ಕೋಲ್ಕತ್ತಾ: ಪಿಎಂ ಕೇರ್ಸ್ ಫಂಡ್ ವಿಚಾರವಾಗಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ‘ಆ ಹಣ ಎಲ್ಲಿದೆ?’ ಎಂದು ಪ್ರಶ್ನಿಸಿದ್ದಾರೆ. ಪಿಎಂ-ಕೇರ್ಸ್ ಫಂಡ್ ಸರ್ಕಾರಿ ನಿಧಿ ಎಂದು ಪ್ರತಿಪಾದಿಸಿರುವ ಅವರು, ಟ್ರಸ್ಟ್ ಸಂಗ್ರಹಿಸಿದ ಹಣದಿಂದ ಮಾಡಿದ ವಹಿವಾಟಿನಲ್ಲಿ ಸಂಪೂರ್ಣ ಪಾರದರ್ಶಕತೆ(PM-CARES Fund Transparency) ಕಾಯ್ದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.


COMMERCIAL BREAK
SCROLL TO CONTINUE READING

‘PM-CARES ನಿಧಿಯು ನಮ್ಮ ರಾಷ್ಟ್ರೀಯ ಲಾಂಛನವನ್ನು ಹೊಂದಿದೆ, ಆದರೆ ಕೇಂದ್ರ ಸರ್ಕಾರವು ಇದು ಸರ್ಕಾರಿ ನಿಧಿಯಲ್ಲ ಎಂದು ಹೇಳುತ್ತಿದೆ. ಇದರಿಂದ ನಾವೆಲ್ಲರೂ ಗೊಂದಲಕ್ಕೀಡಾಗಿದ್ದೇವೆ. ಈ ಬಗ್ಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವೇ ಸ್ಪಷ್ಟನೆ ನೀಡಬೇಕು. ಮುಖ್ಯಮಂತ್ರಿ ಪರಿಹಾರ ನಿಧಿಯನ್ನು ನಿಯಮಿತವಾಗಿ ಆಡಿಟ್ ಮಾಡಲಾಗುತ್ತದೆ. ಪಿಎಂ ಕೇರ್ಸ್ ಫಂಡ್(PM-CARES Fund) ಅನ್ನು ಕೋವಿಡ್ -19 ಗಾಗಿ ರೂಪಿಸಲಾಗಿದೆ. ಆದರೆ ಕೇಂದ್ರವು ಶುಕ್ರವಾರ ಇದು ಸರ್ಕಾರಿ ನಿಧಿಯಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದೆ. ಸರ್ಕಾರಿ ನೌಕರರು ಇಲ್ಲಿಗೆ ಹಣವನ್ನು ದೇಣಿಗೆ ನೀಡಿದ್ದಾರೆ, ಸಿಎಸ್ಆರ್ ಮೂಲಕ ಹಣವನ್ನು ದೇಣಿಗೆ ನೀಡಲಾಗಿದೆ. ದೇಣಿಗೆ ರೂಪದಲ್ಲಿ ಲಕ್ಷ ಕೋಟಿ ರೂ.ನಷ್ಟು ಹಣ ಹರಿದುಬಂದಿದೆ. ಹಾಗಾದರೆ ಆ ಹಣ ಎಲ್ಲಿದೆ?’ ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.


ಇದನ್ನೂ ಓದಿ: Aadhaar Card: ರಿಜಿಸ್ಟರ್ ಮೊಬೈಲ್ ಸಂಖ್ಯೆ ಇಲ್ಲದೆಯೂ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಬಹುದು, ಹೇಗೆ ಗೊತ್ತಾ?


