ನವದೆಹಲಿ: ಪ್ರಧಾನಿ ಮೋದಿ ಹಾಗೂ ಅಮಿತ್ ಷಾ ವಿರುದ್ಧ ಇರುವ ಎಲ್ಲ ಪ್ರಕರಣಗಳಿಂದ ಆರೋಪ ಮುಕ್ತಗೊಳಿಸುತ್ತಿರುವ ಹಿನ್ನಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಚುನಾವಣಾ ಆಯೋಗ ಒತ್ತಡದ ನಡುವೆ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದ್ದಾರೆ.


COMMERCIAL BREAK
SCROLL TO CONTINUE READING

ಶನಿವಾರದಂದು ಚುನಾವಣಾ ಆಯೋಗದ ಕ್ರಮದ ವಿರುದ್ಧ ಟೀಕೆ ನಡೆಸಿದ ರಾಹುಲ್ ಗಾಂಧಿ " ಬಿಜೆಪಿ ವಿರುದ್ದ ದೂರುಗಳನ್ನು ವಿಚಾರಣೆ ನಡೆಸುತ್ತಿರುವ ಸಂದರ್ಭದಲ್ಲಿ ಚುನಾವಣಾ ಆಯೋಗದ ದಾರಿ ಸ್ಪಷ್ಟವಾಗಿದೆ.ಆದರೆ ಪ್ರತಿಪಕ್ಷಗಳ ವಿಚಾರ ಬಂದಾಗ ಚುನಾವಣಾ ಆಯೋಗವು ಪಕ್ಷಪಾತ ಧೋರಣೆ ಅನುಸರಿಸುತ್ತಿರುವುದು ಸ್ಪಷ್ಟವಾಗಿದೆ"ಎಂದರು


"ನರೇಂದ್ರ ಮೋದಿ, ಬಿಜೆಪಿ, ಆರೆಸೆಸ್ಸ್, ಎಲ್ಲ ಸಂಸ್ಥೆಗಳ ಮೇಲೆ ಒತ್ತಡ ಹೇರುವುದು ಅವರ ಕಾರ್ಯಶೈಲಿ, ಇದು ಎಲ್ಲ ಕಡೆ ಕಣ್ಣಿಗೆ ರಾಚುತ್ತಿದೆ. ಅದು ಸುಪ್ರೀಂಕೋರ್ಟ್ ಆಗಿರಬಹುದು, ಚುನಾವಣಾ ಆಯೋಗ,ಯೋಜನಾ ಆಯೋಗ. ಆದ್ದರಿಂದ ಚುನಾವಣಾ ಆಯೋಗ ಇದರಿಂದ ಪ್ರಭಾವ ಬಿರುವುದಿಲ್ಲವೆಂದು ನಾವು ನಿರೀಕ್ಷಿಸುವುದಿಲ್ಲ. ಚುನಾವಣಾ ಆಯೋಗ ಏನು ಮಾಡುತ್ತಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ.ದೇಶದ ಜನರು ಈಗಾಗಲೇ ನಿರ್ಧರಿಸಿದ್ದಾರೆ.ಆದ್ದರಿಂದ ಯಾರು ಏನು ಮಾಡಲು ಸಾಧ್ಯವಿಲ್ಲ" ಎಂದು ಹೇಳಿದರು.