ನೀರಿನ ಬಾಟಲಿಯ ಮುಚ್ಚಳಗಳು ಏಕೆ ನೀಲಿ, ಬಿಳಿ, ಕಪ್ಪು ಬಣ್ಣದ್ದಾಗಿರುತ್ತವೆ..? ಇಂಟ್ರಸ್ಟಿಂಗ್ ವಿಚಾರ ಇಲ್ಲಿದೆ
Water bottle cap color fact : ಇತ್ತೀಚಿನ ದಿನಗಳಲ್ಲಿ ನೀರಿನ ಬಾಟಲ್ಗಳ ಮಾರಾಟದ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಎಲ್ಲಿ ನೋಡಿದರೂ ಸಹ ಪ್ರಯಾಣಿಕರು ಕುಡಿದು ಎಸೆದ ಬಾಟಲಿಗಳ ರಾಶಿಗಳೇ ಕಾಣಲು ಸಿಗುತ್ತವೆ. ಅದು ಒಂದು ಕಡೆ ಇರಲಿ ಬಿಡಿ, ಜನ ಪರಿಸರವನ್ನು ಕಾಪಾಡುವತ್ತ ಗಮನಹರಿಸಿದ್ರೆ ಉತ್ತಮ. ಅಂದಹಾಗೆ ನಿಮಗೆ ನೀರಿನ ಬಾಟಲಿ ಮೇಲೆ ನೀಲಿ ಬಣ್ಣದ ಕ್ಯಾಪ್ ಏಕೆ ಹಾಕಿರುತ್ತಾರೆ ಎನ್ನುವ ವಿಚಾರ ಗೊತ್ತೆ..? ಗೊತ್ತಿಲ್ಲ ಅಂದ್ರೆ ತಿಳಿಯೋಣ ಬನ್ನಿ.
Water bottle health : ನೀರಿನ ಬಾಟಲ್ ಜನರ ಜೀವನ ಒಂದು ಭಾಗವಾಗಿಬಿಟ್ಟಿವೆ. ಪ್ರವಾಸ, ಪ್ರಯಾಣ, ಸಭೆ ಸಮಾರಂಭದಲ್ಲಿ ನೀರಿನ ಬಾಟಲಿಗಳನ್ನು ಯತಯಥೇಚ್ಛವಾಗಿ ಬಳಸಲಾಗುತ್ತದೆ. ನೀವು ನೀರಿನ ಬಾಟಲಿಗಳನ್ನು ಖರೀದಿಸಿದ್ದೀರಾ..? ಹಾಗಿದ್ರೆ ಆ ಬಾಟಲಿ ಮೇಲೆ ನೀಲಿ ಬಣ್ಣದ ಮುಚ್ಚಳವನ್ನೇ ಏಕೆ ಬಳಸುತ್ತಾರೆ ಎಂಬ ವಿಚಾರದ ಕುರಿತು ಎಂದಾದರೂ ಯೋಚನೆ ಮಾಡಿದ್ದೀರಾ..?
ಹೌದು.. ಒಂದು ನೀರಿನ ಬಾಟಲಿಗೆ ನೀಲಿ ಕ್ಯಾಪ್ ಇದ್ದರೆ, ಅದು ಖನಿಜಯುಕ್ತ ನೀರು ಎಂದು ಅರ್ಥ. ಈ ನೀಲಿ ಕ್ಯಾಪ್ ವಾಟರ್ ಬಾಟಲ್‌ಗಳಲ್ಲಿರುವ ನೀರನ್ನು ಮಿನರಲ್ ವಾಟರ್ ಎಂದು ಸೂಚಿಸುತ್ತದೆ. ಇನ್ನೂ ಕೆಲವು ಬಾಟಲಿಗಳಲ್ಲಿ ಬಿಳಿ ಮತ್ತು ಹಸಿರು ಬಣ್ಣದ ಮುಚ್ಚಳಗಳಿರುತ್ತವೆ. ಅವುಗಳ ಅರ್ಥ ಬಾಟಲ್ ನೀರಿಗೆ ಹೆಚ್ಚುವರಿ ಖನಿಜಗಳನ್ನು ಸೇರಿಸಲಾಗಿದೆ ಅಂತ.