ಪಿಎಂ ಕೇರ್ಸ್ ನಿಧಿ(PM-CARES Fund)ಯು ಸರ್ಕಾರಿ ನಿಧಿಯಲ್ಲ ಎಂದು ಕೇಂದ್ರ ಸರ್ಕಾರವು ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ. ಏಕೆಂದರೆ ಅದಕ್ಕೆ ದೇಣಿಗೆಗಳು ಭಾರತದ ಏಕೀಕೃತ ನಿಧಿಗೆ ಹೋಗುವುದಿಲ್ಲ. ಅದರ ಸ್ಥಾನಮಾನವನ್ನು ಲೆಕ್ಕಿಸದೆ ಯಾವುದೇ 3ನೇ ವ್ಯಕ್ತಿಯ ಮಾಹಿತಿಯನ್ನು ಸಂವಿಧಾನ ಹಾಗೂ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ)ಯಡಿ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಹೇಳಿದೆ.    


ಪ್ರಧಾನ ಮಂತ್ರಿ ಕಚೇರಿ(PMO)ಯಲ್ಲಿನ ಅಂಡರ್ ಸೆಕ್ರೆಟರಿ ಸಲ್ಲಿಸಿರುವ ಅಫಿಡವಿಟ್ ಪ್ರಕಾರ, ಪಿಎಂ ಕೇರ್ಸ್ ಟ್ರಸ್ಟ್‌ ನಲ್ಲಿ ಗೌರವಯುತವಾಗಿ ಕಾರ್ಯಗಳನ್ನು ನಿರ್ವಹಿಸಲಾಗುತ್ತಿದೆ. ಟ್ರಸ್ಟ್ ಪಾರದರ್ಶಕತೆ(PM-CARES Fund Transparency)ಯಿಂದ ಕಾರ್ಯನಿರ್ವಹಿಸುತ್ತದೆ ಮತ್ತು ಅದರ ನಿಧಿಯನ್ನು ಲೆಕ್ಕಪರಿಶೋಧಕರಿಂದ ಲೆಕ್ಕಪರಿಶೋಧಿಸಲಾಗುತ್ತದೆ ಎಂದು ಹೇಳಲಾಗಿದೆ.


ಇದನ್ನೂ ಓದಿ: OnePlus smartphones: ಭಾರತದಲ್ಲಿ ಶೀಘ್ರವೇ 20 ಸಾವಿರ ರೂ.ಗಿಂತ ಕಡಿಮೆ ಬೆಲೆಯ ಒನ್‌ಪ್ಲಸ್ ಸ್ಮಾರ್ಟ್‌ಫೋನ್‌..!


ಭಬನಿಪುರ ಉಪಚುನಾವಣಾ(Bhabanipur Bypoll) ಪ್ರಚಾರದ ಸಮಯದಲ್ಲಿ ಮಮತಾ ಬ್ಯಾನರ್ಜಿ ಅವರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿರೋಧ ಪಕ್ಷದ ನಾಯಕರ ಮೇಲೆ ಬೇಹುಗಾರಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಿರುವ ಅವರು, ಪೆಗಗಸ್ ಸ್ನೂಪಿಂಗ್ ಹಗರಣದ ಬಗ್ಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.


‘ಕೇಂದ್ರ ಸರ್ಕಾರವು ಪ್ರತಿಪಕ್ಷದ ನಾಯಕರ ಮೇಲೆ ಹಲ್ಲೆ ನಡೆಸುತ್ತಿದೆ ಎಂಬುದು ಸಾಬೀತಾಗಿದೆ. ನಮ್ಮ ಫೋನ್‌ಗಳನ್ನು ಟ್ಯಾಪ್ ಮಾಡಲಾಗಿದೆ. ಕೇಂದ್ರವು ಈ ತಂತ್ರಾಂಶವನ್ನು ಇಸ್ರೇಲ್‌ನಿಂದ ಖರೀದಿಸಿದೆ. ನೀವು ಯಾರೂ ಬಿಜೆಪಿ ಸರ್ಕಾರದ ವಿರುದ್ಧ ಮಾತನಾಡುವಂತಿಲ್ಲ. ಒಂದು ವೇಳೆ ನೀವು ಮಾತನಾಡಿದರೆ ಅವರು(ಬಿಜೆಪಿ) ಐಟಿ, ಇಡಿಯಂತಹ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ದಾಳಿ ನಡೆಸುತ್ತವೆ’ ಎಂದು ಮಮತಾ ಗುಡುಗಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.