Technology And GDP: 'ಮುಂದಿನ ಎರಡು ವರ್ಷಗಳಲ್ಲಿ ತಂತ್ರಜ್ಞಾನವನ್ನು ಭಾರತದ ಜಿಡಿಪಿಯ ಶೇ.25 ರಷ್ಟು ಮಾಡುವ ಗುರಿ'

IT MInister Rajeev Chandrashekhar: ಗ್ಲೋಬಲ್ ಇಂಡಿಯನ್ ಟೆಕ್ನಾಲಜಿ ಪ್ರೊಫೆಷನಲ್ಸ್ ಅಸೋಸಿಯೇಷನ್‌ನ ವಾರ್ಷಿಕ ಸಮ್ಮೇಳನವನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ  ಮಾತನಾಡಿದ ರಾಜೀವ್ ಚಂದ್ರಶೇಖರ್, ಸೆಮಿಕಂಡಕ್ಟರ್‌ಗಳು, ಮೈಕ್ರೋ-ಎಲೆಕ್ಟ್ರಾನಿಕ್ಸ್, ಎಐ, ಬ್ಲಾಕ್‌ಚೈನ್ ಮತ್ತು ಕಂಪ್ಯೂಟಿಂಗ್ ಭಾಷೆಗಳಿಂದ ಗ್ರಾಹಕ ಅಂತರ್ಜಾಲದವರೆಗೆ ಎಲ್ಲೆಡೆ ಭಾರತೀಯ ಉದ್ಯಮಿಗಳು ಇದ್ದಾರೆ ಎಂದು ಹೇಳಿದ್ದಾರೆ.  

Written by - Nitin Tabib | Last Updated : Jun 19, 2023, 03:58 PM IST
  • ವಿಡಿಯೋ ಕಾನ್ಫರೆನ್ಸ್ ಮೂಲಕ ಗ್ಲೋಬಲ್ ಇಂಡಿಯನ್ ಟೆಕ್ನಾಲಜಿ ಪ್ರೊಫೆಷನಲ್ಸ್ ಅಸೋಸಿಯೇಷನ್‌ನ ವಾರ್ಷಿಕ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಚಂದ್ರಶೇಖರ್,
  • ಸೆಮಿಕಂಡಕ್ಟರ್‌ಗಳು, ಮೈಕ್ರೋ-ಎಲೆಕ್ಟ್ರಾನಿಕ್ಸ್, ಎಐ, ಬ್ಲಾಕ್‌ಚೈನ್ ಮತ್ತು ಕಂಪ್ಯೂಟಿಂಗ್ ಭಾಷೆಗಳಿಂದ ಗ್ರಾಹಕ ಅಂತರ್ಜಾಲದವರೆಗೆ ಎಲ್ಲೆಡೆ ಭಾರತೀಯ ಉದ್ಯಮಿಗಳು ಇದ್ದಾರೆ ಎಂದು ಹೇಳಿದ್ದಾರೆ.
  • ಇಂದು ನೀವು ತಂತ್ರಜ್ಞಾನದ ಯಾವುದೇ ವಲಯವನ್ನು ನೋಡಿದರೆ, ಭಾರತೀಯ ಸ್ಟಾರ್ಟ್‌ಅಪ್‌ಗಳು, ಭಾರತೀಯ ಉದ್ಯಮಗಳು ಮತ್ತು ಭಾರತೀಯ ಆವಿಷ್ಕಾರಗಳ ಗಮನಾರ್ಹ ಉಪಸ್ಥಿತಿ ಇದೆ ಎಂದು ಅವರು ಹೇಳಿದ್ದಾರೆ.
Technology And GDP: 'ಮುಂದಿನ ಎರಡು ವರ್ಷಗಳಲ್ಲಿ ತಂತ್ರಜ್ಞಾನವನ್ನು ಭಾರತದ ಜಿಡಿಪಿಯ ಶೇ.25 ರಷ್ಟು ಮಾಡುವ ಗುರಿ' title=

GDP: ಭಾರತ ಸರ್ಕಾರವು 2025-26 ರ ವೇಳೆಗೆ ತಂತ್ರಜ್ಞಾನವನ್ನು ದೇಶದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) 20-25 ರಷ್ಟು ಮಾಡುವ ಗುರಿಯನ್ನು ಹೊಂದಿದೆ. ಭಾರತದ ಐಟಿ ಸಚಿವ ರಾಜೀವ್ ಚಂದ್ರಶೇಖರ್ ಭಾರತೀಯ ಅಮೆರಿಕನ್ ಉದ್ಯಮಿಗಳಿಗೆ ಈ ಕುರಿತು ಮಾಹಿತಿಯನ್ನು ನೀಡಿದ್ದಾರೆ. ಅಲ್ಲದೆ ಭಾರತದಲ್ಲಿ ಹೂಡಿಕೆ ಮಾಡುವಂತೆಯೂ ಕೂಡ ಅವರು ಕೇಳಿಕೊಂಡಿದ್ದಾರೆ. ಕಳೆದ ಒಂಬತ್ತು ವರ್ಷಗಳಲ್ಲಿ ಡಿಜಿಟಲ್ ಆರ್ಥಿಕತೆ ವಿಸ್ತರಿಸಿದೆ ಎಂದು ಅವರು ಹೇಳಿದ್ದಾರೆ. ಇದರಲ್ಲಿ ವೈವಿಧ್ಯತೆ ಬಂದಿದ್ದು, ಪ್ರಸ್ತುತ ತಾಂತ್ರಿಕ ವಲಯದಲ್ಲಿ ಭಾರತೀಯ ಉದ್ಯಮಿಗಳು, ಭಾರತೀಯ ಸ್ಟಾರ್ಟ್‌ಅಪ್‌ಗಳು ಇಲ್ಲದ ಸ್ಥಳವಿಲ್ಲ ಎಂದಿದ್ದಾರೆ.

