ದೆಹಲಿ ಪೊಲೀಸ್ ಅಪರಾಧ ವಿಭಾಗದ ಮೊದಲ ಮಹಿಳಾ ಮುಖ್ಯಸ್ಥೆ ಶಾಲಿನಿ ಸಿಂಗ್ ಯಾರು?
Who is Shalini Singh?: ಜನವರಿ 26ರ ಗಣರಾಜ್ಯೋತ್ಸವಕ್ಕೂ ಮೊದಲು ದೆಹಲಿ ಪೊಲೀಸ್ ಇಲಾಖೆಯಲ್ಲಿ ಪ್ರಮುಖ ಪುನರ್ರಚನೆಯಾಗಿದೆ. ಈ ಬದಲಾವಣೆಯಲ್ಲಿ ಕ್ರೈಂ ಬ್ರಾಂಚ್ ತನ್ನ ಮೊದಲ ಮಹಿಳಾ ಮುಖ್ಯಸ್ಥರನ್ನು ನೇಮಕ ಮಾಡಿದೆ. ಐಪಿಎಸ್ ಶಾಲಿನಿ ಸಿಂಗ್ ಅವರೇ ಆ ಡೈನಾಮಿಕ್ ಅಧಿಕಾರಿಯಾಗಿದ್ದಾರೆ. ಕಾಂಜಾವಾಲಾ ಅಪಘಾತ ಪ್ರಕರಣವನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುವಂತೆ ಖುದ್ದು ಗೃಹ ಸಚಿವ ಅಮಿತ್ ಶಾ ಅವರೇ ಶಾಲಿನಿಯವರಿಗೆ ಸೂಚಿಸಿದ್ದಾರೆ.
ನವದೆಹಲಿ: ದೆಹಲಿ ಪೊಲೀಸ್ ಇಲಾಖೆಯಲ್ಲಿ ಪ್ರಮುಖ ಆಡಳಿತಾತ್ಮಕ ಪುನರ್ರಚನೆಯಾಗಿದೆ. ಐಪಿಎಸ್ ಅಧಿಕಾರಿ ಶಾಲಿನಿ ಸಿಂಗ್ ಅವರನ್ನು ಅಪರಾಧ ವಿಭಾಗದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಪ್ರಸ್ತುತ ಅಪರಾಧ ವಿಭಾಗದ ವಿಶೇಷ ಸಿಪಿಯಾಗಿರುವ ರವೀಂದ್ರ ಸಿಂಗ್ ಯಾದವ್ ಅವರನ್ನು ಹಿರಿಯ ಅಧಿಕಾರಿ ದೀಪೇಂದ್ರ ಪಾಠಕ್ ಅವರ ಬದಲಿಗೆ ವಿಶೇಷ ಸಿಪಿ, ಕಾನೂನು ಮತ್ತು ಸುವ್ಯವಸ್ಥೆ ವಲಯ-1 ಆಗಿ ನಿಯೋಜಿಸಲಾಗಿದೆ.
ಇದೇ ಮೊದಲ ಬಾರಿಗೆ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರಿಗೆ ಅಪರಾಧ ವಿಭಾಗದ ಕಮಾಂಡ್ ನೀಡಲಾಗಿದೆ. ಈ ಬದಲಾವಣೆಯಲ್ಲಿ 27 ಅಧಿಕಾರಿಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ. ಈ ಪೈಕಿ 25 ಮಂದಿ ಐಪಿಎಸ್ ಮತ್ತು ಇಬ್ಬರು ಡಿಸಿಪಿ ಶ್ರೇಣಿಯ ಡ್ಯಾನಿಪಿಎಸ್ ಅಧಿಕಾರಿಗಳಾಗಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ, ಸಂಚಾರ ಪೊಲೀಸ್ ಮತ್ತು ವಿಶೇಷ ಕೋಶದಂತಹ ಪ್ರಮುಖ ಖಾತೆಗಳನ್ನು ಹೊಂದಿರುವ ವಿಶೇಷ ಸಿಪಿ ಶ್ರೇಣಿಯ 11 ಐಪಿಎಸ್ ಅಧಿಕಾರಿಗಳಿಗೆ ಹೊಸ ಜವಾಬ್ದಾರಿಗಳನ್ನು ನೀಡಲಾಗಿದೆ.
ಇದನ್ನೂ ಓದಿ: “ನಾನು 3ನೇ ಹಂತದ ಸ್ತನ ಕ್ಯಾನ್ಸರ್’ನಿಂದ ಬಳಲುತ್ತಿದ್ದೇನೆ”- ಲೈವ್ ಬಂದು ಕಣ್ಣೀರಿಡುತ್ತಾ ಹೇಳಿದ ಖ್ಯಾತ ನಿರೂಪಕಿ
ಯಾರು ಈ ಐಪಿಎಸ್ ಶಾಲಿನಿ ಸಿಂಗ್?
