“ನಾನು 3ನೇ ಹಂತದ ಸ್ತನ ಕ್ಯಾನ್ಸರ್’ನಿಂದ ಬಳಲುತ್ತಿದ್ದೇನೆ”- ಲೈವ್ ಬಂದು ಕಣ್ಣೀರಿಡುತ್ತಾ ಹೇಳಿದ ಖ್ಯಾತ ನಿರೂಪಕಿ

Sara Sidner Cancer Viral Video: ಇದೇ ಸಂದರ್ಭದಲ್ಲಿ ಸಿಡ್ನರ್ ಜನರಿಗೆ ಸಲಹೆ ಕೂಡ ನೀಡಿದ್ದಾರೆ. “ಎಂಟು ಮಹಿಳೆಯರಲ್ಲಿ ಒಬ್ಬರು ಸ್ತನ ಕ್ಯಾನ್ಸರ್‌’ಗೆ ಬಲಿಯಾಗುತ್ತಾರೆ. ಇನ್ನು ನಮ್ಮ ಕುಟುಂಬದಲ್ಲಿ ಯಾರಿಗೂ ಈ ಕಾಯಿಲೆ ಬಂದಿಲ್ಲ, ನನಗೆ ಬಂದಿದೆ. ಆ ಎಂಟು ಮಹಿಳೆಯರ ಗುಂಪಿನಲ್ಲಿ ನಾನೂ ಒಬ್ಬಳಾದೆ. ಆದರೆ ಇದುವರೆಗೆ ಒಂದು ದಿನವೂ ನಾನು ಅನಾರೋಗ್ಯಕ್ಕೆ ಒಳಗಾಗಿಲ್ಲ” ಎಂದಿದ್ದಾರೆ.

Written by - Bhavishya Shetty | Last Updated : Jan 12, 2024, 08:13 PM IST
    • ಅಮೇರಿಕನ್ ಟಿವಿ ನಿರೂಪಕಿ ಸಾರಾ ಸಿಡ್ನರ್
    • ಕ್ಯಾನ್ಸರ್ ರೋಗಕ್ಕೆ ತುತ್ತಾಗಿರುವುದಾಗಿ ಜಗತ್ತಿಗೆ ಹೇಳಿದ ಟಿವಿ ನಿರೂಪಕಿ
    • ಇದೇ ಸಂದರ್ಭದಲ್ಲಿ ಸಿಡ್ನರ್ ಜನರಿಗೆ ಸಲಹೆ ಕೂಡ ನೀಡಿದ್ದಾರೆ
“ನಾನು 3ನೇ ಹಂತದ ಸ್ತನ ಕ್ಯಾನ್ಸರ್’ನಿಂದ ಬಳಲುತ್ತಿದ್ದೇನೆ”- ಲೈವ್ ಬಂದು ಕಣ್ಣೀರಿಡುತ್ತಾ ಹೇಳಿದ ಖ್ಯಾತ ನಿರೂಪಕಿ title=
sarah sidner

Sara Sidner Cancer Viral Video: ಅಮೇರಿಕನ್ ಟಿವಿ ನಿರೂಪಕಿ ಸಾರಾ ಸಿಡ್ನರ್ ತಾನು ಕ್ಯಾನ್ಸರ್ ರೋಗಕ್ಕೆ ತುತ್ತಾಗಿರುವುದಾಗಿ ಜಗತ್ತಿಗೆ ಹೇಳಿದ್ದಾರೆ. 3ನೇ ಹಂತದ ಕ್ಯಾನ್ಸರ್‌’ನೊಂದಿಗೆ ಹೋರಾಡುತ್ತಿದ್ದೇನೆ ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ. ಲೈವ್ ಬಂದು ಮಾತನಾಡಿದ 51 ವರ್ಷದ ಸಿಡ್ನರ್, “ಎರಡನೇ ತಿಂಗಳ ಕೀಮೋಥೆರಪಿ ನಡೆಯುತ್ತಿದೆ. ವಿಕಿರಣ ಚಿಕಿತ್ಸೆಗೆ ಒಳಗಾಗುತ್ತೇನೆ” ಎಂದು ಹೇಳಿದರು.

