ಇಂದು Farmers-Central Govt ನಡುವೆ ಇನ್ನೊಂದು ಸಭೆ, ವಿಫಲವಾದರೆ ಪ್ರತಿಭಟನೆ ಹೆಚ್ಚಾಗುವ ಸಾಧ್ಯತೆ

7ನೇ ಸುತ್ತಿನ ಮಾತುಕತೆ ವಿಫಲವಾದರೆ ಹರಿಯಾಣದ ಎಲ್ಲಾ ಶಾಪಿಂಗ್ ಮಾಲ್ ಹಾಗೂ ಟೋಲ್ ಫ್ಲಾಜಾಗಳನ್ನು ಮುಚ್ಚಿಸುವುದಾಗಿ ಮತ್ತು ಗಣರಾಜ್ಯೋತ್ಸವದ ದಿನ‌ ದೆಹಲಿಯಲ್ಲಿ ಟ್ರ್ಯಾಕ್ಟರ್ ಮೆರವಣಿಗೆ ಮಾಡುವುದಾಗಿ ಪ್ರತಿಭಟನಾನಿರತ ರೈತರು ಬೆದರಿಕೆ ಹಾಕಿದ್ದಾರೆ.

Written by - Yashaswini V | Last Updated : Jan 4, 2021, 10:09 AM IST
  • ಇದಕ್ಕೂ ಮೊದಲು ನಡೆದಿರುವ 6 ಸಭೆಗಳೂ ವಿಫಲ
  • ಅಮಿತ್ ಶಾ ನಡೆಸಿದ್ದ ಮಾತುಕತೆಯಿಂದಲೂ ಆಗದ ಪ್ರಯೋಜನ
  • ನವೆಂಬರ್ 26ರಿಂದಲೂ ಶಾಂತಯುತವಾಗಿ ಪ್ರತಿಭಟನೆ ನಡೆಸುತ್ತಿರುವ ರೈತರು
ಇಂದು Farmers-Central Govt ನಡುವೆ ಇನ್ನೊಂದು ಸಭೆ, ವಿಫಲವಾದರೆ ಪ್ರತಿಭಟನೆ ಹೆಚ್ಚಾಗುವ ಸಾಧ್ಯತೆ

ನವದೆಹಲಿ: ಇತ್ತೀಚೆಗೆ ತಂದಿರುವ 3 ರೈತ ವಿರೋಧಿ ಕೃಷಿ ಕಾನೂನುಗಳನ್ನು ಹಿಂಪಡೆಯುವ ವಿಷಯಕ್ಕೆ ಸಂಬಂಧಿಸಿದಂತೆ ಇಂದು ರೈತ ಸಂಘಟನೆಗಳ ಪ್ರತಿನಿಧಿಗಳು ಮತ್ತು ಕೇಂದ್ರ ಸರ್ಕಾರದ ನಡುವೆ ನಿರ್ಣಾಯಕವಾದ ಸಭೆ ನಡೆಯಲಿದೆ. ಈ ಸಭೆಯೂ ವಿಫಲವಾದರೆ ಹೋರಾಟವನ್ನು ತೀವ್ರಗೊಳಿಸುವುದಾಗಿ ರೈತರು ಎಚ್ಚರಿಕೆ ನೀಡಿರುವುದರಿಂದ ಇಂದಿನ ಸಭೆ ಬಹಳ ಮಹತ್ವವನ್ನೂ ಪಡೆದುಕೊಂಡಿದೆ.

ಇದಕ್ಕೂ ಮೊದಲು ರೈತ ಸಂಘಟನೆಗಳ ಪ್ರತಿನಿಧಿಗಳು  ಹಾಗೂ ಕೇಂದ್ರ ಸರ್ಕಾರದ ನಡುವೆ 6 ಸಭೆಗಳಾಗಿವೆ.  6 ಸಭೆಗಳೂ ವಿಫಲವಾಗಿವೆ. ಅಲ್ಲದೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಕೂಡಬ ರೈತ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಒಮ್ಮೆ ಅನೌಪಚಾರಿಕವಾಗಿ ಮಾತುಕತೆ ನಡೆಸಿದ್ದಾರೆ. ಆದರೆ ಅವರು ಕೂಡ‌ ರೈತರ ಮನವೊಲಿಸುವುದರಲ್ಲಿ ಯಶಸ್ವಿಯಾಗಿಲ್ಲ. ಈ ಹಿನ್ನಲೆಯಲ್ಲಿ ಇಂದು ನಡೆಯುತ್ತಿರುವ 7ನೇ ಸುತ್ತಿನ ಸಭೆ ತೀವ್ರ ಕುತೂಹಲ ಮೂಡಿಸಿದೆ.

