94 ವರ್ಷದ ಹಿಂದೆ ಕೇರಳ ಪ್ರವಾಹಕ್ಕೆ6 ಸಾವಿರ ರೂ ಸಂಗ್ರಹಿಸಿದ್ದ ಮಹಾತ್ಮಾಗಾಂಧಿ!
ನವದೆಹಲಿ: ಹೆಚ್ಚು ಕಡಿಮೆ ನೂರು ವರ್ಷಗಳ ಹಿಂದೆ ಕೇರಳದಲ್ಲಿ ಪ್ರವಾಹ ಉಂಟಾದಾಗ ಮಹಾತ್ಮಾ ಗಾಂಧಿ ಸಂತ್ರಸ್ತರಿಗಾಗಿ ಹಣ ಸಂಗ್ರಹಿಸಿದ ಸಂಗತಿ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.
ಹೌದು,94 ವರ್ಷಗಳ ಹಿಂದೆ ಯಂಗ್ ಇಂಡಿಯಾ ಮತ್ತು ನವಜೀವನ ಪತ್ರಿಕೆಯಲ್ಲಿ ಹಲವಾರು ಲೇಖನಗಳನ್ನು ಪ್ರವಾಹದ ಕುರಿತಾಗಿ ಬರೆದಿರುವ ಸಂಗತಿ ದಾಖಲಾಗಿದೆ.1924 ಜುಲೈ ತಿಂಗಳಲ್ಲಿ ಕೇರಳದ ಮುನ್ನಾರ್,ತ್ರಿಶೂರ್,ಕೊಚಿಕೊಡ್,ಎರ್ನಾಕುಲಂ,ಅಲುವಾ,ಮುವಾತ್ತುಪುಜಾ,ಕುಮಾರಕೊಂ,ಚೆಂಗನ್ನುರ್,ತಿರುವನಂತಪುರಮ್ ಭಾಗಗಳಲ್ಲಿ ಸತತ ಮೂರು ವಾರಗಳ ಮಳೆಯಿಂದಾಗಿ ಹಲವು ಪ್ರದೇಶಗಳು ನೀರಿನಲ್ಲಿ ಮುಳುಗಿಹೊಗಿದ್ದವು.
ಆಗ ಮಹಾತ್ಮಾ ಗಾಂಧೀಜಿಯವರು ಈ ಪ್ರವಾಹದ ಬಗ್ಗೆ ತಿಳಿಸಿದಾಗ ರಾಜ್ಯ ಕಾಂಗ್ರೆಸ್ ನಾಯಕರಿಗೆ ಸಂತ್ರಸ್ತರಿಗೆ ನೆರವಾಗುವಂತೆ ಟೆಲಿಗ್ರಾಂ ಕಳುಹಿಸಿದ್ದರು. 1924 ಅಗಸ್ಟ್ 17 ರಂದು ನವ ಜೀವನದಲ್ಲಿ ಬರೆದ ಲೇಖನವೊಂದರಲ್ಲಿ ಗಾಂಧಿಜಿಯವರು " ಸಹೋದರಿಯೋಬ್ಬಳು ನಾಲ್ಕು ಚಿನ್ನದ ಕಡಗ ಮತ್ತು ಚೈನಗಳನ್ನು ದಾನವಾಗಿ ನೀಡಿದ್ದಳು.ಇನ್ನೊಬ್ಬ ಸಹೋದರಿ ತನ್ನ ನೆಕ್ಲೆಸ್ ನ್ನು ನೀಡಿದ್ದಳು.ಅಲ್ಲದೆ ಮಗುವಿಗೆ ಇದ್ದ ಆಭರಣ ಮತ್ತು ಸಹೋಧರಿಯ ಬೆಳ್ಳಿಯ ಆಭರಣವನ್ನು ದಾನವಾಗಿ ನೀಡಲಾಗಿತ್ತು"
"ಒಬ್ಬ ವ್ಯಕ್ತಿ ಎರಡು ಬೆರಳುಂಗುರ,ಮತ್ತು ಅಂತ್ಯಜ ಬಾಲಕಿಯೊಬ್ಬಳು ತನ್ನ ಪಾದಗಳಿಗೆ ಧರಿಸಿದ ಆಭರಣಗಳನ್ನು ನೀಡಿದ್ದಳು.ಇನ್ನು ಯುವಕನೊಬ್ಬ ತನ್ನ ಶರ್ಟ್ ಗೆ ಇದ್ದ ಚಿನ್ನದ ಗುಂಡಿಗಳನ್ನು ನೀಡಿದ್ದ ಇಲ್ಲಿಯ ವರೆಗೂ 6994 ರೂಪಾಯಿ 13 ಅನ್ನಾ 3 ಪೈಸೆ ಸಂಗ್ರಹವಾಗಿದೆ" ಎಂದು ಗಾಂಧಿಜಿ ಬರೆದಿದ್ದರು.