ನವದೆಹಲಿ: ಮುಂದಿನ ವಾರ ನಡೆಯಲಿರುವ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಗೂ ಮುನ್ನ ನಡೆದ ರ್ಯಾಲಿಯಲ್ಲಿ ಮಾತನಾಡಿದ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಈಗ ಹೈದರಾಬಾದ್ ನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡಲು ಆಗ್ರಹಿಸಿದ್ದಾರೆ.


COMMERCIAL BREAK
SCROLL TO CONTINUE READING

ಆ ಮೂಲಕ ಈ ಬಾರಿಗೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಬಲವಾಗಿ ಟಿಆರ್ಎಸ್ ಹಾಗೂ ಓವಾಸಿ ಪಕ್ಷಕ್ಕೆ ಟಕ್ಕರ್ ನೀಡಲು ಮುಂದಾಗಿದೆ. ಟಿಆರ್ಎಸ್ ಮತ್ತು ಅಸದುದ್ದೀನ್ ಒವೈಸಿ ಅವರ ಎಐಐಎಂಐಎಂ ದುಷ್ಕೃತ್ಯದ ಮೈತ್ರಿಯಿಂದಾಗಿ ನಗರದಲ್ಲಿ ಅಭಿವೃದ್ದಿಯಾಗಿಲ್ಲ ಒಂದು ವೇಳೆ ಬಿಜೆಪಿ ಗೆದ್ದರೆ ನಗರವನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡಬಹುದೆಂದು ಘೋಷಿಸಿತು.


ಯೋಗಿ ಆದಿತ್ಯನಾಥ್ ಅಲ್ಲಿ ನೆರೆದಿದ್ದ ಬೆಂಬಲಿಗರು ಹುರಿದುಂಬಿಸಿದಂತೆ ಕೇಳಿದರು.


ಇನ್ನು ಮುಂದುವರೆದು ಮಾತನಾಡಿದ ಅವರು 'ಬಿಹಾರದಲ್ಲಿ ಹೊಸದಾಗಿ ಚುನಾಯಿತರಾದ ಎಐಎಂಐಎಂ ಶಾಸಕ ಪ್ರಮಾಣ ವಚನ ಸ್ವೀಕರಿಸುವಾಗ 'ಹಿಂದೂಸ್ತಾನ್ 'ಎಂದು ಹೇಳಲು ನಿರಾಕರಿಸಿದ್ದಾರೆ. ಅವರು ಹಿಂದೂಸ್ತಾನ್‌ನಲ್ಲಿ ವಾಸಿಸುತ್ತಾರೆ ಆದರೆ ಹಿಂದೂಸ್ತಾನ್ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸುವಾಗ ಅವರು ಹಿಂಜರಿಯುತ್ತಾರೆ" ಎಂದು ಲಾಲ್ ದರ್ವಾಜಾದಲ್ಲಿ ಮಾತನಾಡುತ್ತಾ ಅವರು ಹೇಳಿದರು.