ಕೆಲವೊಮ್ಮೆ ಜಗತ್ತಿನಲ್ಲಿ ವಿಚಿತ್ರವಾದ ಸಂಗತಿಗಳು ನಡೆಯುತ್ತವೆ.ಇದು ಹೇಗೆ ಸಾಧ್ಯ ಯೋಚಿಸಿದರೂ ಉತ್ತರ ಸಿಗುವುದಿಲ್ಲ. ಇಂಥದ್ದೊಂದು  ವಿಚಿತ್ರ ಘಟನೆ ಈಗ ಎಲ್ಲರನ್ನೂ ಬೆಚ್ಚಿ ಬೀಳಿಸುತ್ತಿದೆ. 11 ವರ್ಷಗಳ ಹಿಂದೆ ನಿಧನರಾದ ಪತಿಯೊಂದಿಗೆ ಪುನರ್ಮಿಲನ ಸಾಧ್ಯವೇ? ಎನ್ನುವ ಪ್ರಶ್ನೆ ಇದೀಗ ಉದ್ಬವಿಸಿದೆ. ಅದು ಅಸಾಧ್ಯ ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಹೀಲಾ ಎಂಬ ಮಹಿಳೆ 11 ವರ್ಷಗಳ ಹಿಂದೆ ಮೃತಪಟ್ಟಿರುವ ಪತಿಯಿಂದಲೇ ತಾನು ಗರ್ಭ ದರಿಸುವುದಾಗಿ ಹೇಳಿ ಆಶ್ಚರ್ಯ ಹುಟ್ಟಿಸಿದ್ದಾರೆ.  


COMMERCIAL BREAK
SCROLL TO CONTINUE READING

ವಿಚಿತ್ರ ಎನಿಸಿದರೂ ಹೀಲಾ ತನ್ನ ವಾದವನ್ನು ದೃಢವಾಗಿ ನಂಬುತ್ತಾಳೆ. ತನಗೆ ಬೇರೆ ಯಾವುದೇ ಪುರುಷನ ಜೊತೆ ಸಂಬಂಧವಿಲ್ಲ ಎನ್ನುವುದನ್ನು ಖಡಾ ಖಂಡಿತವಾಗಿ ಈ ಮಹಿಳೆ ಹೇಳುತ್ತಾರೆ. ಸತ್ತು ಹೋಗಿರುವ ಪತಿ ಆಗಾಗ ತನ್ನ ಕನಸಿನಲ್ಲಿ ಬರುತ್ತಾನೆ, ಊಟ ಮಾಡುತ್ತಾನೆ, ಮಾತನಾಡುತ್ತಾನೆ ಪಕ್ಕದಲ್ಲಿ ಮಲಗುತ್ತಾನೆ ಎನುವುದನ್ನು ಈ ಮಹಿಳೆ ಎಳೆ  ಎಳೆಯಾಗಿ ಬಿಡಿಸಿ ಹೇಳುತ್ತಾರೆ. ಕನಸಿನಲ್ಲಿ ನಡೆದ ಮಿಲನದಿಂದಲೇ ತಾನು ಈಗ ಗರ್ಭಿಣಿಯಾಗಿದ್ದೇನೆ ಎನ್ನುವ ಆ ಮಹಿಳೆ ಮಾತು ಎಲ್ಲರ ಹುಬ್ಬೇರಿಸಿದೆ. 


ಇದನ್ನೂ ಓದಿ : Daily GK Quiz: ವಿಶ್ವಪ್ರಸಿದ್ಧ ತೈಲಚಿತ್ರ ಮೊನಾಲಿಸಾವನ್ನು ಚಿತ್ರಿಸಿದವರು ಯಾರು?


ಆದರೆ ಮಹಿಳೆಯ ಮಾತುಗಳನ್ನು ಒಪ್ಪಲು ಜನರು ಸಿದ್ದರಿಲ್ಲ. ಹಾಗಾಗಿ ಮಗುವಿನ ನಿಜವಾದ ತಂದೆ ಯಾರು ಎಂಬುದನ್ನು ನಿರ್ಧರಿಸಲು ಡಿಎನ್‌ಎ ಪರೀಕ್ಷೆಯೊಂದೇ ಮಾರ್ಗ ಎನ್ನುವ , ಮಾತು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿದೆ. ಕೆಲವರು ಈ ಮಹಿಳೆ ಹೇಳುತ್ತಿರುವುದು ಶುದ್ದ ಸುಳ್ಳು,  ಆಡುತ್ತಿರುವುದು ನಾಟಕ ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ಆಕೆ ಪ್ರಚಾರಕ್ಕಾಗಿ ಇಂತಹ ಚೀಪ್ ಟ್ರಿಕ್ಸ್ ಅನುಸರಿಸುತ್ತಿದ್ದಾರೆ ಎನ್ನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 


