ಬೆಲೆ ಏರಿಕೆ ಮಾಡುವುದು ನಿಮ್ಮ ಜನ್ಮಸಿದ್ದ ಹಕ್ಕೇ?: ಸಿಎಂ ಬೊಮ್ಮಾಯಿಗೆ ಕಾಂಗ್ರೆಸ್ ಪ್ರಶ್ನೆ

ಕೇಸರಿ ಕನ್ನಡಕದೊಳಗಿಂದ ನಿಮಗೆ ಜನರ ಕಷ್ಟ ಕಾಣದಿರಬಹುದು, ನಮಗೆ ಕಾಣುತ್ತಿದೆ ಎಂದು ಟ್ವೀಟ್ ಮಾಡಿರುವ ಕಾಂಗ್ರೆಸ್ ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸಿದೆ.

Written by - Zee Kannada News Desk | Last Updated : Apr 11, 2022, 08:05 PM IST
  • ಸಿಎಂ ಬಸವರಾಜ್ ಬೊಮ್ಮಾಯಿಯವರೇ ಬೆಲೆ ಏರಿಕೆ ಮಾಡುವುದು ನಿಮ್ಮ ಜನ್ಮಸಿದ್ದ ಹಕ್ಕೇ?
  • ಕೇಸರಿ ಕನ್ನಡಕದೊಳಗಿಂದ ನಿಮಗೆ ಜನರ ಕಷ್ಟ ಕಾಣದಿರಬಹುದು, ನಮಗೆ ಕಾಣುತ್ತಿದೆ
  • ಮುಖ್ಯಮಂತ್ರಿಗಳೇ.... ಕಣ್ಣು-ಕಿವಿಗಳು, ಮೆದುಳು ಸಮರ್ಪಕವಾಗಿ ಕೆಲಸ ಮಾಡುತ್ತಿವೆಯೇ?
ಬೆಲೆ ಏರಿಕೆ ಮಾಡುವುದು ನಿಮ್ಮ ಜನ್ಮಸಿದ್ದ ಹಕ್ಕೇ?: ಸಿಎಂ ಬೊಮ್ಮಾಯಿಗೆ ಕಾಂಗ್ರೆಸ್ ಪ್ರಶ್ನೆ title=
ಸಿಎಂ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಬೆಂಗಳೂರು: ಬೆಲೆ ಏರಿಕೆ ಬಗ್ಗೆ ಪ್ರತಿಭಟಿಸಲು ಕಾಂಗ್ರೆಸ್‍ಗೆ ನೈತಿಕ ಹಕ್ಕಿಲ್ಲವೆಂಬ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದ್ದು, ತೀವ್ರ ವಾಗ್ದಾಳಿ ನಡೆಸಿದೆ.

ಈ ಬಗ್ಗೆ ಸೋಮವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಸಿಎಂ ಬಸವರಾಜ್ ಬೊಮ್ಮಾಯಿಯವರೇ ಬೆಲೆ ಏರಿಕೆ ಮಾಡುವುದು ನಿಮ್ಮ ಜನ್ಮಸಿದ್ದ ಹಕ್ಕೇ? ನಿಮ್ಮ ವರ್ತನೆ ನೋಡಿದರೆ ನಿಮ್ಮ ಸರ್ಕಾರ ಹಾಗೆಯೇ ಭಾವಿಸಿದಂತಿದೆ. ಕೇಸರಿ ಕನ್ನಡಕದೊಳಗಿಂದ ನಿಮಗೆ ಜನರ ಕಷ್ಟ ಕಾಣದಿರಬಹುದು, ನಮಗೆ ಕಾಣುತ್ತಿದೆ. ಕಠೋರ ಹೃದಯಿಯಾದ ತಮಗೆ ಜನರ ಕಷ್ಟ ಅರಿಯುವುದು ಹಾಗೂ ಜನಪರವಾದ ಹೋರಾಟವನ್ನು ಗೌರವಿಸುವುದು ಹೇಗೆ ತಿಳಿಯಲು ಸಾಧ್ಯ ಬಿಡಿ’ ಎಂದು ವ್ಯಂಗ್ಯವಾಡಿದೆ.

