Rajasthan Assembly Elections 2023: ಇದೇ ವರ್ಷ ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಯುವಜನರಲ್ಲಿ ಅತ್ಯಂತ ಜನಪ್ರೇಯತೆ ಗಳಿಸಿರುವ ಕಾಂಗ್ರೆಸ್ ಮುಖಂಡ ಸಚಿನ್ ಪೈಲಟ್ ಅವರ ಬಂಡಾಯದ ಧೋರಣೆಯಿಂದಾಗಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಶಕ್ತಿ ಬಹುತೇಕ ಕುಗ್ಗಿದಂತಾಗಿದೆ, ಆದರೆ ಇದೀಗ ಈ ಸಮಸ್ಯೆ ಪರಿಹಾರಕ್ಕೆ  ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ. ಈ ಸಮಸ್ಯೆಯನ್ನು ಪರಿಹರಿಸಿ. ರಾಜಸ್ಥಾನದಲ್ಲಿ ತನ್ನ ಹಿಡಿತವನ್ನು ಬಲಪಡಿಸಲು ಕಾಂಗ್ರೆಸ್ ತನ್ನ ಸಿದ್ಧತೆಯನ್ನು ಆರಂಭಿಸಿದೆ. ಆದರೆ ಇದಕ್ಕಾಗಿ ರಾಜ್ಯದ ಇಬ್ಬರು ಹಿರಿಯ ಮುಖಂಡರಾಗಿರುವ ಸಚಿನ್ ಪೈಲಟ್ ಮತ್ತು ಅಶೋಕ್ ಗೆಹ್ಲೋಟ್ ನಡುವಿನ ವೈಮನಸ್ಸು ಹೋಗಲಾಡಿಸುವುದು ಬಹಳ ಮುಖ್ಯವಾಗಿದೆ. ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಹಾಗೂ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನಡುವೆ ಬಹಳ ದಿನಗಳಿಂದ ಉಂಟಾಗಿರುವ ಮನಸ್ತಾಪ ಹಾಗೆಯೇ ಮುಂದುವರೆದಿದೆ


COMMERCIAL BREAK
SCROLL TO CONTINUE READING

ಸಮನ್ವಯದ ಸುಳಿವು
ಇದೀಗ ಉಭಯ ನಾಯಕರ ನಡುವಿನ ಅಂತರ ತಗ್ಗಿಸಲು ಕಾಂಗ್ರೆಸ್ ಹೈಕಮಾಂಡ್ ಕಸರತ್ತು ಆರಂಭಿಸಿದೆ. ರಾಜಸ್ಥಾನದ ಪ್ರಭಾವಿ ನಾಯಕರಿಬ್ಬರನ್ನು ದೆಹಲಿಗೆ ಕರೆಸಿಕೊಂಡು 4 ಗಂಟೆಗಳ ಸುದೀರ್ಘ ಸಭೆ ನಡೆಸಲಾಗಿದೆ. 4 ಗಂಟೆಗಳಲ್ಲಿ, 4 ವರ್ಷಗಳ ಅನೇಕ ಮನಸ್ತಾಪಗಳನ್ನು ದೂರಗೊಳಿಸುವ ಕೆಲಸ ಮಾಡಲಾಯಿತು. ಉಭಯ ನಾಯಕರು ನಗು ಮುಖದೊಂದಿಗೆ ಸಭೆಯಿಂದ ಹೊರಬಂದಿರುವುದು ಇದರ ಸಂಕೇತ ಎನ್ನಲಾಗಿದೆ ಮತ್ತು ಪತ್ರಿಕಾಗೋಷ್ಠಿಯಲ್ಲಿ ಅಶೋಕ್ ಗೆಹ್ಲೋಟ್ ಸಮನ್ವಯದತ್ತ ಗಮನ ಸೆಳೆದಿದ್ದಾರೆ.