ವಿಜ್ಞಾನದ ದೃಷ್ಟಿಯಿಂದ ಹೇಳುವುದಾದರೆ ಈ ಕಥೆ ನಂಬಲಸಾಧ್ಯ. ಕನಸಿನಲ್ಲಿ ಅಥವಾ ಮ್ಯಾಜಿಕ್ನಲ್ಲಿ ಗರ್ಭಿಣಿಯಾಗುವುದು ಸಾಧ್ಯವಿಲ್ಲದ ಮಾತು. ವ್ಯಕ್ತಿಯ ಮರಣದ ನಂತರ ವೀರ್ಯವನ್ನು ಉಳಿಸುವ ಮತ್ತು ಬಳಸುವಂತಹ ವೈಜ್ಞಾನಿಕ ವಿಧಾನಗಳ ಮೂಲಕ ಮಾತ್ರ ಗರ್ಭಧಾರಣೆ ಸಾಧ್ಯ. ಇನ್-ವಿಟ್ರೊ ಫರ್ಟಿಲೈಸೇಶನ್ (ಐವಿಎಫ್) ನಂತಹ ತಂತ್ರಜ್ಞಾನಗಳ ಮೂಲಕ ಸಂರಕ್ಷಿಸಲ್ಪಟ್ಟ ವೀರ್ಯದೊಂದಿಗೆ ಮಹಿಳೆಯರು ಮಕ್ಕಳನ್ನು ಹೊಂದಬಹುದು. ಆದರೆ ಈ ಮಹಿಳೆ ಅಂಥಹ ಚಿಕಿತ್ಸೆಗೆ ಒಳಗಾಗಿದ್ದಾರೆ ಎನ್ನುವುದನ್ನು ಎಲ್ಲಿಯೂ ಹೇಳಲಿಲ್ಲ. 


ಇದನ್ನೂ ಓದಿ : Daily GK Quiz: ವಿಶ್ವದ ಎರಡನೇ ಅತಿ ದೊಡ್ಡ ವಜ್ರ ಉತ್ಪಾದಕ ದೇಶ ಯಾವುದು?


ಇಂತಹ ವಿಚಿತ್ರ ಕಥೆಗಳು ಹೊರಬರುತ್ತಿರುವುದು ಇದೇ ಮೊದಲಲ್ಲ.ಕೀನ್ಯಾದಲ್ಲಿ ವಾಸಿಸುವ ಮಹಿಳೆ ತನ್ನ ಪತಿ ಸತ್ತ ಆರು ತಿಂಗಳ ನಂತರ ಗರ್ಭಿಣಿಯಾದಳು. ತನ್ನ ಪತಿ ಆತ್ಮದ ರೂಪದಲ್ಲಿ ಬಂದು ನಮ್ಮಿಬ್ಬರ ಮಿಲನ ನಡೆದು ಇದು ಸಾಧ್ಯವಾಯಿತು ಎಂದು  ಆ ಮಹಿಳೆ  ಕೂಡಾ ಬಲವಾಗಿ ವಾದಿಸಿದ್ದರು. ಇನ್ನೊಬ್ಬ ಇಟಾಲಿಯನ್ ಮಹಿಳೆ ತನ್ನ ಗಂಡನ ಆಕಸ್ಮಿಕ ಮರಣದ ಕೆಲವು ವಾರಗಳ ನಂತರ ಅವಳು ಗರ್ಭಿಣಿಯಾಗಿರುವ ವಿಚಾರ ಬೆಳಕಿಗೆ ಬಂದಿತ್ತು.


ಒಬ್ಬ ವ್ಯಕ್ತಿಯ ವೀರ್ಯವನ್ನು ಸಾಯುವ ಮೊದಲು ಶೇಖರಿಸಿಟ್ಟರೆ, ಗರ್ಭಧಾರಣೆ ಸಾಧ್ಯ ಎಂದು ವೈದ್ಯಕೀಯವಾಗಿ ಸಾಬೀತಾಗಿದೆ. ಆದರೆ ಹೀಲಾ ಪ್ರಕರಣದಲ್ಲಿ ಅಂತಹ ವೈದ್ಯಕೀಯ ಹಸ್ತಕ್ಷೇಪದ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಈ ವಿಷಯ ಈಗ ಆನ್‌ಲೈನ್‌ನಲ್ಲಿ ಹಾಟ್ ಟಾಪಿಕ್ ಆಗಿದೆ. 


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.