1996ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಶಾಲಿನಿ ಸಿಂಗ್ ಅವರು ದೆಹಲಿಯಲ್ಲಿ ಹಲವು ಪ್ರಮುಖ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. ಶಾಲಿನಿ ಸಿಂಗ್ ಅವರು ದೆಹಲಿ ಪೊಲೀಸ್‌ನಲ್ಲಿ ಆರ್ಥಿಕ ಅಪರಾಧ ವಿಭಾಗದ (EOW) ವಿಶೇಷ ಆಯುಕ್ತರಾಗಿದ್ದಾರೆ. ಅದಕ್ಕೂ ಮೊದಲು ಶಾಲಿನಿ ಜಾಯಿಂಟ್ ಸಿಪಿ ವೆಸ್ಟರ್ನ್ ರೇಂಜ್ ಆಗಿದ್ದರು. ಆ ಸಮಯದಲ್ಲಿ ರೈತರ ಚಳವಳಿಯಲ್ಲಿ ದೆಹಲಿ ಪೊಲೀಸರ ಪರವಾಗಿ ಕಾರ್ಯತಂತ್ರಗಳನ್ನು ರೂಪಿಸುವಲ್ಲಿ ಶಾಲಿನಿ ಸಿಂಗ್ ಪ್ರಮುಖ ಪಾತ್ರ ವಹಿಸಿದರು. ಶಾಲಿನಿ ಪತಿ ಅನಿಲ್ ಶುಕ್ಲಾ ಕೂಡ ಐಪಿಎಸ್ ಆಗಿದ್ದಾರೆ. ಕೆಲ ಸಮಯದ ಹಿಂದೆ ಅವರನ್ನು ಎನ್‌ಐಎಗೆ ನಿಯೋಜಿಸಲಾಗಿತ್ತು. ಇವರು ಮುಂಬೈನ ಆಂಟಿಲಿಯಾ ಪ್ರಕರಣವನ್ನು ನಿಭಾಯಿಸಿದ್ದರು.
ದಕ್ಷ ಅಧಿಕಾರಿ ಶಾಲಿನಿ ಸಿಂಗ್
ದೆಹಲಿಯಲ್ಲಿ ತನ್ನ ಪೋಸ್ಟಿಂಗ್ ಸಮಯದಲ್ಲಿ ಒಮ್ಮೆ ಖಯಾಲಾ ಪ್ರದೇಶದಲ್ಲಿ ಕೋಮು ಉದ್ವಿಗ್ನತೆಯ ವದಂತಿಗಳು ಹರಡಿದಾಗ, ಶಾಲಿನಿ ಸಿಂಗ್ ಸ್ವತಃ ಧ್ವನಿವರ್ಧಕದೊಂದಿಗೆ ಬೀದಿಗಿಳಿದು ಪರಿಸ್ಥಿತಿಯನ್ನು ನಿಭಾಯಿಸಿದ್ದರು. ಶಾಲಿನಿ ಸಿಂಗ್ ನೈಋತ್ಯ, ಆಗ್ನೇಯ ಡಿಸಿಪಿ ಹುದ್ದೆಯಲ್ಲೂ ಸೇವೆ ಸಲ್ಲಿಸಿದ್ದಾರೆ. ಶಾಲಿನಿ ಸಿಂಗ್ ಕೂಡ ಐಬಿಯಲ್ಲಿ ನಿಯೋಜನೆಗೊಂಡಿದ್ದಾರೆ. ಅವರು ಅಂಡಮಾನ್ ಮತ್ತು ಪಾಂಡಿಚೇರಿಯಲ್ಲಿಯೂ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಭಾರತೀಯ ಸೇನೆ ಬಳಸುವ ಈ ಅಂಗೈ ಗಾತ್ರದ ಹೆಲಿಕಾಪ್ಟರ್ ಡ್ರೋನ್ ಬೆಲೆ ಎಷ್ಟು ಗೊತ್ತಾ..?
ಹಿಟ್ ಅಂಡ್ ರನ್ ಪ್ರಕರಣ:
ಶಾಲಿನಿ ಸಿಂಗ್ ಅನೇಕ ದೊಡ್ಡ ಪ್ರಕರಣಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. 2023ರಲ್ಲಿ ಇಡೀ ದೇಶವೇ ಹೊಸ ವರ್ಷಾಚರಣೆಯ ವಾತಾವರಣದಲ್ಲಿ ಮುಳುಗಿದ್ದಾಗ ಹೃದಯ ವಿದ್ರಾವಕ ಘಟನೆಯೊಂದು ದೆಹಲಿಯಿಂದ ಬೆಳಕಿಗೆ ಬಂದಿತ್ತು. ಅದುವೇ ದೆಹಲಿಯ ಪ್ರಸಿದ್ಧ ಅಂಜಲಿ ಹಿಟ್ ಅಂಡ್ ರನ್ ಪ್ರಕರಣ. ಈ ಹಿಟ್ ಅಂಡ್ ರನ್‍ನಲ್ಲಿ ಅಂಜಲಿಯನ್ನು ಸುಮಾರು 13 ಕಿಲೋಮೀಟರ್ ಎಳೆದೊಯ್ಯಲಾಗಿತ್ತು. ಪರಿಣಾಮ ಆಕೆ ಸಾವನ್ನಪ್ಪಿದ್ದಳು. ಈ ವೇಳೆ ಪೊಲೀಸರು ಹಾಜರುಪಡಿಸಿದ ಚಾರ್ಜ್ ಶೀಟ್ ನಲ್ಲಿ ಅಂಜಲಿ ಸುಮಾರು 500 ಮೀಟರ್ ಎಳೆದೊಯ್ದು ಸಾವನ್ನಪ್ಪಿದ್ದಾಳೆ ಎಂದು ಬರೆಯಲಾಗಿತ್ತು. ಖುದ್ದು ಗೃಹ ಸಚಿವ ಅಮಿತ್ ಶಾ ಅವರೇ ಈ ಪ್ರಕರಣದ ತನಿಖೆಯನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುವಂತೆ ಶಾಲಿನಿ ಸಿಂಗ್ ಅವರಿಗೆ ಹೇಳಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.