New RAW Chief: ಭಾರತದ ಗುಪ್ತಚರ ಸಂಸ್ಥೆ ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗ ನೂತನ ಮುಖ್ಯಸ್ಥರಾಗಿ ಆಯ್ಕೆಯಾಗಿರುವ ರವಿ ಸಿನ್ಹಾ ಯಾರು?
New RAW Chief Ravi Sinha: ನೆರೆ ರಾಷ್ಟ್ರದಲ್ಲಿ ಮುಂದುವರೆದ ರಾಜಕೀಯ ಮತ್ತು ಆರ್ಥಿಕ ಪ್ರಕ್ಷುಬ್ಧತೆ ಎದುರಿಸುತ್ತಿರುವ ಸಂದರ್ಭಗಳಲ್ಲಿ ಬಂದ ಮತ್ತು ಅದರಲ್ಲಿಯೂ ವಿಶೇಷವಾಗಿ ನೆರೆ ರಾಷ್ಟ್ರಗಳ ವಿಷಯ ತಜ್ಞ ಎಂದೇ ಪರಿಗಣಿಸಲ್ಪಟ್ಟಿರುವ ರವಿ ಸಿನ್ಹಾ ಅವರ ರಾ ಮುಖ್ಯಸ್ಥ ಸ್ಥಾನಕ್ಕೆ ನಿಯುಕ್ತಿ ಭಾರಿ ಮಹತ್ವ ಪಡೆದುಕೊಂಡಿದೆ. ಪ್ರಸ್ತುತ ಕೆಲ ದೇಶಗಳು ಸಿಖ್ ಉಗ್ರವಾದವನ್ನು ಉತ್ತೇಜಿಸಲು ಯತ್ನಿಸುತ್ತಿವೆ ಮತ್ತು ಈಶಾನ್ಯ ಭಾಗದಲ್ಲಿ ಅದರಲ್ಲಿಯೂ ವಿಶೇಷವಾಗಿ ಮಣಿಪುರದಲ್ಲಿ ಹಿಂಸಾಚಾರ ಉತ್ತೇಜನಕ್ಕೆ ಪ್ರಯತ್ನಗಳು ನಡೆದಿರುವುದು ಇಲ್ಲಿ ಉಲ್ಲೇಖನೀಯ.
New RAW Chief Appointment: ಭಾರತೀಯ ಪೊಲೀಸ್ ಸೇವೆ (IPS) ಹಿರಿಯ ಅಧಿಕಾರಿ ರವಿ ಸಿನ್ಹಾ ಅವರನ್ನು ಭಾರತದ ಗುಪ್ತಚರ ಸಂಸ್ಥೆ ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗ (RAW) ನ ಹೊಸ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಅವರು ಸಮಂತ್ ಕುಮಾರ್ ಗೋಯಲ್ ಅವರ ಸ್ಥಾನವನ್ನು ತುಂಬಲಿದ್ದಾರೆ, ಸಮಂತ್ ಕುಮಾರ್ ಅವಧಿಯು ಜೂನ್ 30, 2023 ರಂದು ಕೊನೆಗೊಳ್ಳಲಿದೆ. ರವಿ ಸಿನ್ಹಾ ಅವರು ನೆರೆಯ ದೇಶಗಳ ವ್ಯವಹಾರದಲ್ಲಿ ಸಾಕಷ್ಟು ಪರಿಣಿತಿಯನ್ನು ಹೊಂದಿದ್ದಾರೆ.
ಛತ್ತೀಸ್‌ಗಢ ಕೇಡರ್‌ನ 1988 ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಸಿನ್ಹಾ, ಎರಡು ದಶಕಗಳಿಗೂ ಹೆಚ್ಚು ಕಾಲ RAW ನೊಂದಿಗೆ ಸಂಬಂಧ ಹೊಂದಿದ್ದಾರೆ. ಅವರು ಪ್ರಸ್ತುತ RAW ನಲ್ಲಿ ಎರಡನೇ ಮುಖ್ಯ ಅಧಿಕಾರಿಯಾಗಿದ್ದಾರೆ. ತಮ್ಮ ಈ ಪ್ರಮೋಷನ್ ಮೊದಲು, ಅವರು RAW ನ ಕಾರ್ಯಾಚರಣಾ ಶಾಖೆಯ ಮುಖ್ಯಸ್ಥರಾಗಿದ್ದರು. ಸಿನ್ಹಾ ತಮ್ಮ ಕಾರ್ಯಾಚರಣೆ ಮತ್ತು ಬೇಹುಗಾರಿಕೆ ಕೌಶಲ್ಯಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರದೇ ಬ್ಯಾಚ್‌ನ ಅಧಿಕಾರಿ ತಪನ್ ದೇಕಾ ಅವರು ಪ್ರಸ್ತುತ ಇಂಟೆಲಿಜೆನ್ಸ್ ಬ್ಯೂರೋ (ಐಬಿ) ಮುಖ್ಯಸ್ಥರಾಗಿದ್ದಾರೆ.
ತಂತ್ರಜ್ಞಾನದ ಬಳಕೆಯಲ್ಲಿ ಪ್ರಾವೀಣ್ಯತೆ
59 ವರ್ಷದ ಸಿನ್ಹಾ ಅವರನ್ನು RAW ಕಾರ್ಯದರ್ಶಿಯಾಗಿ ಎರಡು ವರ್ಷಗಳ ಅವಧಿಗೆ ನೇಮಕ ಮಾಡಲು ಸಂಪುಟದ ನೇಮಕಾತಿ ಸಮಿತಿಯು ಅನುಮೋದನೆ ನೀಡಿದೆ. ಗುಪ್ತಚರ ಮಾಹಿತಿ ಸಂಗ್ರಹಣೆಯಲ್ಲಿ ಸುಧಾರಿತ ತಂತ್ರಜ್ಞಾನವನ್ನು ಪರಿಚಯಿಸಿದ ಕೀರ್ತಿ ಸಿನ್ಹಾ ಅವರಿಗೆ ಸಲ್ಲುತ್ತದೆ.