ಇದನ್ನೂ ಓದಿ:1 ರೂ. ಸಂಬಳ ಪಡೆಯದ ಪ್ರಧಾನಿ ಮೋದಿ ಬ್ಯಾಂಕ್ ಬ್ಯಾಲೆನ್ಸ್ ಎಷ್ಟು ಗೊತ್ತೆ..? ಊಹೆಗೂ ನಿಲುಕದು
ಕೆಲವು ನೀರಿನ ಬಾಟಲ್ ಕಂಪನಿಗಳು ನೀರಿಗೆ ಎಲೆಕ್ಟ್ರೋಲೈಟ್‌ಗಳಂತಹ ರುಚಿಗಳನ್ನು ಸೇರಿಸುತ್ತವೆ. ಅಂತಹ ಬಾಟಲಿಗಳ ಕವರಿನ ಮೇಲೆ ಅದರಲ್ಲಿ ಸೇರಿಸಿರುವ ರುಚಿಕಾರಕಗಳ ಹೆಸರನ್ನು ನೀಡಿರುತ್ತಾರೆ. ಮುಂದಿನ ಬಾರಿ ನೀವು ನೀರಿನ ಬಾಟಲಿ ಖರೀದಿಸಿದಾಗ ತಪ್ಪದೇ ಗಮನಿಸಿ.
ಇನ್ನೂ ಕೆಲವು ನೀರಿನ ಬಾಟಲಿಗಳ ಮೇಲೆ ಕೆಂಪು, ಹಳದಿ, ಕಪ್ಪು ಮತ್ತು ಗುಲಾಬಿ ಬಣ್ಣದ ಕ್ಯಾಪ್‌ಗಳನ್ನು ಹಾಕಲಾಗಿರುತ್ತದೆ. ಕೆಂಪು ಬಣ್ಣದ ಕ್ಯಾಪ್ ಹೊಂದಿರುವ ನೀರಿನ ಬಾಟಲ್‌ನಲ್ಲಿ ಕಾರ್ಬೊನೇಟೆಡ್ ನೀರು ಇರುತ್ತದೆ. ಹಳದಿ ಮುಚ್ಚಳದ ನೀರಿನ ಬಾಟಲಿಯಲ್ಲಿ ವಿಟಮಿನ್ಸ್ ಮತ್ತು ಎಲೆಕ್ಟ್ರೋಲೈಟ್ಸ್ ಸೇರಿಸಲಾಗಿರುತ್ತದೆ.
ಇದನ್ನೂ ಓದಿ:ಈ ರಾಜ್ಯದ 7 ಹಳ್ಳಿಗಳಲ್ಲಿ ದೀಪಾವಳಿಗೆ ಒಂದೇ ಒಂದು ಪಟಾಕಿ ಸಹ ಹಚ್ಚಲ್ಲ..! ಏಕೆ ಗೊತ್ತೆ..?
ಮುಖ್ಯವಾಗಿ ನೀರಿನ ಬಾಟಲಿಗಳಿಗೆ ಬೇರೆ ಬೇರೆ ಬಣ್ಣಗಳ ಮುಚ್ಚಳವನ್ನು ಹಾಕಲು ಇರುವ ಕಾರಣ ಅವುಗಳ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ತೋರಿಸಲು. ಕೆಲವು ಬಾಟಲಿಗಳಿಗೆ ಕಪ್ಪು ಬಣ್ಣದ ಕ್ಯಾಪ್ ಇರುತ್ತದೆ, ಈ ಬಾಟಲಿಯಲ್ಲಿ ಕ್ಷಾರೀಯ ನೀರು ಇದೆ ಎಂಬುವುದು ಅದರ ಅರ್ಥ.
ಕಪ್ಪು ಕ್ಯಾಪ್ ಹೊಂದಿರುವ ನೀರಿನ ಬಾಟಲಿಗಳು ಅಪರೂಪ. ಇವುಗಳನ್ನು ಪ್ರೀಮಿಯಂ ನೀರಿನ ಉತ್ಪನ್ನಗಳಿಗೆ ಮಾತ್ರ ಬಳಸಲಾಗುತ್ತದೆ. ಹೆಚ್ಚಿನ ಸೆಲೆಬ್ರಿಟಿಗಳು ಈ ನೀರನ್ನು ಕುಡಿಯುತ್ತಾರೆ. ಇನ್ನುಳಿದಂತೆ ಕೆಲವು ಬಾಟಲಿಗಳು ಪಿಂಕ್ (ಗುಲಾಬಿ) ಕಲರ್ ಕ್ಯಾಪ್ ಹೊಂದಿರುತ್ತವೆ. ಇಂತಹ ಬಾಟಲಿಗಳನ್ನು ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಅನೇಕ ಚಾರಿಟಿಗಳು ಬಳಸುತ್ತವೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.