ತೆಲಂಗಾಣದಲ್ಲಿ ಆಡಳಿತ ವಿರೋಧಿ ಅಲೆ ಸೆದೆಬಡಿದ ಕೆಸಿಆರ್ ಬಗ್ಗೆ ನಿಮಗೆಷ್ಟು ಗೊತ್ತು?
ನಾಲ್ಕು ವರ್ಷಗಳ ಹಿಂದೆ ನೂತನ ರಾಜ್ಯ ರಚಿಸಿ, ಆಡಳಿತಕ್ಕೆ ಬಂದ ಕೆ.ಚಂದ್ರಶೇಖರ್ ರಾವ್ ಅವರ ತೆಲಂಗಾಣ ರಾಷ್ಟ್ರೀಯ ಸಮಿತಿ ಪಕ್ಷ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿತು. ಹೀಗಾಗಿ ಜನಮಾನಸದಲ್ಲಿ ಭದ್ರವಾಗಿ ನೆಲೆಯೂರಿದರು.
ನವದೆಹಲಿ: ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಪ್ರತಿಯೊಂದು ರಾಜ್ಯವೂ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದೆ. ರಾಜಸ್ಥಾನ ಮತ್ತು ಚತ್ತೀಸ್ಗಡದಲ್ಲಿ ಮತಎಣಿಕೆಯ ಆರಂಭಿಕ ಟ್ರೆಂಡ್ ನಲ್ಲಿ ಬಿಜೆಪಿ ಹೀನಾಯ ಹೊಡೆದ ಅನುಭವಿಸಿದೆ. ಹಾಗೆಯೇ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಗೆ ಬಿಜೆಪಿ ಭಾರಿ ಪೈಪೋಟಿ ನೀಡಿದೆ. ಮತ್ತೊಂದೆಡೆ ಮಿಜೋರಾಂನಲ್ಲಿ ಆಡಳಿತ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದೆ. ಈ ಎಲ್ಲಾ ಐದು ರಾಜ್ಯಗಳಲ್ಲಿ ತೆಲಂಗಾಣದಲ್ಲಿ ಮಾತ್ರ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್ ರಾವ್ ನೇತೃತ್ವದ ಟಿಆರ್ಎಸ್ ಪಕ್ಷ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಲು ಮುಂದಾಗಿದೆ.
ಅವಧಿಗೂ ಮುನ್ನವೇ ತೆಲಂಗಾಣ ವಿಧಾನಸಭೆ ವಿಸರ್ಜಿಸಿದ ಕಾರಣದಿಂದಾಗಿ ರಾಜ್ಯ ವಿಧಾನಸಭೆ ಚುನಾವಣೆ ಎದುರಿಸುವಂತಾಗಿದೆ. ಆದಾಗ್ಯೂ, ನೂತನವಾಗಿ ತಚನೆಯಾದ ಈ ರಾಜ್ಯಕ್ಕೆ ಕೆಸಿಆರ್ ಬಹಳ ಪ್ರಮುಖ ವ್ಯಕ್ತಿಯಾಗುತ್ತಾರೆ. ಅವರು ಕೇವಲ ಮುಖ್ಯಮಂತ್ರಿ ಅಷ್ಟೇ ಅಲ್ಲ, ಪ್ರತ್ಯೇಕ ರಾಜ್ಯ ರಚನೆಗೆ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟವರು. ಕೆಸಿಆರ್ ಅವರ ಅನಿರ್ದಿಷ್ಟಾವಧಿ ಉಪವಾಸ ಮತ್ತು ಹೋರಾಟದ ಫಲವಾಗಿ ತೆಲಂಗಾಣ ಪ್ರತ್ಯೇಕ ರಾಜ್ಯವಾಗಿ ಹೊರಹೊಮ್ಮಲು ಸಾಧ್ಯವಾಯಿತು.
