ನವದೆಹಲಿ: 2015 ರಲ್ಲಿ  ಅಲಹಾಬಾದ್ ಹೈಕೋರ್ಟ್ ಸರ್ಕಾರಿ ಅಧಿಕಾರಿಗಳು,ನ್ಯಾಯಾಧೀಶರನ್ನು ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಕಳಿಸುವಂತೆ ತೀರ್ಪನ್ನು ನೀಡಿತ್ತು. ಅಲ್ಲದೆ ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿಗೆ ಈ ಕುರಿತಾಗಿ ನಿರ್ದೇಶನವನ್ನು ಕೋರ್ಟ್ ನೀಡಿತ್ತು.ಆದರೆ ಅದು ಸಮರ್ಪಕವಾಗಿ ಜಾರಿಗೆ ಬರದ ಹಿನ್ನಲೆಯಲ್ಲಿ ಸುಪ್ರಿಂ ಕೋರ್ಟ್ ನಲ್ಲಿ ಈಗ ಇದನ್ನು ಪ್ರಶ್ನಿಸಲಾಗಿದೆ. ಈ ಕುರಿತಾಗಿ ಅರ್ಜಿ ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್ ಅಧಿಕಾರಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಏಕೆ ಸೇರಿಸುತ್ತಿಲ್ಲ ಎಂದು ಪ್ರಶ್ನಿಸಿದೆ.


COMMERCIAL BREAK
SCROLL TO CONTINUE READING

ನ್ಯಾಯಮೂರ್ತಿ ಸುದೀರ್ ಅಗರ್ವಾಲ ಅವರು "ಸರ್ಕಾರಿ ಅಧಿಕಾರಿಗಳ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸುವುದರ ಮೂಲಕ ಅವರು ಆ ಎಲ್ಲ ಶಾಲೆಗಳನ್ನು ಉತ್ತಮವಾಗಿ ನಿರ್ವಹಹಿಸುತ್ತಿದ್ದಾರೆ ಎನ್ನುವುದನ್ನು ತಿಳಿಯಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.


ವಕೀಲ ಶಿವಕುಮಾರ್ ತ್ರಿಪಾಟಿ ಎನ್ನುವವರು ಈಗ ರಾಜ್ಯದಲ್ಲಿ ಈಗ ಈ ಹೈಕೋರ್ಟ್ ನಿರ್ದೇಶನವನ್ನು ಪಾಲಿಸದ ಹಿನ್ನಲೆಯಲ್ಲಿ ಸುಪ್ರಿಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.ಅರ್ಜಿಯಲ್ಲಿ ಹೈಕೋರ್ಟ್ ಮೂರು ವರ್ಷವಾದರೂ ಕೂಡ ಈ ತೀರ್ಪನ್ನು ಜಾರಿಗೆ ತರದೇ ಇರುವುದು ಮತ್ತು  ಈ ಅವಧಿಯಲ್ಲಿ ಈ ಶಾಲೆ ನಿರ್ವಹಣೆ ಹಣದ ಕುರಿತಾಗಿಯೂ ಅವರು ಪ್ರಸ್ತಾಪಿಸಿದ್ದಾರೆ.