ನವದೆಹಲಿ: ದೇಶದಲ್ಲಿ COVID-19 ಪ್ರಕರಣಗಳು ಹೆಚ್ಚಾಗುವುದರೊಂದಿಗೆ, ಕೋವಿಡ್ ಪರೀಕ್ಷೆಯ ಹೊರೆಯೂ ಹೆಚ್ಚುತ್ತಿದೆ. ಲ್ಯಾಬ್‌ಗಳು ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ಭಾರಿ ಜನಸಂದಣಿ ಇದೆ. ಆರ್‌ಟಿ-ಪಿಸಿಆರ್ ವರದಿಗಳು ಬರಲು ಸಾಮಾನ್ಯಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ಈ ಮಧ್ಯೆ ಕರೋನಾ ಸೋಂಕಿಗೆ ಒಳಗಾದವರು 14 ದಿನಗಳ ಕ್ವಾರೆಂಟೈನ್ ಬಳಿಕ ಮತ್ತೆ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕಾಗಿಲ್ಲ ಎಂದು ತಜ್ಞರು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಈ ಕಾರಣಕ್ಕಾಗಿ ಮರು ಪರೀಕ್ಷೆ ಮಾಡುವ ಅಗತ್ಯವಿಲ್ಲ:
ಕಲ್ಯಾಣ್‌ನ ಫೋರ್ಟಿಸ್ ಆಸ್ಪತ್ರೆಯ (Fortis Hospital) ಮುಖ್ಯ ಡಾ. ಸಂದೀಪ್ ಪಾಟೀಲ್ ಈ ಬಗ್ಗೆ ಮಾಹಿತಿ ನೀಡಿದ್ದು, ಸಾಂಕ್ರಾಮಿಕ ರೋಗವು ಸಂಭವಿಸಿದಾಗಿನಿಂದ, ಕೋವಿಡ್ ರೋಗಿಗಳು ತಮ್ಮ ಎದೆಯ ರೇಡಿಯೋಗ್ರಾಫ್‌ಗಳನ್ನು ತೆರವುಗೊಳಿಸದವರೆಗೆ ಮತ್ತು ಅವರ ಆರ್‌ಟಿ-ಪಿಸಿಆರ್ (RT-PCR) ಪರೀಕ್ಷೆ ಮಾಡಿ ಅವರಿಗೆ ಕರೋನಾ ವರದಿ ನೆಗೆಟಿವ್ ಬರುವವರೆಗೂ ಬಿಡುಗಡೆ ಅಂದರೆ ಡಿಸ್ಚಾರ್ಜ್ ಮಾಡಲಾಗುವುದಿಲ್ಲ ಎಂದು ವಾದಿಸುತ್ತಾರೆ. ಕಳೆದ ವರ್ಷದ ತನಕ ಇಂತಹ ಕ್ರಮ ಉತ್ತಮವಾಗಿತ್ತು. ಏಕೆಂದರೆ ವೈರಸ್ ಹೊಸದು ಮತ್ತು ನಮ್ಮ ವಿಜ್ಞಾನಿಗಳು ಈ ವೈರಸ್‌ನ ಪರಿಣಾಮ ಮಾನವರ ಮೇಲೆ ಯಾವ ಯಾವ ರೀತಿಯಲ್ಲಿ ಪ್ರಭಾವ ಬೀರಬಹುದು ಎಂಬ ಬಗ್ಗೆ ಅರ್ಥಮಾಡಿಕೊಳ್ಳುತ್ತಿದ್ದಾರೆ. ಇದೀಗ ವೈರಸ್ನ ರೂಪಾಂತರವು ನಡೆದಿದ್ದು, ಈಗ ಅದರ ಸೋಂಕು ಮತ್ತು ಪರಿಣಾಮಗಳ ಬಗ್ಗೆ ಮಾಹಿತಿಯನ್ನು ಪಡೆಯಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಹೊಸ ನಿಯಮಗಳನ್ನು ರೂಪಿಸಿದೆ.
ಇದರ ಆಧಾರದ ಮೇಲೆ-
>> ಸೌಮ್ಯವಾದ ಸೋಂಕಿನಿಂದ ಬಳಲುತ್ತಿರುವ ರೋಗಿಗೆ 3 ದಿನಗಳವರೆಗೆ ನಿರಂತರವಾಗಿ ಜ್ವರ ಬರದಿದ್ದರೆ, ರೋಗಲಕ್ಷಣಗಳು ಪ್ರಾರಂಭವಾದ ದಿನದಿಂದ 10 ದಿನಗಳವರೆಗೆ ಅವನನ್ನು ಡಿಸ್ಚಾರ್ಜ್ ಮಾಡಬಹುದು.
>> ಡಿಸ್ಚಾರ್ಜ್ ಸಮಯದಲ್ಲಿ ಮತ್ತೆ ಪರೀಕ್ಷಿಸುವ ಅಗತ್ಯವಿಲ್ಲ
>> ರೋಗಿಯನ್ನು 7 ದಿನಗಳ ಕಾಲ ಮನೆಯಲ್ಲಿ ಪ್ರತ್ಯೇಕಿಸಲು (Quarantine) ಮತ್ತು ಅವರ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲು ಸೂಚಿಸಬೇಕು.