ಇದನ್ನೂ ಓದಿ: ಒಂದು ಪಂದ್ಯ ಆಡಿದ ಮರುದಿನವೇ ನಾಯಕತ್ವ ತೊರೆದ ಕ್ಯಾಪ್ಟನ್! ಹೊರಬಿತ್ತು ಶಾಕಿಂಗ್ ಅಪ್ಡೇಟ್

ಇದೇ ಸಂದರ್ಭದಲ್ಲಿ ಸಿಡ್ನರ್ ಜನರಿಗೆ ಸಲಹೆ ಕೂಡ ನೀಡಿದ್ದಾರೆ. “ಎಂಟು ಮಹಿಳೆಯರಲ್ಲಿ ಒಬ್ಬರು ಸ್ತನ ಕ್ಯಾನ್ಸರ್‌’ಗೆ ಬಲಿಯಾಗುತ್ತಾರೆ. ಇನ್ನು ನಮ್ಮ ಕುಟುಂಬದಲ್ಲಿ ಯಾರಿಗೂ ಈ ಕಾಯಿಲೆ ಬಂದಿಲ್ಲ, ನನಗೆ ಬಂದಿದೆ. ಆ ಎಂಟು ಮಹಿಳೆಯರ ಗುಂಪಿನಲ್ಲಿ ನಾನೂ ಒಬ್ಬಳಾದೆ. ಆದರೆ ಇದುವರೆಗೆ ಒಂದು ದಿನವೂ ನಾನು ಅನಾರೋಗ್ಯಕ್ಕೆ ಒಳಗಾಗಿಲ್ಲ” ಎಂದಿದ್ದಾರೆ.

“ನಾನು ಧೂಮಪಾನ ಮಾಡುವುದಿಲ್ಲ, ಕಡಿಮೆ ಆಲ್ಕೋಹಾಲ್ ಕುಡಿಯುತ್ತೇನೆ, ನನ್ನ ಕುಟುಂಬದಲ್ಲಿ ಯಾರಿಗೂ ಸ್ತನ ಕ್ಯಾನ್ಸರ್ ಇಲ್ಲ ಆದರೆ ನಾನು 3ನೇ ಹಂತದ ಸ್ತನ ಕ್ಯಾನ್ಸರ್ನಿಂದ ಬಳಲುತ್ತಿದ್ದೇನೆ. ಎಲ್ಲಾ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ವಿಶೇಷವಾಗಿ ಕಪ್ಪು ಮಹಿಳೆಯರಲ್ಲಿ, ಸ್ತನ ಕ್ಯಾನ್ಸರ್‌’ನಿಂದ ಅಪಾಯವು ಬಿಳಿ ವರ್ಣದ ಮಹಿಳೆಯರಿಗಿಂತ 40 ಪ್ರತಿಶತ ಹೆಚ್ಚಾಗಿದೆ” ಎಂದು ಹೇಳಿದ್ದಾರೆ.

‘ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ನಾನು ಕ್ಯಾನ್ಸರ್‌’ಗೆ ಧನ್ಯವಾದ ಹೇಳಿದ್ದೇನೆ,, ಜೀವನದಲ್ಲಿ ಎಷ್ಟೇ ನರಕ ಅನುಭವಿಸುತ್ತಿದ್ದರೂ, ನಾನು ಇನ್ನೂ ನನ್ನ ಜೀವನವನ್ನು ಪ್ರೀತಿಸುತ್ತೇನೆ” ಎನ್ನುತ್ತಾ ಸಿಡ್ನರ್ ಕಣ್ಣೀರು ಹಾಕಿದ್ದಾರೆ.

“ಬದುಕುಳಿದಿರುವುದು ಈಗ ನನಗೆ ನಿಜವಾಗಿಯೂ ಆಶ್ಚರ್ಯಕತ. ನನಗೆ ತೊಂದರೆ ಕೊಡುತ್ತಿದ್ದ ಆ ಸಣ್ಣ ಪುಟ್ಟ ವಿಷಯಗಳಿಗೆ ನಾನು ಗಮನ ಕೊಡದ ಕಾರಣ ಇದೀಗ ಈ ಸಮಸ್ಯೆ ಎದುರಿಸುತ್ತಿದ್ದೇನೆ” ಎಂದಿದ್ದಾರೆ.

ಇದನ್ನೂ ಓದಿ: ಗೆಸ್ ಮಾಡೋಕು ಸಾಧ್ಯವಾಗದ ಈ ಸ್ಪರ್ಧಿಯೇ ಬಿಗ್ ಬಾಸ್’ನಿಂದ ಹೊರಕ್ಕೆ! ಫಿನಾಲೆ ಸಮೀಪದಲ್ಲಿ ‘ಎಲಿಮಿನೇಷನ್’ ತೂಗುಗತ್ತಿ

ಇನ್ನು ಸಿಡ್ನರ್ ಅಮೆರಿಕದ ಫ್ಲೋರಿಡಾದವರು. ಅವರ ತಂದೆ ಆಫ್ರಿಕನ್-ಅಮೇರಿಕನ್ ಮತ್ತು ತಾಯಿ ಬ್ರಿಟಿಷ್. ಈಕೆ CNN ನ್ಯೂಸ್ ಸೆಂಟ್ರಲ್‌’ನ ಸಹ-ಹೋಸ್ಟ್ ಆಗಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News