ಸರ್ವಾಧಿಕಾರಿಗಳ ಹೆಸರುಗಳು `M` ನಿಂದೇಕೆ ಪ್ರಾರಂಭವಾಗುತ್ತವೆ?- ರಾಹುಲ್ ಗಾಂಧಿ
ಪ್ರಧಾನಿ ನರೇಂದ್ರ ಮೋದಿಯವರನ್ನು ತಮ್ಮ ಟ್ವೀಟ್‌ಗಳಲ್ಲಿ ನಿಯಮಿತವಾಗಿ ಗುರಿಯಾಗಿಸಿಕೊಂಡಿರುವ ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರು ಇಂದು ಮತ್ತೊಮ್ಮೆ ಅವರ ವಿರುದ್ಧ ಕಿಡಿಕಾರಿದ್ದಾರೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು ತಮ್ಮ ಟ್ವೀಟ್‌ಗಳಲ್ಲಿ ನಿಯಮಿತವಾಗಿ ಗುರಿಯಾಗಿಸಿಕೊಂಡಿರುವ ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರು ಇಂದು ಮತ್ತೊಮ್ಮೆ ಅವರ ವಿರುದ್ಧ ಕಿಡಿಕಾರಿದ್ದಾರೆ.
"ಅನೇಕ ಸರ್ವಾಧಿಕಾರಿಗಳ ಹೆಸರುಗಳು 'ಎಂ' ನಿಂದೇಕೆ ಪ್ರಾರಂಭವಾಗುತ್ತದೆ?" ಎಂದು ಅವರು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪೂರಕವಾಗಿ ಅವರು ತಮ್ಮ ಟ್ವೀಟ್ ನಲ್ಲಿ "ಮಾರ್ಕೋಸ್, ಮುಸೊಲಿನಿ, ಮಿಲೋಸೆವಿಕ್, ಮುಬಾರಕ್, ಮೊಬುಟು, ಮುಷರಫ್, ಮೈಕೊಂಬೆರೊ".ಅವರ ಹೆಸರುಗಳನ್ನು ಉಲ್ಲೇಖಿಸಿದ್ದಾರೆ.
rahul gandhi) ರೈತರ ವಿಷಯದಲ್ಲಿ ಸರ್ಕಾರವನ್ನು ಸತತವಾಗಿ ಗುರಿಯಾಗಿಸಿಕೊಂಡಿದ್ದಾರೆ.
ಇದನ್ನೂ ಓದಿ: ಇಂದು Farmers-Central Govt ನಡುವೆ ಇನ್ನೊಂದು ಸಭೆ, ವಿಫಲವಾದರೆ ಪ್ರತಿಭಟನೆ ಹೆಚ್ಚಾಗುವ ಸಾಧ್ಯತೆ
ಮಂಗಳವಾರ, ರೈತರ ಪ್ರತಿಭಟನೆಯ ಬಗ್ಗೆ "ನಕಲಿ," ಮಧ್ಯವರ್ತಿ ಮತ್ತು ಪ್ರಚೋದನಕಾರಿ ಟ್ವೀಟ್‌ಗಳನ್ನು ಮಾಡುವ 250 ಖಾತೆಗಳನ್ನು ಸ್ಥಗಿತಗೊಳಿಸುವಂತೆ ಸರ್ಕಾರ ಟ್ವಿಟರ್‌ಗೆ ಆದೇಶಿಸಿದ ನಂತರ, ರಾಹುಲ್ ಗಾಂಧಿ ಅವರ ಈ ಟ್ವೀಟ್ ಬಂದಿದೆ.
Narendra Modi) ಆಡಳಿತದ ಶೈಲಿ ಎಲ್ಲವನ್ನು ಮುಚ್ಚ್ಹಿಸುವುದು, ಕತ್ತರಿಸುವುದು, ಹಾಗೂ ಪುಡಿಪುಡಿ ಮಾಡುವುದು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಇಂದು ವಿಡಿಯೋವೊಂದನ್ನು ಪೋಸ್ಟ್ ಮಾಡಿ ಅವರು ಪ್ರಧಾನಿ "ತಮ್ಮ ಕೆಲಸವನ್ನು ಮಾಡಲಿ" ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಮೋದಿ 'ಮನ್ ಕಿ ಬಾತ್' ಕಾರ್ಯಕ್ರಮದ ವೇಳೆ ತಟ್ಟೆ ಬಾರಿಸಿ ಪ್ರತಿಭಟನೆ ನಡೆಸಲು ಕರೆ
"ಈ ದೇಶದಲ್ಲಿ ಇನ್ನು ಮುಂದೆ ನಾಯಕತ್ವ ಇಲ್ಲ. ಕೇವಲ ಮಾತುಕತೆ ಇದೆ. ತಿಳುವಳಿಕೆ ಇಲ್ಲ, ಕಾರ್ಯತಂತ್ರವಿಲ್ಲ..ಆದ್ದರಿಂದ ಪ್ರಧಾನಮಂತ್ರಿಯವರಿಗೆ ನನ್ನ ನಿರಂತರ ವಿನಂತಿಯೆಂದರೆ 'ನಿಮ್ಮ ಕೆಲಸವನ್ನು ಮಾಡಿ. ನೀವು ಆಯ್ಕೆಯಾಗಿದ್ದೀರಿ "ನಿಮ್ಮ ಕೆಲಸವನ್ನು ಮಾಡಿ", "ಎಂದು ರಾಹುಲ್ ಗಾಂಧಿ ವೀಡಿಯೊದಲ್ಲಿ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.