"ಮೋದಿ ಭೇಟಿ ವೇಳೆ ಕೃಷಿ ಕಾನೂನುಗಳ ಬಗ್ಗೆ ಚರ್ಚಿಸಿ"-ಜೋ ಬಿಡೆನ್ ಗೆ ಟಿಕಾಯತ್ ಆಗ್ರಹ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ ಜೋ ಬಿಡೆನ್ ಅವರ ಬಹು ನಿರೀಕ್ಷಿತ ದ್ವಿಪಕ್ಷೀಯ ಭೇಟಿಗೆ ಕೆಲವು ಗಂಟೆಗಳ ಮೊದಲು, ರೈತ ನಾಯಕ ರಾಕೇಶ್ ಟಿಕಾಯತ್ ಅವರು ಶುಕ್ರವಾರ (ಸೆಪ್ಟೆಂಬರ್ 24, 2021) ದಂದು ಕೃಷಿ ಕಾನೂನಿನತ್ತ ಗಮನ ಹರಿಸುವಂತೆ ಅಮೆರಿಕದ ಅಧ್ಯಕ್ಷರನ್ನು ಒತ್ತಾಯಿಸಿದರು.

Written by - ZH Kannada Desk | Last Updated : Sep 24, 2021, 04:38 PM IST
  • ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ ಜೋ ಬಿಡೆನ್ ಅವರ ಬಹು ನಿರೀಕ್ಷಿತ ದ್ವಿಪಕ್ಷೀಯ ಭೇಟಿಗೆ ಕೆಲವು ಗಂಟೆಗಳ ಮೊದಲು, ರೈತ ನಾಯಕ ರಾಕೇಶ್ ಟಿಕಾಯತ್ ಅವರು ಶುಕ್ರವಾರ (ಸೆಪ್ಟೆಂಬರ್ 24, 2021) ದಂದು ಕೃಷಿ ಕಾನೂನಿನತ್ತ ಗಮನ ಹರಿಸುವಂತೆ ಅಮೆರಿಕದ ಅಧ್ಯಕ್ಷರನ್ನು ಒತ್ತಾಯಿಸಿದರು.
"ಮೋದಿ ಭೇಟಿ ವೇಳೆ ಕೃಷಿ ಕಾನೂನುಗಳ ಬಗ್ಗೆ ಚರ್ಚಿಸಿ"-ಜೋ ಬಿಡೆನ್ ಗೆ ಟಿಕಾಯತ್ ಆಗ್ರಹ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ ಜೋ ಬಿಡೆನ್ ಅವರ ಬಹು ನಿರೀಕ್ಷಿತ ದ್ವಿಪಕ್ಷೀಯ ಭೇಟಿಗೆ ಕೆಲವು ಗಂಟೆಗಳ ಮೊದಲು, ರೈತ ನಾಯಕ ರಾಕೇಶ್ ಟಿಕಾಯತ್ ಅವರು ಶುಕ್ರವಾರ (ಸೆಪ್ಟೆಂಬರ್ 24, 2021) ದಂದು ಕೃಷಿ ಕಾನೂನಿನತ್ತ ಗಮನ ಹರಿಸುವಂತೆ ಅಮೆರಿಕದ ಅಧ್ಯಕ್ಷರನ್ನು ಒತ್ತಾಯಿಸಿದರು.

ಇದನ್ನೂ ಓದಿ: ರೈತರ ಬೇಡಿಕೆಗಳು ಈಡೇರುವವರೆಗೆ ಪ್ರತಿಭಟನೆ ಮುಂದುವರೆಯುತ್ತದೆ-ರಾಕೇಶ್ ಟಿಕಾಯತ್

ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕರಾದ ರಾಕೇಶ್ ಟಿಕಾಯತ್  ಟ್ವಿಟರ್‌ಗೆ ನಲ್ಲಿ ಅಮೆರಿಕಾದ ಅಧ್ಯಕ್ಷರನ್ನು ಟ್ಯಾಗ್ ಮಾಡಿದ್ದಾರೆ.'ಪ್ರಿಯ ಪೊಟಸ್, ನಾವು ಭಾರತೀಯ ರೈತರು ಪ್ರಧಾನಿ ಮೋದಿ ಸರ್ಕಾರ ಜಾರಿಗೆ ತಂದ 3 ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದೇವೆ. ಕಳೆದ 11 ತಿಂಗಳಲ್ಲಿ 700 ರೈತರು ಸಾವನ್ನಪ್ಪಿದ್ದಾರೆ. ನಮ್ಮನ್ನು ರಕ್ಷಿಸಲು ಈ ಕಪ್ಪು ಕಾನೂನುಗಳನ್ನು ರದ್ದುಗೊಳಿಸಬೇಕು. ದಯವಿಟ್ಟು ಪ್ರಧಾನಿ ಮೋದಿಯವರನ್ನು ಭೇಟಿ ಮಾಡುವಾಗ ನಮ್ಮ ಕಾಳಜಿಯತ್ತ ಗಮನಹರಿಸಿ" ಎಂದು ಟಿಕಾಯತ್ (Rakesh Tikait)   ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Farmer Protest, : ಕೃಷಿ ಮಸೂದೆ ವಿರುದ್ಧ ಹೋರಾಟಕ್ಕೆ 6 ತಿಂಗಳು : ನಾಳೆ ರೈತರಿಂದ 'ಬ್ಲ್ಯಾಕ್ ಡೇ' ಆಚರಣೆ!

