ನವದೆಹಲಿ: ಉತ್ತರ ಪ್ರದೇಶದ ಬಾಂಡಾ ಜಿಲ್ಲೆಯ ವಿದ್ಯುತ್ ವಿಭಾಗದ ಹಲವಾರು ಉದ್ಯೋಗಿಗಳು ಸರ್ಕಾರಿ ಕಚೇರಿ ಕಟ್ಟಡವು ಶಿಥಿಲಗೊಂಡಿರುವ ಕಾರಣದಿಂದಾಗಿ ಹೆಲ್ಮೆಟ್ ಧರಿಸಿ ಕಾರ್ಯನಿರ್ವಹಿಸುತ್ತಿರುವ ಪೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.


COMMERCIAL BREAK
SCROLL TO CONTINUE READING

ನೌಕರರು ಕೆಲಸ ಮಾಡುತ್ತಿರುವ ಕೋಣೆಯ ಮೇಲ್ಚಾವಣಿಯ ಪ್ಲಾಸ್ಟರ್ ಹೊರಬಂದಂತೆ ಕಾಣುತ್ತಿದ್ದು, ಇಡೀ ಕೋಣೆಯೂ ಈಗ ಕೇವಲ ಒಂದೇ ಕಂಬದ ಮೇಲೆ ನಿಂತಿದೆ. ಈ ಹಿನ್ನಲೆಯಲ್ಲಿ ಈಗ ಸರ್ಕಾರಿ ನೌಕರರು ಅವಘಡದಿಂದ ತಪ್ಪಿಸಿಕೊಳ್ಳಲು ಹೆಲ್ಮೆಟ್ ಧರಿಸಿದ್ದಾರೆ ಎನ್ನಲಾಗಿದೆ.


'ಯಾವುದೇ ಅಪಘಾತ ಸಂಭವಿಸಿದಲ್ಲಿ ನಮ್ಮನ್ನು ರಕ್ಷಿಸಿಕೊಳ್ಳಲು ಕೆಲಸದ ವೇಳೆ ನಾವು ಹೆಲ್ಮೆಟ್ ಧರಿಸುತ್ತೇವೆ. ಕಟ್ಟಡದ ಸ್ಥಿತಿಯ ಬಗ್ಗೆ ನಾವು ಹಿರಿಯರಿಗೆ ಹಲವಾರು ಬಾರಿ ಮಾಹಿತಿ ನೀಡಿದ್ದೇವೆ. ಆದರೆ ಈ ವಿಷಯದಲ್ಲಿ ಯಾರೂ ಯಾವುದೇ ಕ್ರಮ ಕೈಗೊಂಡಿಲ್ಲ. ಬಹುಶಃ, ಅವರು ನಮ್ಮಲ್ಲಿ ಕೆಲವರು ರಿಪೇರಿ ಕಾರ್ಯ ಪ್ರಾರಂಭವಾಗುವ ಮೊದಲು ನಮ್ಮ ಸಾವಿಗೆ ಕಾಯುತ್ತಿದ್ದಾರೆ ಎಂದು ಕಾಣಿಸುತ್ತದೆ' ಎಂದು ಉದ್ಯೋಗಿಯೊಬ್ಬರು ಹೇಳಿದ್ದಾರೆ.


ಇನ್ನು ಮಳೆಗಾಲದ ವೇಳೆ ನೌಕರರು ರಂದ್ರದಿಂದ ತಪ್ಪಿಸಿಕೊಳ್ಳಲು ಛತ್ರಿಗಳನ್ನು ಹಿಡಿದಿರುತ್ತಾರೆ ಎಂದು ಹೇಳಿದರು. ಈ ಕಟ್ಟಡ ಶಿಥಿಲಗೊಂಡಿರುವುದಷ್ಟೇ ಅಲ್ಲ ಅಲ್ಲಿರುವ ವಸ್ತುಗಳು ಸಹಿತ ನಿರುಪಯುಕ್ತವಾಗಿವೆ ಎನ್ನಲಾಗಿದೆ. ಈ ವಿಚಾರವಾಗಿ ಇದುವರೆಗೆ ಯಾವುದೇ ಸರ್ಕಾರದ ಹಿರಿಯ ಅಧಿಕಾರಿಗಳ ಪ್ರತಿಕ್ರಿಯಿಸಲು ಸಿದ್ಧರಿರಲಿಲ್ಲ ಎನ್ನಲಾಗಿದೆ.