ತೆಲಂಗಾಣದಲ್ಲಿ ಟಿಆರ್ಎಸ್ ಗೆ ಭರ್ಜರಿ ಮುನ್ನಡೆ; ಮತ್ತೆ ಕಿಂಗ್ ಆಗಲಿದ್ದಾರೆಯೇ ಕೆಸಿಆರ್?
ಕೆಸಿಆರ್ ಅವರ ರಾಜಕೀಯ ಜೀವನವನ್ನೇ ನೋಡುವುದಾದರೆ, ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಗಾಗಿ ತೆಲುಗು ದೇಶಂ ಪಕ್ಷವನ್ನೇ ತೊರೆದು ತೆಲಂಗಾಣ ರಾಷ್ಟ್ರೀಯ ಸಮಿತಿ ಪಕ್ಷವನ್ನು ರಚಿಸಿದರು. ಹಾಗೆಯೇ ತಮ್ಮ ರಾಜನೀತಿಗೆ ಅನುಸಾರವಾಗಿ ಟಿಡಿಪಿ, ಕಾಂಗ್ರೆಸ್ ಮತ್ತು ಕಮ್ಯೂನಿಸ್ಟ್ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡರು. ಅಷ್ಟೇ ಅಲ್ಲದೆ ಅಲ್ಪಸಂಖ್ಯಾತರಿಗೆ ಶೇ.12ರಷ್ಟು ಮೀಸಲಾತಿ ಒದಗಿಸುವುದಾಗಿ ಹೇಳಿದ್ದರು. ಆದರೆ ಚುನಾವಣೆಗೂ ಮೊದಲು ನಡೆದ ಸಭೆಯೊಂದರಲ್ಲಿ ಮುಸ್ಲಿಂ ಯುವಕನೊಬ್ಬ ಎದ್ದು ನಿಂತು, ನೀವು ಮೀಸಲಾತಿಯನ್ನು ಯಾವಾಗ ಒದಗಿಸುತ್ತೀರಿ ಎಂದು ಕೇಳಿದ್ದ. ಕೂಡಲೇ ಆತನ ಪ್ರಶ್ನೆಗೆ ಉತ್ತರಿಸಿದ್ದ ಕೆಸಿಆರ್, ನೀನು ಮುಸಲ್ಮಾನರಿಗೆ ಶೇ.12 ಮಿಸಲಾತಿ ಕೇಳುತ್ತಿದ್ದೀ ಎಂದಾದರೆ ಸುಮ್ಮನೆ ಇದ್ದುಬಿಡು ಎಂದಿದ್ದರು.
ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಢ್, ಮಿಜೋರಾಂ ವಿಧಾನಸಭಾ ಚುನಾವಣೆ 2018 ರ ಫಲಿತಾಂಶ
ಈ ಘಟನೆಯಿಂದಾಗಿ ಕೆಸಿಆರ್ ಮುಸ್ಲಿಮರ ಪರವಾಗಿದ್ದಾರೆ ಎಂಬುದು ಸ್ಪಷ್ಟವಾಗಿತ್ತು. ಇದಕ್ಕೆ ತದ್ವಿರುದ್ಧವಾಗಿ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಸರುದ್ದೀನ್ ಅವರನ್ನು ತೆಲಂಗಾಣ ಕಾರ್ಯಾಧ್ಯಕ್ಷರನ್ನಾಗಿ ಕಾಂಗ್ರೆಸ್ ಮಾಡಿತು. ಆದರೆ ಇದರಿಂದ ಕಾಂಗ್ರೆಸ್ ಗೆ ಲಾಭವೇನೂ ಆಗಲಿಲ್ಲ. ಕೆಸಿಆರ್ ಅವರಿಗಿದ್ದ ಬೆಂಬಲ ಕಡಿಮೆ ಆಗಲಿಲ್ಲ.