ನವೆಂಬರ್ 2020 ರಿಂದ ದೆಹಲಿ ಗಡಿಯಲ್ಲಿ ಬೀಡುಬಿಟ್ಟಿರುವ ನೂರಾರು ರೈತರ ಪ್ರತಿಭಟನೆಗಳನ್ನು ಟಿಕಾಯತ್ ಮುನ್ನಡೆಸುತ್ತಿದ್ದಾರೆ ಮತ್ತು ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಮತ್ತು ಬೆಳೆಗಳ ಕನಿಷ್ಠ ಬೆಂಬಲ ಬೆಲೆಯಲ್ಲಿ ಅವರಿಗೆ ಕಾನೂನು ಖಾತರಿ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.ಆದಾಗ್ಯೂ, ಕೇಂದ್ರವು ಹೊಸ ಕಾನೂನುಗಳು ರೈತರ ಪರವಾಗಿದೆ ಎಂದು ಸಮರ್ಥಿಸಿಕೊಂಡಿದೆ ಮತ್ತು ರೈತರೊಂದಿಗೆ 11 ಸುತ್ತಿನ ಔಪಚಾರಿಕ ಸಂವಾದಗಳನ್ನು ನಡೆಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಸಂಜೆ ಶ್ವೇತಭವನದಲ್ಲಿ ಅಧ್ಯಕ್ಷ ಜೋ ಬಿಡೆನ್ ಅವರನ್ನು ಭೇಟಿಯಾಗಲಿದ್ದಾರೆ. ಈ ವರ್ಷದ ಜನವರಿಯಲ್ಲಿ ಬಿಡೆನ್ ಯುಎಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಉಭಯ ನಾಯಕರ ನಡುವಿನ ಮೊದಲ ವ್ಯಕ್ತಿಗತ ಸಭೆ ಇದಾಗಿದೆ.

ಇದನ್ನೂ ಓದಿ:Rakesh Tikait: 'ಮತ್ತೆ ದೆಹಲಿಗೆ ಲಕ್ಷಾಂತರ ಟ್ರ್ಯಾಕ್ಟರ್ ಪ್ರವೇಶ, ಸಂಸತ್ತಿನಲ್ಲೇ ಮಂಡಿ ತೆರೆಯುತ್ತೇವೆ'

ಮೋದಿ ಮತ್ತು ಬಿಡೆನ್ ಭಾರತ-ಯುಎಸ್ ದ್ವಿಪಕ್ಷೀಯ ಬಾಂಧವ್ಯವನ್ನು ಪರಿಶೀಲಿಸುತ್ತಾರೆ ಮತ್ತು ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ಬಲಪಡಿಸಲು ಚರ್ಚೆ ನಡೆಸುತ್ತಾರೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷ ವಿ ಶೃಂಗ್ಲಾ ಈ ಹಿಂದೆ ಮಾಹಿತಿ ನೀಡಿದ್ದರು. ಅಫ್ಘಾನಿಸ್ತಾನದಲ್ಲಿನ ಇತ್ತೀಚಿನ ಬೆಳವಣಿಗೆಗಳ ನಂತರ ಇಬ್ಬರೂ ನಾಯಕರು ಪ್ರಸ್ತುತ ಪ್ರಾದೇಶಿಕ ಭದ್ರತಾ ಪರಿಸ್ಥಿತಿಯ ಬಗ್ಗೆ ಚರ್ಚಿಸಲಿದ್ದಾರೆ.

ಬಿಡೆನ್ ಅವರೊಂದಿಗಿನ ಭೇಟಿಯ ನಂತರ, ಪಿಎಂ ಮೋದಿ ಅವರು ವಾಷಿಂಗ್ಟನ್‌ನಲ್ಲಿ ಯುಎಸ್, ಜಪಾನ್ ಮತ್ತು ಆಸ್ಟ್ರೇಲಿಯಾದ ನಾಯಕರೊಂದಿಗೆ ಮೊದಲ ಬಾರಿಗೆ ಕ್ವಾಡ್ ನಾಯಕರ ಸಭೆಯಲ್ಲಿ ಭಾಗವಹಿಸುತ್ತಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

More Stories

Trending News