Mamta On Scooty:  ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ 2021 (West Bengal Assembly Election 2021) ರ ಕಾರಣದಿಂದಾಗಿ ರಾಜ್ಯದಲ್ಲಿ ರಾಜಕೀಯ ಈಗ ಬಿಸಿಯಾಗಿದೆ. ಟಿಎಂಸಿ (TMC) ಮತ್ತು ಬಿಜೆಪಿ (BJP) ಈ ಚುನಾವಣೆಯನ್ನು ಮುಖಾಮುಖಿಯಾಗಿ ನಡೆಸುತ್ತವೆ. ಒಂದು ಕಡೆ, ಬಾಂಗ್ಲಾ ಮಿಶನ್ ನೊಂದಿಗೆ ಗೆಲ್ಲಲು ಬಿಜೆಪಿ ತನ್ನ ಸಂಪೂರ್ಣ ಶಕ್ತಿಯನ್ನು ನೀಡಿದೆ. ಮತ್ತೊಂದೆಡೆ ಟಿಎಂಸಿ ಮುಖ್ಯಸ್ಥೆ ಸಿಎಂ ಮಮತಾ ಬ್ಯಾನರ್ಜಿ (Mamta Banerjee) ಕೂಡ ಶತಾಯಗತಾಯ ಚುನಾವಣೆ ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಬಿಜೆಪಿ ಮತ್ತು ಟಿಎಂಸಿ ನಡುವೆ ನಡೆಯುತ್ತಿರುವ ರಾಜಕೀಯ ಪ್ರಕ್ಷುಬ್ಧತೆಯ ನಡುವೆ ಇಂದು ಕೋಲ್ಕತ್ತಾದ ಬೀದಿಗಳಲ್ಲಿ ಒಂದು ಕುತೂಹಲಕಾರಿ ಚಿತ್ರ ಕಂಡುಬಂದಿದೆ, ಅಲ್ಲಿ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ (Mamta Banerjee) ಅವರು ಎಲೆಕ್ಟ್ರಿಕ್ ಸ್ಕೂಟರ್ ಏರಿ ನಬನ್ನಾಗೆ ತೆರಳುತ್ತಿರುವ ದೃಶ್ಯ ಕಂಡು ಬಂದಿತು. ವಾಸ್ತವವಾಗಿ ಕೇಂದ್ರ ಸರ್ಕಾರವು ಪೆಟ್ರೋಲ್ (Petrol)-ಡೀಸೆಲ್ ಮತ್ತು ಎಲ್‌ಪಿಜಿಯ (LPG) ಬೆಲೆಯನ್ನು ಹೆಚ್ಚಿಸಿರುವುದನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ರೀತಿಯಾಗಿ ಪ್ರತಿಭಟಿಸಿದ್ದಾರೆ ಎಂದು ಹೇಳಲಾಗಿದೆ.


RBI ಗವರ್ನರ್ ಸಲಹೆ, ಈಗಲಾದರೂ ಅಗ್ಗವಾಗಲಿದೆಯೇ Petrol-Diesel


ರಾಜ್ಯದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಿಂದಾಗಿ ಟಿಎಂಸಿ (TMC) ಕೇಂದ್ರ ಸರ್ಕಾರದ ಮೇಲೆ ಸಂಪೂರ್ಣವಾಗಿ ದಾಳಿ ನಡೆಸುತ್ತಿದೆ. ತೈಲ ಬೆಲೆ ಏರಿಕೆಯನ್ನು ವಿರೋಧಿಸಿ ಮಮತಾ ಬ್ಯಾನರ್ಜಿ ಇಂದು ಲೆಕ್ಟ್ರಿಕ್ ಸ್ಕೂಟರ್ ಏರಿ ಹಜಾರಾದಿಂದ ನಬನ್ನಾಗೆ ಪ್ರಯಾಣ ಬೆಳೆಸಿದರು. ಮಮತಾ ಬ್ಯಾನರ್ಜಿಯ ಈ ನಿರ್ಧಾರ ಎಲ್ಲರಿಗೂ ಆಘಾತವನ್ನುಂಟು ಮಾಡಿದೆ. ವಿಶೇಷವೆಂದರೆ ತೈಲ ಬೆಲೆಗಳನ್ನು ವಿರೋಧಿಸಿ ಮಮತಾ ಬ್ಯಾನರ್ಜಿ (Mamta Banerjee) ಎಲೆಕ್ಟ್ರಿಕ್ ಸ್ಕೂಟಿ ಬಳಸಿದ್ದಾರೆ.


ಇದನ್ನೂ ಓದಿ - ಫೆಬ್ರವರಿಯಲ್ಲಿ 3ನೇ ಬಾರಿಗೆ ಏರಿಕೆ ಕಂಡ LPG ದರ, ಎಷ್ಟು ದುಬಾರಿಯಾಗಿದೆ ಎಂದು ತಿಳಿಯಿರಿ


ಸಿಎಂ ಮಮತಾ ಬ್ಯಾನರ್ಜಿ ಅವರು ಇಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಹಜಾರಾದಿಂದ ನಬನ್ನಾಗೆ ಎಲೆಕ್ಟ್ರಿಕ್ ಸ್ಕೂಟಿಯಲ್ಲಿ (Electric Scooty) ತೆರಳಿದರು. ಎಲೆಕ್ಟ್ರಿಕ್ ಸ್ಕೂಟಿ ಏರಿ ನಬನ್ನಾಗೆ  ಪ್ರಯಾಣಿಸಿದ ಮಮತಾ ಬ್ಯಾನರ್ಜಿಯವರ ನಡೆ ದಿನದಿಂದ ದಿನಕ್ಕೆ  ಏರುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ವಿರೋಧಿಸುತ್ತಿರುವ ಸಂಕೇತವಾಗಿದೆ. ತೈಲ ಬೆಲೆಗಳ ಹೆಚ್ಚಳದಿಂದ (ಇಂಧನ ಬೆಲೆ), ಜನರು ಅದನ್ನು ಖರೀದಿಸುವುದು ಕಷ್ಟಕರವಾಗುತ್ತಿದೆ ಎಂಬುದನ್ನು ಸೂಚಿಸುವ ಸಂಕೇತವಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.