ತೆಲಂಗಾಣದಲ್ಲಿ ಕೆಸಿಆರ್ ಗೆ ಇದ್ದ ಬೆಂಬಲ ಕಂಡು ದಂಗಾದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಚತ್ತೀಸ್ಗಢದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಹಾಕಿದ ಶ್ರಮವನ್ನು ತೆಲಂಗಾಣದಲ್ಲಿ ಮಾಡಲಿಲ್ಲ. ಈ ಬಾರಿ ಕಾಂಗ್ರೆಸ್, ತೆಲುಗು ದೇಶಂ ಪಕ್ಷದೊಡನೆ ಮೈತ್ರಿ ಸಾಧಿಸಿತು. ಆದರೆ, ತೆಲುಗು ದೇಶಂ ಪಕ್ಷದ ತೆಲಂಗಾಣ ವಿರೋಧಿ ನಡೆಯಿಂದಾಗಿ ಕಾಂಗ್ರೆಸ್ ಭಾರೀ ವಿರೋಧ ಎದುರಿಸಬೇಕಾಯಿತು.
ತೆಲಂಗಾಣ ಚುನಾವಣೆ 2018 ಬಿಜೆಪಿ, ವಿರೋಧ ಪಕ್ಷಕ್ಕೆ ಪ್ರತಿಷ್ಠೆಯ ಪ್ರಶ್ನೆ ಏಕೆ?
ಇಷ್ಟೆಲ್ಲಾ ರಾಜಕೀಯ ಸಮೀಕರಣಗಳನ್ನೂ ಮೀರಿ ನಾಲ್ಕು ವರ್ಷಗಳ ಹಿಂದೆ ನೂತನ ರಾಜ್ಯ ರಚಿಸಿ, ಆಡಳಿತಕ್ಕೆ ಬಂದ ಕೆ.ಚಂದ್ರಶೇಖರ್ ರಾವ್ ಅವರ ತೆಲಂಗಾಣ ರಾಷ್ಟ್ರೀಯ ಸಮಿತಿ ಪಕ್ಷ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿತು. ಹೀಗಾಗಿ ಜನಮಾನಸದಲ್ಲಿ ಭದ್ರವಾಗಿ ನೆಲೆಯೂರಿದರು. ಅವಧಿಗೂ ಮುನ್ನ ವಿಧಾನಸಭೆ ವಿಸರ್ಜಿಸಿದರೂ ಅವರು ಕೈಗೊಂಡ ಯೋಜನೆಗಳು ಮತ್ತು ಕಾರ್ಯಕ್ರಮಗಳು ಮುಂದಿನ ಚುನಾವಣೆ ನಡೆಯುವವರೆಗೂ ಮುಂದುವರೆಸುವ ಅವಕಾಶವನ್ನೂ ಪಡೆದುಕೊಂಡರು.
ಇನ್ನೂ, ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಆರಂಭದಿಂದಲೂ ಮುನ್ನಡೆ ಸಾಧಿಸುತ್ತಾ ಬಂದಿರುವ ಟಿಆರ್ಎಸ್ ಪಕ್ಷದ ನೇತಾರ ಕೆ.ಸಿ.ಚಂದ್ರಶೇಖರ್ ರಾವ್, ರಾಜಕೀಯ ಕ್ಷೇತ್ರದಲ್ಲಿ ಹೆಸರು ಮಾಡಿದ ಮಹಾನ್ ನಾಯಕ ಎನ್ ಟಿಆರ್ ಅವರಿಗೆ ಸರಿಸಮನಾಗಿ ಕಾಣುತ್ತಾರೆ. ಒಂದು ಕಾಲದಲ್ಲಿ ದಕ್ಷಿಣ ಭಾರತದ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಜಯಲಲಿತಾ, ಕರುಣಾನಿಧಿಯಂತೆ ಕೆಸಿಆರ್ ತಮ್ಮದೇ ಛಾಪು ಮೂಡಿಸಿದರೂ ಅಚ್ಚರಿಯೇನಿಲ್ಲ.