ಮುಂಬೈ: ಭ್ರಷ್ಟಾಚಾರದ ಆರೋಪ ಮಾಡಿದ್ದಕ್ಕಾಗಿ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಂಬೀರ್ ಸಿಂಗ್ (Param Bir Singh) ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ (Anil Deshmukh) ಹೇಳಿದ್ದಾರೆ. ಇದಕ್ಕೂ ಮೊದಲು ಬಾರ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಇತರ ಸಂಸ್ಥೆಗಳಿಂದ ಪ್ರತಿ ತಿಂಗಳು 100 ಕೋಟಿ ರೂ. ಸಂಗ್ರಹಿಸುವಂತೆ ಪೊಲೀಸ್ ಅಧಿಕಾರಿಗಳನ್ನು ಕೇಳಿದ್ದಾರೆ ಎಂಬ ಸಿಂಗ್ ಆರೋಪವನ್ನು ಕೂಡಾ  ಎನ್‌ಸಿಪಿ ನಾಯಕ ದೇಶ್ ಮುಖ್ ತಳ್ಳಿಹಾಕಿದ್ದಾರೆ. 


COMMERCIAL BREAK
SCROLL TO CONTINUE READING

 'ತನ್ನನ್ನು ಬಚಾವ್ ಮಾಡಿಕೊಳ್ಳಲು ಪರಮ್ ಬೀರ್ ಸಿಂಗ್ ನೀಡುತ್ತಿರುವ ಹೇಳಿಕೆ' 
ಇಷ್ಟು ದಿನಗಳವರೆಗೆ  ಪರಮ್ ಬೀರ್ ಸಿಂಗ್ (Param Bir Singh) ಯಾಕೆ ಮೌನ ವಹಿಸಿದ್ದರು ಎಂದು ಅನಿಲ್ ದೇಶ್ ಮುಖ್  ಇದೆ ವೇಳೆ  ಪ್ರಶ್ನಿಸಿದ್ದಾರೆ. , ಸಚಿನ್ ವಾಜೆ (Sachin Vaze) ಪ್ರಕರಣದಲ್ಲಿ ತನ್ನನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. 'ಸಿಂಗ್ ನನ್ನ ಮೇಲೆ ಹೊರಿಸಿರುವ ಆರೋಪಗಳು ಸುಳ್ಳು ಮತ್ತು ನಾನು ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ' ಎಂದು ಅನಿಲ್ ದೇಶ್ ಮುಖ್ (Anil Deshmukh)  ಹೇಳಿದ್ದಾರೆ. 'ಮುಖೇಶ್ ಅಂಬಾನಿ ಪ್ರಕರಣ ಮತ್ತು ಮನ್ಸುಖ್ ಹಿರನ್  ಸಾವಿನ ಪ್ರಕರಣದಲ್ಲಿ ಸಚಿನ್ ವಾಜೆ  ಭಾಗಿಯಾಗಿರುವುದು ಸ್ಪಷ್ಟವಾಗಿದೆ. ಇದೀಗ ತನಿಖೆಯ ಜಾಡು  ಪರಮ್ ಬೀರ್ ಸಿಂಗ್ ಅವರನ್ನು ತಲುಪಲಿದೆ ಎಂದು ದೇಶ್ ಮುಖ್ ಹೇಳಿದ್ದಾರೆ. ಈ ಭಯದಿಂದಾಗಿ ಪರಮ್ ಬೀರ್ ಸಿಂಗ್ ಈ ಆರೋಪಗಳನ್ನು ಮಾಡಿದ್ದಾರೆ ಎಂದು ಅನಿಲ್ ದೇಶ್ ಮುಖ್ ಹೇಳಿದ್ದಾರೆ. 


ಇದನ್ನೂ ಓದಿ Maharashtra Home Minister: ತಿಂಗಳಿಗೆ ‘₹ 100 ಕೋಟಿ ಹಫ್ತಾ’ ಕೇಳಿದ ಗೃಹಸಚಿವ..!