ಇದನ್ನೂ ಓದಿ : 'ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವವರೆಗೆ ನಾವು ಹಿಂದಕ್ಕೆ ಹೆಜ್ಜೆ ಇಡಲ್ಲ'

ರೈತರ ಪಾಲಿಗೆ ಮರಣಶಾಸನವಾಗಿರುವ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಸಂಪೂರ್ಣವಾಗಿ ಹಿಂಪಡೆಯಬೇಕು.‌ ರೈತ ಬೆಳೆಯುವ ಎಲ್ಲಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿಗೊಳಿಸಬೇಕು. ರೈತರಿಗೆ ಪೂರಕವಾಗಿಲ್ಲದ ವಿದ್ಯುತ್ ಕಾಯಿದೆಯನ್ನು ಹಿಂಪಡೆಯಬೇಕು ಎಂಬುದು ರೈತ ಸಂಘಟನೆಗಳ ಒತ್ತಾಯ. ಕೃಷಿ ಕಾನೂನುಗಳಲ್ಲಿನ ಭಿನ್ನಾಭಿಪ್ರಾಯಗಳನ್ನು ವಿಂಗಡಿಸಿ ಚರ್ಚಿಸಲು ಸಮಿತಿ ರಚಿಸಲಾಗುವುದು. ಕನಿಷ್ಠ ಬೆಂಬಲ ಬೆಲೆ (MSP) ಮತ್ತು ಎಪಿಎಂಸಿ (APMC) ಮಂಡಿಗಳನ್ನು ಉಳಿಸಲಾಗುವುದು ಎಂಬುದು ಕೇಂದ್ರ ಸರ್ಕಾರದ ವಾದ. ಈವರೆಗೆ ನಡೆದಿರುವ 6 ಸಭೆಗಳಲ್ಲೂ ಈ ವಿಚಾರವಾಗಿ ಪರಸ್ಪರ ಒಮ್ಮತ ಮೂಡಿಲ್ಲ. ಈ ಬಾರಿಯಾದರೂ ಮಾತುಕತೆ ಫಲಪ್ರದ ಆಗುವುದೇ ಎಂಬುದನ್ನು ಕಾದುನೋಡಬೇಕು.

ರೈತ ವಿರೋಧಿ ಕೃಷಿ ಕಾನೂನುಗಳನ್ನು ಸಂಪೂರ್ಣವಾಗಿ ಹಿಂಪಡೆಯುವಂತೆ ಒತ್ತಾಯಿಸಿ 40ಕ್ಕೂ ಹೆಚ್ಚು ರೈತ ಸಂಘಟನೆಗಳು 2020ರ ನವೆಂಬರ್ 26ರಿಂದಲೂ ಶಾಂತಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. 'ದೆಹಲಿ ಚಲೋ' (Dilli Chalo) ಹೆಸರಿನಲ್ಲಿ ಪ್ರತಿಭಟನೆಗೆ ಕರೆ ಕೊಟ್ಟಿದ್ದ ರೈತರನ್ನು ದೆಹಲಿಯ ಗಡಿಗಳಲ್ಲೇ ತಡೆಯಲಾಗಿದೆ. ರೈತರು ದೆಹಲಿಯ ಗಡಿಗಳಲ್ಲೇ ಕಳೆದ 42 ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ಮುಂದುವರೆಸಿದ್ದಾರೆ. ಈ ನಡುವೆ ಡಿಸೆಂಬರ್ 8ರಂದು 'ಭಾರತ್ ಬಂದ್'ಗೆ (Bharath Bandh) ಕರೆ ಕೊಟ್ಟಿದ್ದರು. ಡಿಸೆಂಬರ್ 14ರಂದು ಒಂದು ದಿನದ ಉಪವಾಸ ಸತ್ಯಾಗ್ರಹ (Hunger Strike) ಕೈಗೊಂಡಿದ್ದರು. ಡಿಸೆಂಬರ್ 21ರಿಂದ ರಿಲೇ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. 

ಇದನ್ನೂ ಓದಿ : 'ನಾನು ಜೋತಿಷ್ಯ ಹೇಳುವವನಲ್ಲ'

ಈಗ 7ನೇ ಸುತ್ತಿನ ಮಾತುಕತೆ ವಿಫಲವಾದರೆ ಹರಿಯಾಣದ ಎಲ್ಲಾ ಶಾಪಿಂಗ್ ಮಾಲ್ (Shopping Malls) ಹಾಗೂ ಟೋಲ್ ಫ್ಲಾಜಾ (Toll Flaza)ಗಳನ್ನು ಮುಚ್ಚಿಸುವುದಾಗಿ ಮತ್ತು ಗಣರಾಜ್ಯೋತ್ಸವ (Republic Day)ದ ದಿನ‌ ದೆಹಲಿಯಲ್ಲಿ ಟ್ರ್ಯಾಕ್ಟರ್ ಮೆರವಣಿಗೆ (Tractor Rally) ಮಾಡುವುದಾಗಿ ಪ್ರತಿಭಟನಾನಿರತ ರೈತರು ಬೆದರಿಕೆ ಹಾಕಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News