ಅವರ ಹೊಸ ಪಾತ್ರದಲ್ಲಿ, ಸಿನ್ಹಾ ಇಂದಿನ ಸವಾಲುಗಳನ್ನು ಎದುರಿಸಲು ತಂತ್ರಜ್ಞಾನ ಮತ್ತು ಮಾನವ ಬುದ್ಧಿವಂತಿಕೆಯ ಆಯಾಮಗಳನ್ನು ಸಂಯೋಜಿಸುವ ನಿರೀಕ್ಷೆಯಿದೆ.
ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ಸಿನ್ಹಾ ಅವರು ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದು, ಅನುಭವ ಮತ್ತು ಜ್ಞಾನದ ಅಪಾರ ಸಂಪತ್ತನ್ನು ಹೊಂದಿದ್ದಾರೆ.
ನೆರೆಯ ರಾಷ್ಟ್ರಗಳ ವ್ಯವಹಾರದ ವಿಷಯದಲ್ಲಿ ಹೆಚ್ಚು ಪರಿಣಿತರು ಎಂದು ಪರಿಗಣಿಸಲ್ಪಟ್ಟಿರುವ ಸಿನ್ಹಾ ಅವರ ನೇಮಕಾತಿ ಪ್ರಸ್ತುತ ಪಾಕಿಸ್ತಾನ ರಾಜಕೀಯ ಮತ್ತು ಆರ್ಥಿಕ ಪ್ರಕ್ಷುಬ್ಧತೆಯನ್ನು ಎದುರಿಸುತ್ತಿರುವ ಸಮಯದಲ್ಲಿ ಬಂದಿರುವುದು ಇದೀಗ ಭಾರಿ ಮಹತ್ವ ಪಡೆದುಕೊಂಡಿದೆ, ಕೆಲವು ದೇಶಗಳು ಸಿಖ್ ಉಗ್ರವಾದವನ್ನು ಉತ್ತೇಜಿಸಲು ಪ್ರಯತ್ನಿಸುತ್ತಿವೆ ಮತ್ತು ಈಶಾನ್ಯದಲ್ಲಿ ಅದರಲ್ಲೂ ವಿಶೇಷವಾಗಿ ಮಣಿಪುರದಲ್ಲಿ ಹಿಂಸಾಚಾರವನ್ನು ಉತ್ತೇಜಿಸಲು ಪ್ರಯತ್ನಗಳನ್ನು ನಡೆಸಲಾಗುತ್ತಿರುವುದು ಇಲ್ಲಿ ಉಲ್ಲೇಖನೀಯ.
ಹಲವು ದೇಶಗಳಲ್ಲಿ ಕೆಲಸ ಮಾಡಿದ್ದಾರೆ
ಅಷ್ಟೇ ಅಲ್ಲ, ಸಿನ್ಹಾ ಅವರು ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ಮತ್ತು ಅನೇಕ ದೇಶಗಳಲ್ಲಿ ಸಾಕಷ್ಟು ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನ್ಹಾ ಅವರಿಗಿಂತ ಮೊದಲು, ಸಮಂತ್ ಗೋಯಲ್ ಅವರನ್ನು ಜೂನ್ 2019 ರಲ್ಲಿ ಎರಡು ವರ್ಷಗಳ ಕಾಲ RAW ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿತ್ತು. ನಂತರ ಅವರಿಗೆ 2021 ಮತ್ತು ಜೂನ್ 2022 ರಲ್ಲಿ ತಲಾ ಒಂದು ವರ್ಷದ ಎರಡು ವಿಸ್ತರಣೆಗಳನ್ನು ನೀಡಲಾಗಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಪರಿಣತರಾಗಿರುವ ಗೋಯಲ್ ಅವರು ಫೆಬ್ರವರಿ 2019 ರಲ್ಲಿ ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ಸರ್ಜಿಕಲ್ ಸ್ಟ್ರೈಕ್ ಅನ್ನು ಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗುತ್ತದೆ. ಪುಲ್ವಾಮಾ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಈ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿತ್ತು.
ಇದನ್ನೂ ಓದಿ-Technology And GDP: 'ಮುಂದಿನ ಎರಡು ವರ್ಷಗಳಲ್ಲಿ ತಂತ್ರಜ್ಞಾನವನ್ನು ಭಾರತದ ಜಿಡಿಪಿಯ ಶೇ.25 ರಷ್ಟು ಮಾಡುವ ಗುರಿ'
ಪುಲ್ವಾಮಾ ದಾಳಿಯಲ್ಲಿ 40 ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು. ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ (ಜೆಇಎಂ)ನ ಆತ್ಮಾಹುತಿ ಬಾಂಬರ್ ಈ ದಾಳಿಯನ್ನು ನಡೆಸಿದ್ದ. ದಾಳಿಗೆ ಪ್ರತಿಕ್ರಿಯೆಯಾಗಿ, ಭಾರತೀಯ ವಾಯುಪಡೆಯು ಫೆಬ್ರವರಿ 26, 2019 ರಂದು ಬಾಲಾಕೋಟ್‌ನಲ್ಲಿ ಜೈಶ್ ಭಯೋತ್ಪಾದಕ ತರಬೇತಿ ಶಿಬಿರವನ್ನು ನೆಲಸಮಗೊಳಿಸಿತ್ತು.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.