ಇದನ್ನೂ ಓದಿ-GST Council Meet: ನಕಲಿ ಬಿಲ್ ನೀಡುವವರ ಮೇಲೆ ನಿಯಂತ್ರಣ, ರೀಟರ್ನ್ ನಲ್ಲಿ ಹೆಚ್ಚುವರಿ ಪರಿಶೀಲನೆಯ ಸಾಧ್ಯತೆ

ಭಾರತೀಯ ಉದ್ಯಮಿಗಳು ಎಲ್ಲೆಡೆ ಇದ್ದಾರೆ
ವಿಡಿಯೋ ಕಾನ್ಫರೆನ್ಸ್ ಮೂಲಕ ಗ್ಲೋಬಲ್ ಇಂಡಿಯನ್ ಟೆಕ್ನಾಲಜಿ ಪ್ರೊಫೆಷನಲ್ಸ್ ಅಸೋಸಿಯೇಷನ್‌ನ ವಾರ್ಷಿಕ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಚಂದ್ರಶೇಖರ್, ಸೆಮಿಕಂಡಕ್ಟರ್‌ಗಳು, ಮೈಕ್ರೋ-ಎಲೆಕ್ಟ್ರಾನಿಕ್ಸ್, ಎಐ, ಬ್ಲಾಕ್‌ಚೈನ್ ಮತ್ತು ಕಂಪ್ಯೂಟಿಂಗ್ ಭಾಷೆಗಳಿಂದ ಗ್ರಾಹಕ ಅಂತರ್ಜಾಲದವರೆಗೆ ಎಲ್ಲೆಡೆ ಭಾರತೀಯ ಉದ್ಯಮಿಗಳು ಇದ್ದಾರೆ ಎಂದು ಹೇಳಿದ್ದಾರೆ. ಇಂದು ನೀವು ತಂತ್ರಜ್ಞಾನದ ಯಾವುದೇ ವಲಯವನ್ನು ನೋಡಿದರೆ, ಭಾರತೀಯ ಸ್ಟಾರ್ಟ್‌ಅಪ್‌ಗಳು, ಭಾರತೀಯ ಉದ್ಯಮಗಳು ಮತ್ತು ಭಾರತೀಯ ಆವಿಷ್ಕಾರಗಳ ಗಮನಾರ್ಹ ಉಪಸ್ಥಿತಿ ಇದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-Biparjoy Cyclone Update: ಬಿಪರ್ಜೋಯ್ ಹಿನ್ನೆಲೆ ಬಂದ ಕ್ಲೈಮ್ ಗಳನ್ನು ತ್ವರಿತ ಇತ್ಯರ್ಥಪಡಿಸಿ, ವಿಮಾ ಕಂಪನಿಗಳಿಗೆ ಐಆರ್ಡಿಎಐ ನಿರ್ದೇಶನ

ಭಾರತೀಯ ನಾವೀನ್ಯತೆ ಆರ್ಥಿಕತೆಯು 2014 ರಲ್ಲಿ ಇದ್ದ ಶೇಕಡಾ 4-5 ರಿಂದ ಇಂದು ಶೇ. 10 ರಷ್ಟು ಬೆಳೆದಿದೆ. ತಂತ್ರಜ್ಞಾನ ಮತ್ತು ಡಿಜಿಟಲ್ ಆರ್ಥಿಕತೆಯು 2025-2026 ರ ವೇಳೆಗೆ ಒಟ್ಟು GDP ಯ ಶೇ 20ರಷ್ಟು ಇರಲಿದೆ, ಇದು ಸುಮಾರು ಶೇ. 7.5 ದರದಲ್ಲಿ ಬೆಳೆಯುತ್ತಿದೆ. ಆ ಸಮಯದಲ್ಲಿ ನಮ್ಮ GDP ಸುಮಾರು $ 5,000 ಬಿಲಿಯನ್ ಆಗಿರಲಿದೆ ಮತ್ತು ಅದರಲ್ಲಿ ಶೇ. 20 ರಷ್ಟು ಅಂದರೆ $ 1,000 ಶತಕೋಟಿ ತಂತ್ರಜ್ಞಾನ ಕ್ಷೇತ್ರದಿಂದಾಗಲಿದೆ. ಈ ಗುರಿಯತ್ತ ನಾವು ಕೆಲಸ ಮಾಡುತ್ತಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಈ ಗುರಿಗೆ ಒತ್ತು ನೀಡುತ್ತಿದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News