Coronavirus: ಸುಮಾರು 1 ತಿಂಗಳಿನಿಂದ ಏಳು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಂದ ವರದಿಯಾಗಿಲ್ಲ ಯಾವುದೇ ಸಾವು

ಕಳೆದ ಮೂರು ವಾರಗಳಲ್ಲಿ ಏಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ COVID-19 ಸಾವಿನ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ ಎಂದು ಕೇಂದ್ರ ಮಂಗಳವಾರ ಪ್ರಕಟಿಸಿದೆ. ಕಳೆದ 24 ಗಂಟೆಗಳಲ್ಲಿ 15 ರಾಜ್ಯಗಳು ಮತ್ತು ಯುಟಿಗಳು ಯಾವುದೇ ಸಾವುನೋವುಗಳನ್ನು ದಾಖಲಿಸಿಲ್ಲ.

Written by - Zee Kannada News Desk | Last Updated : Feb 10, 2021, 09:25 AM IST
  • ಕಳೆದ ಮೂರು ವಾರಗಳಲ್ಲಿ ಏಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ COVID-19 ಸಾವಿನ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ
  • ಕಳೆದ 24 ಗಂಟೆಗಳಲ್ಲಿ 15 ರಾಜ್ಯಗಳು ಮತ್ತು ಯುಟಿಗಳು ಯಾವುದೇ ಸಾವುನೋವುಗಳನ್ನು ದಾಖಲಿಸಿಲ್ಲ
  • 12 ರಾಜ್ಯಗಳು ಮತ್ತು ಯುಟಿಗಳು ನೋಂದಾಯಿತ ಆರೋಗ್ಯ ಕಾರ್ಯಕರ್ತರಿಗೆ ಶೇಕಡಾ 65 ಕ್ಕಿಂತ ಹೆಚ್ಚು ಲಸಿಕೆ ವಿತರಣೆ
Coronavirus: ಸುಮಾರು 1 ತಿಂಗಳಿನಿಂದ ಏಳು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಂದ ವರದಿಯಾಗಿಲ್ಲ ಯಾವುದೇ ಸಾವು title=
No fresh case of COVID-19 death

ನವದೆಹಲಿ: ಕಳೆದ ಮೂರು ವಾರಗಳಲ್ಲಿ ಏಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಕೋವಿಡ್ -19 (COVID-19) ಸಾವಿನ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ ಎಂದು ಕೇಂದ್ರ ಸರ್ಕಾರ ಮಂಗಳವಾರ ಪ್ರಕಟಿಸಿದೆ.

ಕಳೆದ ಒಂದು ತಿಂಗಳಿನಿಂದ ಒಂದೇ ಒಂದು ಕೋವಿಡ್ -19 ಮೃತ ಪ್ರಕರಣವೂ ವರದಿಯಾಗದ ಏಳು ರಾಜ್ಯಗಳು ಮತ್ತು ಯುಟಿಗಳು - 
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಅರುಣಾಚಲ ಪ್ರದೇಶ, ತ್ರಿಪುರ, ದಾದ್ರಾ ಮತ್ತು ನಗರ ಹವೇಲಿ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ಲಕ್ಷದ್ವೀಪಗಳಲ್ಲಿ ಕಳೆದ ಮೂರು ವಾರಗಳಲ್ಲಿ ಹೊಸ ಕೋವಿಡ್ -19 (COVID-19) ಸಾವುಗಳು ಸಂಭವಿಸಿಲ್ಲ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಇದಲ್ಲದೆ ಕಳೆದ 24 ಗಂಟೆಗಳಲ್ಲಿ 15 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕರೋನಾವೈರಸ್ (Coronavirus)ನಿಂದಾಗಿ ಯಾವುದೇ ಸಾವುನೋವುಗಳನ್ನು ದಾಖಲಿಸಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಇದನ್ನೂ ಓದಿ - Corona Vaccination ವಿಷಯದಲ್ಲಿ ದಾಖಲೆ ಬರೆದ ಭಾರತ

ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಭಾರತವು 24 ದಿನಗಳಲ್ಲಿ 6 ಮಿಲಿಯನ್ ಕೋವಿಡ್ -19 ವ್ಯಾಕ್ಸಿನೇಷನ್ (COVID-19 vaccination) ಪ್ರಮಾಣವನ್ನು ತಲುಪಿದ ದೇಶವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

12 ರಾಜ್ಯಗಳು ಮತ್ತು ಯುಟಿಗಳು ನೋಂದಾಯಿತ ಆರೋಗ್ಯ ಕಾರ್ಯಕರ್ತರಿಗೆ ಶೇಕಡಾ 65 ಕ್ಕಿಂತ ಹೆಚ್ಚು ಲಸಿಕೆ ನೀಡಿವೆ. ಈ ರಾಜ್ಯಗಳು -

  • ಬಿಹಾರ (ಶೇ .78.1)
  • ತ್ರಿಪುರ (ಶೇ .77.1)
  • ಮಧ್ಯಪ್ರದೇಶ (ಶೇ 76)
  • ಉತ್ತರಾಖಂಡ (ಶೇ 73.7)
  • ಒಡಿಶಾ (ಶೇ .72.4)
  • ಮಿಜೋರಾಂ (ಶೇ .69.9)
  • ಹಿಮಾಚಲ ಪ್ರದೇಶ (ಶೇ. 68.7) 
  • ಉತ್ತರ ಪ್ರದೇಶ (ಶೇ. 68)
  • ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (ಶೇ 67.9)
  • ರಾಜಸ್ಥಾನ (ಶೇ 67.2)
  • ಕೇರಳ (ಶೇ .66.9)
  • ಲಕ್ಷದ್ವೀಪ (ಶೇ .66.7) ಎಂದು ಅವರು ಹೇಳಿದರು.

ಇದನ್ನೂ ಓದಿ - 'Made In India' Covid-19 ಲಸಿಕೆಯ ಕ್ಯೂನಲ್ಲಿವೆ ವಿಶ್ವದ 25 ರಾಷ್ಟ್ರಗಳು: ಜಯಶಂಕರ್

ಆದಾಗ್ಯೂ ಕಳೆದ ರಾಷ್ಟ್ರೀಯ ಸಿರೊಸರ್ವಿಯ (Sero Survey) ಸಂಶೋಧನೆಗಳ ಪ್ರಕಾರ, ಜನಸಂಖ್ಯೆಯ ಶೇಕಡಾ 70 ಕ್ಕಿಂತಲೂ ಹೆಚ್ಚು ಜನರು ಇನ್ನೂ ಸೋಂಕಿಗೆ ತುತ್ತಾಗಿದ್ದಾರೆ ಎಂದು ತಿಳಿದುಬಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News