ವಸೂಲಿಯಂಥಹ  ಗಂಭೀರ ಆರೋಪ ಮಾಡಿದ್ದ  ಪರಮ್ ಬಿರ್ ಸಿಂಗ್ :
ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ (Mukhesh Ambali) ನಿವಾಸದ ಬಳಿ ಸ್ಫೋಟಕಗಳನ್ನು ತುಂಬಿದ್ದ ವಾಹನ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿ ಸಚಿನ್ ವಾಜೆಯನ್ನು ಬಂಧಿಸಲಾಗಿತ್ತು. ಇದಾದ ನಂತರ ಹಿರಿಯ ಐಪಿಎಸ್ ಅಧಿಕಾರಿ ಸಿಂಗ್ ಅವರನ್ನು ಗೃಹರಕ್ಷಕ ದಳದ (Home guard) ಮುಖ್ಯಸ್ಥರಾಗಿ ವರ್ಗಾಯಿಸಲಾಯಿತು. ಈ ಪ್ರಕರಣದಲ್ಲಿ ತನ್ನನ್ನು ಬಲಿಪಶುವನ್ನಾಗಿ ಮಾಡಲಾಗಿದೆ ಎಂದು ಪರಮ್ ಬೀರ್ ಸಿಂಗ್ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ (Uddhav Thackeray) ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ, ಅನಿಲ್ ದೇಶ್ ಮುಖ್, ಸಚಿನ್ ವಾಜೆಗೆ ಬಾರ್, ರೆಸ್ಟೋರೆಂಟ್ ಮತ್ತು ಇತರ ಸಂಸ್ಥೆಗಳಿಂದ ಪ್ರತಿ ತಿಂಗಳು 100 ಕೋಟಿ ರೂ. ವಸೂಲಿ ಮಾಡುವ ಗುರಿಯನ್ನು ಹೊಂದಿರುವುದಾಗಿ ಹೇಳಿದ್ದರು ಎಂದು ಬರೆದಿದ್ದಾರೆ. ಈ ಮೊತ್ತದ ಅರ್ಧದಷ್ಟನ್ನು ನಗರದಲ್ಲಿರುವ 1,750 ಬಾರ್ ಮತ್ತು  ರೆಸ್ಟೋರೆಂಟ್‌ ಗಳಿಂದ ವಸೂಲಿ ಮಾಡುವಂತೆ ಸೂಚಿಸಲಾಗಿತ್ತು ಎಂದು ಹೇಳಿದ್ದಾರೆ.  


ತನಿಖೆಗೆ ಬಿಜೆಪಿ ಒತ್ತಾಯ : 
ಈ ನಡುವೆ , ದೇಶ್ ಮುಖ್ ವಿರುದ್ಧ ಸಿಂಗ್ ಮಾಡಿದ ಆರೋಪಗಳ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕೆಂದು ಬಿಜೆಪಿ (BJP) ಒತ್ತಾಯಿಸಿದೆ. , ಈ ರೀತಿಯ 'ಕ್ರಿಮಿನಲ್ ಮನಸ್ಥಿತಿ' ಹೊಂದಿರುವ ಸರ್ಕಾರಕ್ಕೆ ಒಂದು ನಿಮಿಷವೂ ಅಧಿಕಾರದಲ್ಲಿ ಉಳಿಯುವ ಹಕ್ಕಿಲ್ಲ ಎಂದು ಬಿಜೆಪಿ ಹೇಳಿದೆ.  ಅನಿಲ್  ದೇಶ್ ಮುಖ್ ಕೂಡಲೇ  ರಾಜಿನಾಮೆ (Resignation) ನೀಡಬೇಕೆಂದು  ಬಿಜೆಪಿ ಒತ್ತಾಯಿಸಿದೆ.


ಇದನ್ನೂ ಓದಿ ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆಗೆ ಕೊರೊನಾ ಧೃಢ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.