Delhi Minor Murder Case: ದೆಹಲಿಯ ಶಹಬಾದ್ ಡೈರಿ ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿಗೆ ಚಾಕುವಿನಿಂದ 40 ಬಾರಿ ಇರಿದ ಆರೋಪಿ ಸಾಹಿಲ್‌ನನ್ನು ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಬಂಧಿಸಲಾಗಿದೆ. ಪ್ರಸ್ತುತ ಆತನನ್ನು ದೆಹಲಿಗೆ ಕರೆತರಲಾಗುತ್ತಿದೆ ಎಂದು ದೆಹಲಿ ಪೊಲೀಸರ ವಿಶೇಷ ಸಿಪಿ ದೀಪೇಂದ್ರ ಪಾಠಕ್ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಎಲ್ಲ ಸಾಕ್ಷ್ಯಗಳನ್ನು ಸಂಗ್ರಹಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಇಬ್ಬರ ನಡುವೆ ಜಗಳ ನಡೆದು ಇಬ್ಬರೂ ಬೇರೆಯಾಗಿದ್ದರು ಎಂದು ಅವರು ಮಾಹಿತಿಯನ್ನು ನೀಡಿದ್ದಾರೆ. ಆದರೆ ಸಾಹಿಲ್‌ಗೆ ಹುಡುಗಿಯ ಮೇಲೆ ತುಂಬಾ ಕೋಪವಿತ್ತು ಮತ್ತು ಕೋಪದ ಭರದಲ್ಲಿ ಆತನು ಬಾಲಕಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಕೋಪದಲ್ಲಿ ಈ ಅಪರಾಧ ಎಸಗಲಾಗಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ. ನಾವು ಬುಲಂದ್‌ಶಹರ್‌ನಿಂದ ಸಾಹಿಲ್‌ನನ್ನು ಬಂಧಿಸಿದ್ದೇವೆ ಎಂದು ಡಿಸಿಪಿ ಔಟರ್ ನಾರ್ತ್ ರವಿಕುಮಾರ್ ಸಿಂಗ್ ತಿಳಿಸಿದ್ದಾರೆ.
ಘಟನೆ ಯಾವಾಗ ಮತ್ತು ಹೇಗೆ ನಡೆದಿದೆ
ರಾಜಧಾನಿಯ ಶಹಬಾದ್ ಡೈರಿ ಪ್ರದೇಶದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ. ಇಲ್ಲಿ ಹುಚ್ಚನೊಬ್ಬ ಅಪ್ರಾಪ್ತ ಬಾಲಕಿಯನ್ನು ಹತ್ಯೆಗೈದಿದ್ದಾನೆ. 16 ವರ್ಷದ ಬಾಲಕಿಗೆ ಆತ ಚಾಕುವಿನಿಂದ 40 ಬಾರಿ ಇರಿದಿದ್ದಾನೆ. ಇದಾದ ನಂತರವೂ ಸಮಾಧಾನವಾಗದ ಕಾರಣ ಬಾಲಕಿಯನ್ನು ಭಾರವಾದ ಕಲ್ಲಿನಿಂದ ಹಲವಾರು ಬಾರಿ ಕೊಚ್ಚಿ ಕೊಲೆ ಮಾಡಿದ್ದಾನೆ. ಆದರೆ, ಹುಡುಗಿ ಕೆಲವೇ ಕೆಲ ಚಾಕುವಿನ ಇರಿತದಿಂದ ಮೃತಪಟ್ಟಿದ್ದಾಳೆ, ಆದರೂ ಆ ತಲೆತಿರುಕನಿಗೆ ಸಮಾಧಾನ ಸಿಕ್ಕಿಲ್ಲ ಮತ್ತು ಬಾಲಕಿಯ ಮೇಲೆ ಚಾಕುವಿನಿಂದ ಹಲ್ಲೆ ಮುಂದುವರಿಸಿದ ಆತ ಬಳಿಕ ಆಕೆಯ ಮೇಲೆ ದೊಡ್ಡ ಕಲ್ಲನ್ನೆ ಎತ್ತಿ ಹಾಕಿದ್ದಾನೆ. ಹಲವಾರು ಬಾರಿ ಆತ ಆಕೆಯ ಮೇಲೆ ಒಂದೇ ಕಲ್ಲಿನಿಂದ ಹಲ್ಲೆ ನಡೆಸಿ ಅಲ್ಲಿಂದ ಹೊರಟು ಹೋಗುತ್ತಾನೆ ಮತ್ತು ಪುನಃ ಬಂದು ಮತ್ತೆ ಮತ್ತೆ ಬಾಲಕಿಯನ್ನು ಕಲ್ಲಿನಿಂದ ಕೊಚ್ಚುತ್ತಾನೆ.