ಇದನ್ನೂ ಓದಿ-Delhi: 16 ವರ್ಷದ ಅಪ್ರಾಪ್ತೆಯನ್ನು ಕೊಚ್ಚಿ ಕೊಲೆಗೈದ ತಲೆತಿರುಕ, ಬುಲಂದ್ ಶಹರ್ ನಲ್ಲಿ ಆರೋಪಿ ಸಾಹಿಲ್ ಬಂಧನ


ನಿಷ್ಠಾವಂತನಾಗಿರುವೆ, ಮುಂದೆಯೂ ನಿಷ್ಠಾವಂತನಾಗಿರುವೆ
ಅಶೋಕ್‌ ಗೆಹ್ಲೋಟ್‌ ಅವರನ್ನು ಸಚಿನ್‌ ಪೈಲಟ್‌ ಅವರನ್ನು ಹೆಸರಿಸಿ ಮಾಧ್ಯಮಗಳು ಪ್ರಶ್ನಿಸಿದಾಗ, ತಾಳ್ಮೆ ಇರುವವರಿಗೆ ಖಂಡಿತಾ ಅವಕಾಶ ಸಿಗುತ್ತದೆ ಎಂದು ಸೋನಿಯಾ ಗಾಂಧಿ ಒಮ್ಮೆ ಹೇಳಿದ್ದರು ಎಂದು ಉತ್ತರಿಸಿದ್ದಾರೆ. ಹೈಕಮಾಂಡ್ ಭೇಟಿಯಾದ ಬಳಿಕ ಯಾರು ಏಕೆ ಸಹಕರಿಸುವುದಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ. ನಂಬಿಕೆಯನ್ನು ಇಟ್ಟರೆ ಮಾತ್ರ ನಂಬಿಕೆ ಸಿಗುತ್ತದೆ ಎಂದು ಅವರು ಹೇಳಿದ್ದಾರೆ. ಹೈಕಮಾಂಡ್ ನಮ್ಮ ಮೇಲೆ ನಂಬಿಕೆ ಇಟ್ಟಿದೆ. ಎಲ್ಲರೂ ಒಗ್ಗಟ್ಟಾಗಿ ನಡೆದರೆ ಸರ್ಕಾರ ನಮ್ಮ ಕೈಗೆ ಬರುತ್ತದೆ. ಇಲ್ಲಿಯವರೆಗೂ ಪಕ್ಷಕ್ಕೆ ನಿಷ್ಠರಾಗಿದ್ದೇನೆ, ಮುಂದೆಯೂ ನಿಷ್ಠರಾಗಿರುತ್ತೇನೆ ಎಂದು ಗೆಹ್ಲೋಟ್ ಹೇಳಿದಾರೆ. 


ಇದನ್ನೂ ಓದಿ-Wrestlers Protest: 'ಗಂಗಾ ನದಿಯಲ್ಲಿ ಪದಕ ಹರಿಬಿಟ್ಟು, ಇಂಡಿಯಾ ಗೇಟ್ ಬಳಿ ಅನಿರ್ಧಿಷ್ಟಾವಧಿ ಉಪವಾಸ', ಕುಸ್ತಿಪಟುಗಳ ಘೋಷಣೆ


ರಾಜಸ್ಥಾನದ 'ರಣಕದನ' ಯಾರು ಗೆಲ್ಲುತ್ತಾರೆ
ಇದೇ ವರ್ಷ ರಾಜಸ್ಥಾನದಲ್ಲಿ ವಿಧಾನಸಭೆಗೆ ಚುನಾವಣೆಗಳು ನಡೆಯಲಿವೆ. ಕರ್ನಾಟಕದ ಕೋಟೆಯನ್ನು ಗೆದ್ದ ನಂತರ, ರಾಜಸ್ಥಾನದ ನೆಲದಲ್ಲಿ ತನ್ನ ನೆಲೆಯನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಖಂಡಿತ ಯತ್ನಿಸಲಿದೆ. ಕರ್ನಾಟಕದಂತೆಯೇ ರಾಜಸ್ಥಾನದಲ್ಲೂ ಮೋದಿ ಮ್ಯಾಜಿಕ್‌ ತಡೆಯಲು ಕಾಂಗ್ರೆಸ್‌ ಶಕ್ತಿಮೀರಿ ಪ್ರಯತ್ನಿಸಲಿದೆ. ಇದರೊಂದಿಗೆ ಮತ್ತೆ ಅಧಿಕಾರಕ್ಕೆ ಬರುವ ನಿರೀಕ್ಷೆ ಹೊಂದಿದೆ, ಆದರೆ ಆಡಳಿತಾರೂಢ ಕಾಂಗ್ರೆಸ್‌ ಪಕ್ಷಕ್ಕೆ ಈ ಹೋರಾಟ ಸುಲಭದ ಮಾತಲ್ಲ ಎನ್ನಲಾಗುತ್ತಿದೆ ಮತ್ತು ಬಿಜೆಪಿ ಇಲ್ಲಿ ಟಫ್ ಫೈಟ್ ನೀಡಲಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಮತವಾಗಿದೆ. 


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.