Villagers celebrate silent Deepavali : ದೀಪಾವಳಿಯನ್ನು 'ಬೆಳಕಿನ ಹಬ್ಬ' ಅಂತಲೂ ಕರೆಯುತ್ತಾರೆ. ಈ ಹಬ್ಬದಂದು ಇಡೀ ದೇಶ ವಿದ್ಯುತ್ ಮತ್ತು ಹಣತೆ ದೀಪಗಳಿಂದ ಜಗಮಗಿಸುತ್ತದೆ. ದೀಪಗಳ ಜೊತೆಗೆ ಪಟಾಕಿ ಸಿಡಿಸುವುದು ವಾಡಿಕೆ. ಆಕಾಶದೆತ್ತರಕ್ಕೆ ಹೋಗಿ ಚಿಮ್ಮುವ ಪಟಾಕಿ ಬಾನಿಗೆ ಅಲಂಕಾರದಂತೆ ಕಾಣುತ್ತದೆ. ಆದರೆ, ಅದೇ ಸಮಯದಲ್ಲಿ ಇದು ಪ್ರಾಣಿಗಳು ಮತ್ತು ಪರಿಸರದ ಮೇಲೆ ಅನೇಕ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ.
ಆದ್ರೆ ಈಗ ಜನರು ಜಾಗೃತರಾಗಿದ್ದು, ಹೆಚ್ಚಾಗಿ ಪಟಾಕಿ ಸಿಡಿಸುವುದಿಲ್ಲ. ಇದರಿಂದಾಗಿ ವಾಯು ಮಾಲಿನ್ಯ ಕಡಿಮೆಯಾಗಿದೆ ಮತ್ತು ಮಾನವನ ಆರೋಗ್ಯದ ಮೇಲೂ ಪರಿಣಾಮ ಬೀರುವುದಿಲ್ಲ. ಈ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು, ತಮಿಳುನಾಡಿನಲ್ಲಿ ಏಳು ಹಳ್ಳಿಗಳು ʼಮೌನ ದೀಪಾವಳಿʼಯನ್ನು ಆಚರಿಸುತ್ತವೆ. ಇದಕ್ಕೆ ಒಂದು ನಿರ್ದಿಷ್ಟ ಕಾರಣವೂ ಸಹ ಇದೆ.. ಬನ್ನಿ ತಿಳಿಯೋಣ..
ಇದನ್ನೂ ಓದಿ: ಚಳಿಗಾಲದಲ್ಲಿಯೂ ಗುಲಾಬಿಯಂತಹ ತ್ವಚೆ ಹೊಂದಲು ಈ ಅಡುಗೆ ವಸ್ತುವನ್ನು ಬಳಸಿ..!
ತಮಿಳುನಾಡಿನ ಈರೋಡ್ ಜಿಲ್ಲೆಯ ಏಳು ಹಳ್ಳಿಗಳು ಕೇವಲ ದೀಪಗಳನ್ನು ಬೆಳಗುವ ಮೂಲಕ ನಿಶಬ್ದ ದೀಪಾವಳಿ ಹಬ್ಬವನ್ನು ಸಂಪ್ರದಾಯಿಕವಾಗಿ ಆಚರಿಸುತ್ತವೆ. ಇದಕ್ಕೆ ಮುಖ್ಯ ಕಾರಣ, ಗ್ರಾಮದ ಹತ್ತಿರವೇ ಪಕ್ಷಿಧಾಮ ಇರುವುದು. ಹೌದು.. ಪಕ್ಷಿಧಾಮವಿರುವ ಈರೋಡ್ನಿಂದ 10 ಕಿಲೋಮೀಟರ್ ದೂರದಲ್ಲಿರುವ ವಡಮುಗಂ ವೆಲ್ಲೋಡ್ನ ಸುತ್ತಮುತ್ತ ಈ ಗ್ರಾಮಗಳಿವೆ. ಸಾವಿರಾರು ಸ್ಥಳೀಯ ಪಕ್ಷಿ ಪ್ರಭೇದಗಳು ಮತ್ತು ಇತರ ಪ್ರದೇಶಗಳಿಂದ ವಲಸೆ ಬರುವ ಹಕ್ಕಿಗಳು ಅಕ್ಟೋಬರ್ ಮತ್ತು ಜನವರಿ ನಡುವೆ ಮೊಟ್ಟೆಗಳನ್ನು ಇಡಲು ಮತ್ತು ಮರಿ ಮಾಡಲು ಅಭಯಾರಣ್ಯಕ್ಕೆ ಭೇಟಿ ನೀಡುತ್ತವೆ.
ದೀಪಾವಳಿ ಸಾಮಾನ್ಯವಾಗಿ ಅಕ್ಟೋಬರ್ ಅಥವಾ ನವೆಂಬರ್ನಲ್ಲಿ ಬರುವುದರಿಂದ ಪಕ್ಷಿಧಾಮದ ಸುತ್ತಮುತ್ತ ವಾಸಿಸುವ 900 ಕ್ಕೂ ಹೆಚ್ಚು ಕುಟುಂಬಗಳು ಪಕ್ಷಿಗಳನ್ನು ಉಳಿಸಲು ಪಟಾಕಿಗಳನ್ನು ನಿಷೇಧ ಮಾಡಿವೆ. ಅಲ್ಲದೆ, ಕಳೆದ 22 ವರ್ಷಗಳಿಂದ ಈ ಸಂರಕ್ಷಣಾ ವಿಧಾನವನ್ನು ಅನುಸರಿಸುತ್ತಿದ್ದಾರೆ. ಹಾಗಂತ ದೀಪಾವಳಿ ಹಬ್ಬ ಆಚರಿಸಲ್ಲ ಅಂತ ಏನಿಲ್ಲ, ಕೇವಲ ಸುರ್ ಸುರ್ ಬತ್ತಿಯಂತಹ ಶಬ್ಧ ರಹಿತ ಪಟಾಕಿ ಸುಡಲು ಅವಕಾಶ ನೀಡುತ್ತಾರೆ.
ಇದನ್ನೂ ಓದಿ: Daily GK Quiz: ಕಪ್ಪು ಇರುವೆಗಳು ಏಕೆ ಕಚ್ಚುವುದಿಲ್ಲ..?
ಈ ವರ್ಷವೂ ಸೆಲ್ಲಪ್ಪಂಪಳಯಂ, ವಡಮುಗಂ ವೆಲ್ಲೋಡೆ, ಸೆಮ್ಮಂಡಂಪಳಯಂ, ಕರುಕ್ಕಂಕಟ್ಟು ವಲಸು, ಪುಂಗಂಪಾಡಿ ಸೇರಿ ಎರಡು ಗ್ರಾಮಗಳು ಮೌನ ದೀಪಾವಳಿಯನ್ನು ಆಚರಿಸುವ ಮೂಲಕ ಮಾನವೀಯತೆ ಮೆರೆದಿದ್ದಾವೆ. ಕುಟುಂಬಗಳು ತಮ್ಮದೇ ಆದ ರೀತಿಯಲ್ಲಿ ದೀಪಾವಳಿಯನ್ನು ಆಚರಿಸಿ ಸಂಭ್ರಮಿಸಿವೆ. ಈ ಹಳ್ಳಿಗರ ನಿರ್ಧಾರ ನಿಜಕ್ಕೂ ಹೆಮ್ಮೆ ಪಡುವಂತ ವಿಚಾರ.. ಅಲ್ಲವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.