷ್ಟಪಟ್ಟು ಸಂಪಾದಿಸಿದ ಉತ್ಪನ್ನಗಳ ತಡೆರಹಿತ ಮಾರಾಟಕ್ಕೆ ಅನುಕೂಲವಾಗುವಂತೆ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.