ಈ ಘಟನೆ ದೆಹಲಿಯ ಶಹಬಾದ್ ಡೈರಿ ಪ್ರದೇಶದಲ್ಲಿ ನಡೆದಿದೆ. ಕೊಲೆಯಾದ ಅಪ್ರಾಪ್ತ ಬಾಲಕಿಯ ಹೆಸರು ಸಾಕ್ಷಿ ಎಂದು ಹೇಳಲಾಗುತ್ತಿದೆ. ಅಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಬಾಲಕಿಯ ಹತ್ಯೆಯ ಸಂಪೂರ್ಣ ದೃಶ್ಯ ಸೆರೆಯಾಗಿದೆ. ಹುಚ್ಚು ಕೊಲೆಗಾರನನ್ನು ಸಾಹಿಲ್ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ ಸಾಹಿಲ್ ಮತ್ತು ಸಾಕ್ಷಿ ಸ್ನೇಹಿತರಾಗಿದ್ದರು. ಘಟನೆ ನಡೆದ ದಿನ ಅಂದರೆ ಮೇ 28ರ ಭಾನುವಾರ ಯಾವುದೋ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದ್ದು, ಬಳಿಕ ಸಾಹಿಲ್ ಸಾಕ್ಷಿಯನ್ನು ಈ ರೀತಿ ಹತ್ಯೆಗೈದಿದ್ದಾನೆ.
ಸಾಕ್ಷಿ ಮೇಲೆ ಸಾಹಿಲ್ ಹಲ್ಲೆ ನಡೆಸಿದಾಗ ಆಕೆ ತನ್ನ ಸ್ನೇಹಿತೆ ನೀತು ಮಗನ ಹುಟ್ಟುಹಬ್ಬಕ್ಕೆ ಹೋಗುತ್ತಿದ್ದಳು ಎನ್ನಲಾಗಿದೆ. ಅಷ್ಟರಲ್ಲಿ ಸಾಹಿಲ್ ದಾರಿಯಲ್ಲಿ ಆಕೆಯನ್ನು ತಡೆದು ಒಂದರ ಮೇಲೊಂದರಂತೆ 40 ಬಾರಿ ಚಾಕುವಿನಿಂದ ಸಾಕ್ಷಿಯನ್ನು ಇರಿದು ಹತ್ಯೆಗೈದಿದ್ದಾನೆ. ಅಪ್ರಾಪ್ತ ಬಾಲಕಿಯನ್ನು ಸಾರ್ವಜನಿಕರ ಎದುರಲ್ಲೇ ಕೊಂದು ಸಾಹಿಲ್ ಪರಾರಿಯಾಗಿದ್ದ. ಆತನ ಅಡಗುತಾಣಗಳ ಮೇಲೆ ದಾಳಿ ನಡೆಸಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಆಶ್ಚರ್ಯದ ಸಂಗತಿಯೆಂದರೆ ಸಾಹಿಲ್ ಈ ಘಟನೆಯನ್ನು ಕಾರ್ಯಗತಗೊಳಿಸುವ ಸಮಯದಲ್ಲಿ ರಸ್ತೆಯಲ್ಲಿ ಸಾಕಷ್ಟು ಜನರು ಓಡಾಡಿಕೊಂಡಿದ್ದರು. ಅನೇಕ ಜನರು ಅತ್ತಿಂದಿತ್ತ ಹೋಗುತ್ತಿದ್ದರು. ಆದರೆ ಯಾರೂ ಸಹ ಸಾಕ್ಷಿಯನ್ನು ಉಳಿಸಲು ಅಥವಾ ಸಾಹಿಲ್ ಅನ್ನು ತಡೆಯಲು ಯತ್ನಿಸಿಲ್ಲ. ಸಿಸಿಟಿವಿಯಲ್ಲಿ ಹಲವರು ಪದೇ ಪದೇ ಅತ್ತಿಂದಿತ್ತ ತೆರಳುತ್ತಿರುವುದು ಕಂಡುಬಂದರೂ ಸಾಹಿಲ್‌ನನ್ನು ತಡೆಯುವ ಧೈರ್ಯ ಯಾರೂ ಮಾಡಿಲ್ಲ.
ಇದನ್ನೂ ಓದಿ-RBI Alert: ಆಯ್ದ ಬ್ಯಾಂಕುಗಳಲ್ಲಿನ ಅಸ್ಥಿರತೆಯ ಕುರಿತು ಕಳವಳ ವ್ಯಕ್ತಪಡಿಸಿದ ಆರ್ಬಿಐ ಗವರ್ನರ್
ಸಿಸಿಟಿವಿಯಲ್ಲಿ ಸೆರೆಯಾಗಿರುವ ಈ ದೃಶ್ಯ ನೋಡಿ ಮನಸ್ಸು ವಿಚಲಿತವಾಗುತ್ತದೆ. ಈ ಘಟನೆ ತುಂಬಾ ಹೃದಯವಿದ್ರಾವಕವಾಗಿದೆ, ದುರ್ಬಲ ಹೃದಯದವರನ್ನು ಪರಿಗಣಿಸಿ ವಿಡಿಯೋ ಪ್ರಕಟಿಸಲು ಸಾಧ್ಯವಾಗಿಲ್ಲ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.