ತಲಾಕ್, ತಲಾಕ್, ತಲಾಕ್ ಎಂದ ಪತಿಗೆ ಕಪಾಳಮೋಕ್ಷ ಮಾಡಿದ ಪತ್ನಿ
ತ್ರಿವಳಿ ತಲಾಕ್ ಅಸಂವಿಧಾನಿಕ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಮುಜಫರ್ ಪುರ್: ತ್ರಿವಳಿ ತಲಾಕ್ ಅಸಂವಿಧಾನಿಕ ಎಂದು ಸುಪ್ರೀಂಕೋರ್ಟ್ ಹೇಳಿದೆ. ಅದಾಗ್ಯೂ ಇನ್ನೂ ಹಲವೆಡೆ ತ್ರಿವಳಿ ತಲಾಕ್ ಬಗೆಗಿನ ಪ್ರಕರಣಗಳು ಕಂಡುಬರುತ್ತಿವೆ. ಇತ್ತೀಚಿಗೆ ಬಿಹಾರದ ಮುಜಫರ್ ಪುರ್ ನಲ್ಲಿ ತ್ರಿವಳಿ ತಲಾಕ್ ಅಂತಹ ಪ್ರಕರಣ ಒಂದು ಬೆಳಕಿಗೆ ಬಂದಿದೆ. ತುಂಬಿದ ಪಂಚಾಯಿತಿಯಲ್ಲಿ ತಲಾಕ್, ತಲಾಕ್, ತಲಾಕ್ ಎಂದು ಪತಿ ಹೇಳಿದ್ದು ಆ ಸ್ಥಳದಲ್ಲೇ ಪತ್ನಿ ಆತನಿಗೆ ಕಪಾಳ ಮೋಕ್ಷ ಮಾಡಿರುವ ಘಟನೆ ನಡೆದಿದೆ.
ಮುಜಫರ್ ಪುರ್ ನ ಸರೋಯ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಸಂತ್ಪುರ ಪಂಚಾಯತ್ನಲ್ಲಿ ಇವರ ವಿವಾಹ ವಿಚ್ಛೇದನ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕುಟುಂಬದಲ್ಲಿ ಮೂಡಿದ್ದ ಅಪಶ್ರುತಿಯ ಬಳಿಕ ಪಂಚಾಯತ್ ನಲ್ಲಿ ಇಬ್ಬರೂ ವಿಚ್ಛೇದನಕ್ಕೆ ಒಪ್ಪಿಕೊಂಡರು ಎನ್ನಲಾಗಿದೆ.
ನ್ಯಾಯಾಲಯದಲ್ಲಿ ಈ ವಿಷಯ ತೀರ್ಮಾನಗೊಳ್ಳುವ ಬದಲು ಪಂಚಾಯತ್ನಲ್ಲಿ ಇದನ್ನು ಪರಿಹರಿಸಲಾಗಿದೆ ಎಂಬುದು ಆಶ್ಚರ್ಯಕರ ವಿಷಯವಾಗಿದೆ. ಅಲ್ಲದೆ, ಪೊಲೀಸ್-ಆಡಳಿತಕ್ಕೆ ಅದರ ಬಗ್ಗೆ ಯಾವುದೇ ಮಾಹಿತಿಗಳಿಲ್ಲ.