Primary School Open: ಪ್ರಾಥಮಿಕ ಶಾಲೆಗಳು ಯಾವಾಗ ತೆರೆಯಲಿವೆ
ಕರೋನಾವೈರಸ್ ಸಾಂಕ್ರಾಮಿಕದ ಅಟ್ಟಹಾಸ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು ಕ್ರಮೇಣ ಎಲ್ಲಾ ರಾಜ್ಯಗಳಲ್ಲಿ ಶಾಲೆಗಳನ್ನು ತೆರೆಯಲಾಗುತ್ತಿದೆ. ಆದಾಗ್ಯೂ ಪ್ರಾಥಮಿಕ ಶಾಲೆಗಳನ್ನು ತೆರೆಯಲು ಇನ್ನೂ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ.
ನವದೆಹಲಿ : ದೇಶದಲ್ಲಿ ಕೊರೊನಾವೈರಸ್ನ ಹಾನಿಯಿಂದಾಗಿ ಕಳೆದ 10 ತಿಂಗಳಿಗಿಂತ ಹೆಚ್ಚು ಕಾಲ ಮುಚ್ಚಲ್ಪಟ್ಟ ಶಾಲೆಗಳನ್ನು ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಕ್ರಮೇಣ ತೆರೆಯಲಾಗುತ್ತಿದೆ. ಕೇಂದ್ರ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ ಶಾಲೆಗಳನ್ನು ತೆರೆಯಲಾಗುತ್ತಿದೆ. ಇದರೊಂದಿಗೆ ಶಾಲೆ ತೆರೆಯುವಾಗ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು, ಮಕ್ಕಳ ಆರೋಗ್ಯದ ಬಗ್ಗೆ ನಿಗಾವಹಿಸುವುದು ಶಾಲಾ ಆಡಳಿತದ ಜವಾಬ್ದಾರಿಯಾಗಿದೆ.
ಈ ಮಧ್ಯೆ ಎಲ್ಲಾ ರಾಜ್ಯಗಳಲ್ಲಿ 6 ರಿಂದ 11 ರವರೆಗೆ ತರಗತಿಗಳನ್ನು ಪ್ರಾರಂಭಿಸಲಾಗಿದೆ. ಈಗ ಈ ಎಲ್ಲದರ ನಡುವೆ ದೊಡ್ಡ ಪ್ರಶ್ನೆಯೆಂದರೆ ಪ್ರಾಥಮಿಕ ಶಾಲೆಗಳು (Primary Schools) ಯಾವಾಗ ತೆರೆಯಲ್ಪಡುತ್ತವೆ ಎಂಬುದಾಗಿದೆ. ಕೆಲವು ರಾಜ್ಯಗಳಲ್ಲಿ ಪ್ರಾಥಮಿಕ ಶಾಲೆಗಳನ್ನು ತೆರೆಯಲಾಗಿದ್ದರೂ ಬಹುತೇಕ ರಾಜ್ಯಗಳಲ್ಲಿ ಪ್ರಾಥಮಿಕ ಶಾಲೆಗಳನ್ನು ತೆರೆಯುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ. ಶಾಲೆಗಳನ್ನು ತೆರೆಯುತ್ತಿರುವ ರಾಜ್ಯಗಳಲ್ಲಿ ಸಾಮಾಜಿಕ ಅಂತರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಮಾರ್ಚ್ 1 ರಿಂದ 1ರಿಂದ 5ನೇ ತರಗತಿವರೆಗೆ ಶಾಲೆ ಪ್ರಾರಂಭವಾಗಲಿದೆ :
ಉತ್ತರ ಪ್ರದೇಶದ ಯೋಗಿ ಸರ್ಕಾರದ ಆದೇಶದ ಪ್ರಕಾರ ಮಾರ್ಚ್ 1 ರಿಂದ ರಾಜ್ಯದಲ್ಲಿ 1 ರಿಂದ 5 ನೇ ತರಗತಿ ಶಾಲೆಗಳನ್ನು ತೆರೆಯಲಾಗುವುದು. ಅದೇ ಸಮಯದಲ್ಲಿ, 6 ರಿಂದ 8 ರವರೆಗೆ ಶಾಲೆಗಳು ಫೆಬ್ರವರಿ 10 ರಂದು ಅಂದರೆ ಬುಧವಾರ ತೆರೆಯಲ್ಪಡುತ್ತವೆ. ಕರೋನಾಗೂ ಮೊದಲು ಶಾಲೆಗಳನ್ನು ನಡೆಸುತ್ತಿದ್ದರಿಂದ ಶಾಲೆಗಳನ್ನು ನಿರ್ವಹಿಸಲು ಮತ್ತು ಪಾಠ ಪ್ರವಚನ ಪ್ರಾರಂಭಿಸಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಆದಾಗ್ಯೂ, ಮಾಸ್ಕ್ (Mask) ಗಳು, ಥರ್ಮಲ್ ಸ್ಕ್ಯಾನರ್‌ಗಳು, ನೈರ್ಮಲ್ಯ ಮತ್ತು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ದೂರವಿರುವುದರ ಬಗ್ಗೆ ವಿಶೇಷ ಗಮನ ಹರಿಸಲು ಶಾಲಾ ಆಡಳಿತಕ್ಕೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ - ರಾಜ್ಯದಲ್ಲಿ ಶೀಘ್ರವೇ 1 -8 ನೇ ತರಗತಿ ಆರಂಭ : ಶಿಕ್ಷಣ ಸಚಿವ ಸುರೇಶ್ ಕುಮಾರ್