ಇದನ್ನೂ ಓದಿ - Coronavirus: ಭಾರತದ ಕರೋನಾ ಪರಿಸ್ಥಿತಿ ಬಗ್ಗೆ WHO ವಿಜ್ಞಾನಿ ಕಳವಳ


ಮಧ್ಯಮ ರೋಗಲಕ್ಷಣಗಳನ್ನು ಹೊಂದಿರುವವರಿಗೆ ಈ ಮಾನದಂಡ:
- ರೋಗಿಯು 3 ದಿನಗಳವರೆಗೆ, ರೋಗಲಕ್ಷಣಗಳು ಪ್ರಾರಂಭವಾದ 10 ದಿನಗಳ ನಂತರ ಅವರಿಗೆ ಯಾವುದೇ ರೋಗಲಕ್ಷಣಗಳಿಲ್ಲದಿದ್ದರೆ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಬಹುದು.
- ಡಿಸ್ಚಾರ್ಜ್ ಮಾಡುವ ಮೊದಲು ಯಾವುದೇ ಪರೀಕ್ಷೆಯ ಅಗತ್ಯವಿಲ್ಲ
- ರೋಗಿಯನ್ನು 7 ದಿನಗಳ ಕಾಲ ಮನೆಯಲ್ಲಿ ಕ್ವಾರೆಂಟೈನ್‌ನಲ್ಲಿರಲು ಮತ್ತು ಅವರ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲು ಸೂಚಿಸಬೇಕು.


ಗಂಭೀರ ಪ್ರಕರಣಗಳಿಗೆ ಮಾನದಂಡ:
ಈ ಸಂದರ್ಭದಲ್ಲಿ, ರೋಗಿಯಲ್ಲಿ ರೋಗಲಕ್ಷಣಗಳು ಕಡಿಮೆಯಾದ ನಂತರ, ಆರ್ಟಿ-ಪಿಸಿಆರ್ ಪರೀಕ್ಷೆಯನ್ನು ಮಾಡಿ. ವರದಿ ನೆಗೆಟಿವ್ ಬಂದು ರೋಗಿಯನ್ನು ಪ್ರಾಯೋಗಿಕವಾಗಿ ಚೇತರಿಸಿಕೊಂಡ ನಂತರವೇ ಅದನ್ನು ಬಿಡುಗಡೆ ಮಾಡಬಹುದು.


ಇದನ್ನೂ ಓದಿ- Corona Vaccine Good news : 2-18 ವರ್ಷದೊಳಗಿನವರಿಗೆ Covaxin ಟ್ರಯಲ್ ಗೆ ಶಿಫಾರಸು


ವೈರಸ್ 7-8 ದಿನಗಳಲ್ಲಿ :
ಡಾ. ಸಂದೀಪ್ ಪಾಟೀಲ್ ಅವರು, 'ಸೌಮ್ಯ ಮತ್ತು  ಯಾವುದೇ ಸೋಂಕಿನ ಲಕ್ಷಣಗಳಿಲ್ಲದ COVID-19 ಪ್ರಕರಣಗಳಲ್ಲಿ, 7 ಅಥವಾ 8 ನೇ ದಿನದ ನಂತರ ವೈರಸ್ ಸಾಯುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅದು ಬೇರೆ ಯಾವುದೇ ವ್ಯಕ್ತಿಗೆ ಹರಡುವುದಿಲ್ಲ. ಆದರೆ ಸತ್ತ ವೈರಸ್ ಅಥವಾ ಅದರ ಕಣಗಳು ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತವೆ. ಇದರಿಂದಾಗಿ ಕರೋನಾ ಟೆಸ್ಟ್ ರಿಪೋರ್ಟ್ ಪಾಸಿಟಿವ್ ಎಂದು ತೋರುತ್ತದೆ. ಆದರೆ ಆ ವ್ಯಕ್ತಿಯು ಸೋಂಕಿನಿಂದ ಮುಕ್ತನಾಗಿರುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ, ರೋಗಿಯು ಭಯಪಡಬೇಕಾಗಿಲ್ಲ ಎಂದು ತಿಳಿಸಿದ್ದಾರೆ.


https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.