ಇದನ್ನೂ ಓದಿ: ಕಾಂಗ್ರೆಸ್ ಪಕ್ಷದಲ್ಲಿ ಸತ್ಯಕ್ಕೆ ಬೆಲೆಯೇ ಇಲ್ಲ!: ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ವ್ಯಂಗ್ಯ

ಧಾರವಾಡ ಜಿಲ್ಲೆಯ ಇತಿಹಾಸ ಪ್ರಸಿದ್ಧ ನುಗ್ಗೆಕೇರಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿದ್ದ ಮು‌ಸ್ಲಿಮರ ಅಂಗಡಿಗಳನ್ನು ದುಷ್ಕರ್ಮಿಗಳು ನಾಶಪಡಿಸಿರುವ ವಿಚಾರವಾಗಿಯೂ ಸಿಎಂ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

‘ಮುಖ್ಯಮಂತ್ರಿಗಳೇ.... ಸೌಖ್ಯವೇ? ಆರೋಗ್ಯವಾಗಿದ್ದೀರಿ ಅಲ್ಲವೇ? ಕಣ್ಣು, ಕಿವಿಗಳು ಸಮರ್ಪಕವಾಗಿ ಕೆಲಸ ಮಾಡುತ್ತಿವೆ ತಾನೇ? ಮೆದುಳು ಸುಸ್ಥಿತಿಯಲ್ಲಿದೆ ತಾನೇ? ಹೃದಯವಿದೆಯಲ್ಲವೇ? ಎಲ್ಲವೂ ಸರಿ ಇದ್ದು ಸುಮ್ಮನಿದ್ದೀರಿ ಎಂದರೆ ‘ರಾಮ’ ನಿಮ್ಮನ್ನು ಎಂದಿಗೂ ಕ್ಷಮಿಸಲಾರ’ ಎಂದು ಕಾಂಗ್ರೆಸ್ ಟೀಕಿಸಿದೆ.

ಇದನ್ನೂ ಓದಿ: ‘ಗೃಹ ಸಚಿವ ಆರಗ ಜ್ಞಾನೇಂದ್ರ ಗಾಂಜಾ ಸೇವಿಸುತ್ತಾರೆ!’

ಸ್ವಾಮೀಜಿಗಳು, ಮಠಾಧೀಶರು ಧ್ವನಿ ಎತ್ತಬೇಕು - ಡಿಕೆಶಿ  

‘ದ್ರೌಪದಿ ವಸ್ತ್ರಾಪಹರಣದ ವೇಳೆ ಭೀಷ್ಮ, ದ್ರೋಣಾಚಾರ್ಯರಂತಹ ಅತಿರಥರು ಉಪಸ್ಥಿತರಿದ್ದರು. ಅಧರ್ಮ ನಡೆಯುತ್ತಿದ್ದರೂ ಅವರೆಲ್ಲರೂ ಮೌನವಾಗಿ ಕಣ್ಮುಚ್ಚಿ ಕುಳಿತಿದ್ದರು. ಈಗಲೂ ದೇಶದಲ್ಲಿ ಅಶಾಂತಿ, ಅಧರ್ಮ ಹೆಚ್ಚುತ್ತಿದ್ದು, ಸ್ವಾಮೀಜಿಗಳು, ಮಠಾಧೀಶರು ಕಣ್ಣುಮುಚ್ಚಿ ಕೂರದೇ ಎಲ್ಲರ ಪರ ಧ್ವನಿ ಎತ್ತಬೇಕೆಂದು ವಿನಂತಿಸುತ್ತೇನೆ’ ಎಂದು ಹೇಳಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಕಾಂಗ್ರೆಸ್ ಟ್ವೀಟ್ ಮಾಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News