ಪಂಜಾಬ್‌ನಲ್ಲಿ ಜನವರಿ 27 ರಿಂದ ಶಾಲೆಗಳು ತೆರೆಯಲ್ಪಟ್ಟವು :
ಪಂಜಾಬ್‌ನ ಶಾಲಾ ಶಿಕ್ಷಣ ಇಲಾಖೆ ಜನವರಿ 27 ರಿಂದ ರಾಜ್ಯದ ಎಲ್ಲಾ ಶಾಲೆಗಳಲ್ಲಿ (Punjab School Reopening News) ಪ್ರಾಥಮಿಕ ತರಗತಿಗಳನ್ನು ತೆರೆದಿದೆ. ಆದರೆ ರಾಜ್ಯದಲ್ಲಿ 5 ರಿಂದ 12 ನೇ ತರಗತಿಗಳವರೆಗೆ ಶಾಲೆಗಳು ಜನವರಿಯ ಆರಂಭದಲ್ಲಿಯೇ ತೆರೆದಿವೆ. 'ಪೋಷಕರ ಬೇಡಿಕೆಯ ಮೇರೆಗೆ ಜನವರಿ 27 ರಿಂದ ಎಲ್ಲಾ ಶಾಲೆಗಳಲ್ಲಿ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸಲು ಸರ್ಕಾರ ನಿರ್ಧರಿಸಿದೆ' ಎಂದು ಶಿಕ್ಷಣ ಸಚಿವ ವಿಜಯ್ ಇಂದರ್ ಸಿಂಗ್ಲಾ ಹೇಳಿದರು.
ಬಿಹಾರದಲ್ಲಿ ಪ್ರಾಥಮಿಕ ಶಾಲೆಗಳನ್ನು ತೆರೆಯಲು ಇದು ಯೋಜನೆ :
ಬಿಹಾರದಲ್ಲಿ ಸೋಮವಾರದಿಂದ 6 ರಿಂದ 8 ರವರೆಗೆ ಶಾಲೆಗಳು ತೆರೆಯಲ್ಪಟ್ಟವು. ಬಿಹಾರ ಸರ್ಕಾರ ಈಗಾಗಲೇ 9 ರಿಂದ 12 ರವರೆಗೆ 50% ಹಾಜರಾತಿಯೊಂದಿಗೆ ತರಗತಿಗಳನ್ನು ತೆರೆದಿದೆ. ಇದರೊಂದಿಗೆ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಕಾಲೇಜುಗಳನ್ನು (Colleges) ಸಹ ತೆರೆಯಲಾಯಿತು. ಮತ್ತೊಂದೆಡೆ ಮುಂದಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು 1 ರಿಂದ 5 ರವರೆಗೆ ಮಕ್ಕಳಿಗೆ ಶಾಲೆಗಳನ್ನುತೆರೆಯುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ದೆಹಲಿಯಲ್ಲಿ ಪ್ರಾಥಮಿಕ ಶಾಲೆ ಪುನರಾರಂಭ :
ಪ್ರಾಥಮಿಕ ಶಾಲೆಗಳ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಳ್ಳದಿದ್ದರೂ ದೆಹಲಿಯಲ್ಲಿ ಉನ್ನತ ದರ್ಜೆಯ ಶಾಲೆಗಳನ್ನು ತೆರೆಯಲಾಗಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಕೆಲವು ದಿನಗಳ ಹಿಂದೆ ಲಸಿಕೆ ಪ್ರಾರಂಭವಾಗುವವರೆಗೂ ನಾವು ಮಕ್ಕಳ ಜೀವವನ್ನು ಅಪಾಯಕ್ಕೆ ತಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು. ಆದರೆ, ದೆಹಲಿಯಲ್ಲಿ ಪ್ರಾಥಮಿಕ ಶಾಲೆಗಳನ್ನು ತೆರೆಯುವ ಬಗ್ಗೆ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆಯಿದೆ.
ಇದನ್ನೂ ಓದಿ - School Fees ವಿಚಾರವಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮನೆ ಎದುರು ಪೋಷಕರ ಪ್ರತಿಭಟನೆ
ರಾಜಸ್ಥಾನದಲ್ಲೂ ಶಾಲೆಗಳು ತೆರೆಯಲ್ಪಟ್ಟವು :
ರಾಜಸ್ಥಾನದಲ್ಲೂ ಸೋಮವಾರದಿಂದ ಎಂದರೆ ಫೆಬ್ರವರಿ 8ರಿಂದ VI ರಿಂದ VIII ತರಗತಿಗಳಿಗೆ ಶಾಲೆಗಳನ್ನು ತೆರೆಯಲಾಗಿದೆ. ಇದರೊಂದಿಗೆ ಪ್ರಥಮ ವರ್ಷ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಕಾಲೇಜುಗಳು ತೆರೆದಿವೆ. ಒಂದು ದಿನದಲ್ಲಿ 50% ವಿದ್ಯಾರ್ಥಿಗಳಿಗೆ ಶಾಲೆಗಳು ಮತ್ತು ಕಾಲೇಜುಗಳಿಗೆ ಹಾಜರಾಗಲು ಅವಕಾಶ ನೀಡಲಾಗಿದೆ. 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಮತ್ತು ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಕಾಲೇಜುಗಳನ್ನು ಈಗಾಗಲೇ ರಾಜ್ಯದಲ್ಲಿ ಪುನಃ ತೆರೆಯಲಾಗಿದೆ.
ಉತ್ತರಾಖಂಡದಲ್ಲೂ ಶಾಲೆಗಳು ತೆರೆಯಲ್ಪಟ್ಟವು :
ಉತ್ತರಾಖಂಡದಲ್ಲೂ ಫೆಬ್ರವರಿ 8 ರಿಂದ 8 ರಿಂದ 11 ನೇ ತರಗತಿ ವಿದ್ಯಾರ್ಥಿಗಳಿಗೆ ತರಗತಿಗಳನ್ನು ಪುನರಾರಂಭಿಸಲಾಗಿದೆ. ಇದರೊಂದಿಗೆ ಶಾಲೆಗಳಲ್ಲಿ ಕರೋನಾವೈರಸ್‌ಗೆ (Coronavirus) ಸಂಬಂಧಿಸಿದ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಸೂಚಿಸಲಾಗಿದೆ. ನವೆಂಬರ್ 2020 ರಿಂದ ಉತ್ತರಾಖಂಡದಲ್ಲಿ 10 ಮತ್ತು 12 ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಗಳನ್ನು ತೆರೆಯಲಾಯಿತು.
ಒಡಿಶಾದಲ್ಲೂ ಶಾಲೆಗಳು ತೆರೆಯಲ್ಪಟ್ಟವು :
10 ಮತ್ತು 12 ನೇ ತರಗತಿಗಳ ನಂತರ, ಒಡಿಶಾದಲ್ಲಿ ಕಳೆದ ಸೋಮವಾರದಿಂದ 9 ಮತ್ತು 11 ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಗಳನ್ನು ಮತ್ತೆ ತೆರೆಯಲಾಗಿದೆ. ಒಡಿಶಾದಲ್ಲಿ ತರಗತಿಗಳು ವಾರದಲ್ಲಿ ಆರು ದಿನ ಬೆಳಿಗ್ಗೆ 8:30 ರಿಂದ 10:30 ರವರೆಗೆ ನಡೆಯಲಿದೆ. ಅದೇ ಸಮಯದಲ್ಲಿ ಈ ಎರಡು ಗಂಟೆಗಳಲ್ಲಿ ಮೂರು ಅವಧಿಗಳಲ್ಲಿ ಮಾತ್ರ ಅಧ್ಯಯನಗಳು ನಡೆಯುತ್ತವೆ.
ಇದನ್ನೂ ಓದಿ - ಬಲವಂತವಾಗಿ ಸ್ಕೂಲ್ ಫೀ ಸಂಬಂಧಿಸಿದಂತೆ #KAMS ನಡೆಗೆ ಸಚಿವ ಸುರೇಶ್ ಕುಮಾರ್ ಮೆಚ್ಚುಗೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.