ನವದೆಹಲಿ:ಕೊರೊನಾ ವೈರಸ್ ಮಹಾಮಾರಿಯ ಹಿನ್ನೆಲೆ ಸದ್ಯ ವಿಶ್ವಾದ್ಯಂತ ಭಾರಿ ಕೋಲಾಹಲ ಸೃಷ್ಟಿಯಾಗಿದೆ. ಏತನ್ಮಧ್ಯೇ ಯಾವುದೇ ಓರ್ವ ವ್ಯಕ್ತಿ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟರೆ, ಲೈಫ್ ಇನ್ಸುರೆನ್ಸ್ ಕಂಪನಿಗಳು ಆತನ ಕ್ಲೇಮ್ ಅನ್ನು ತಿರಸ್ಕರಿಸುವುದಿಲ್ಲ ಮತ್ತು  ಪಾಲಸಿಧಾರಕರಿಗೆ ಸಮ್ ಅಷ್ಯೋರ್ಡ್ ನ ಸಂಪೂರ್ಣ ಹಣ ನೀಡಲಿವೆ. 


COMMERCIAL BREAK
SCROLL TO CONTINUE READING

ದೇಶದ ಎಲ್ಲಾ ಲೈಫ್ ಇನ್ಸುರೆನ್ಸ್ ಕಂಪನಿಗಳ ಸಂಘಟನೆಯಾಗಿರುವ ಲೈಫ್ ಇನ್ಸುರೆನ್ಸ್ ಕೌನ್ಸಿಲ್ ಈ ಕುರಿತು ಸ್ಪಷ್ಟನೆ ನೀಡಿದ್ದು, ಕೊರೊನಾ ಮಹಾಮಾರಿಯ ಹಿನ್ನೆಲೆ Force Majeure ಕ್ಲೇಮ್ ಅನ್ವಯಿಸುವುದಿಲ್ಲ ಎಂದು ಹೇಳಿದೆ. ಏಕೆಂದರೆ ಹಲವು ಕಂಪನಿಗಳು ತಮ್ಮ ಪಾಲಸಿಯ ಷರತ್ತುಗಳಲ್ಲಿ Force Majeure ಅಂದರೆ, ಯುದ್ಧದ ಸ್ಥಿತಿ, ಮಹಾಮಾರಿ, ನೈಸರ್ಗಿಕ ವಿಪತ್ತು ಹಾಗೂ ಆಕ್ಟ್ ಆಫ್ ಗಾಡ್ ನಂತಹ ಘಟನೆಗಳು ಸಂಭವಿಸಿದಲ್ಲಿ ಕಂಪನಿಗಳು ಪಾಲಸಿದಾರರ ಕ್ಲೇಮ್ ರಿಜೆಕ್ಟ್ ಮಾಡಲಾಗುವುದು ಎಂದು ಹೇಳಿಕೊಂಡಿವೆ.


ಇದೆ ಒಂದು ಕಾರಣದಿಂದ ಹಲವು ಕಂಪನಿಗಳಿಗೆ ಹೆಚ್ಚಿನ ಪಾಲಸಿಧಾರಕರು ಕರೆ ಮಾಡಿ ವಿಚಾರಣೆ ನಡೆಸುತ್ತಿದ್ದರು. ಹಾಗೂ ಈ ರೀತಿಯ ಕರೆಗಳು ಹೆಚ್ಚಾದ ಕಾರಣ ಸಂಘಟನೆ ಈ ಸ್ಪಷ್ಟೀಕರಣ ನೀಡಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಸರ್ಕಾರಿ ಹಾಗೂ ಪ್ರೈವೇಟ್ ಕಂಪನಿಗಳು ಕೊರೊನಾ ವೈರಸ್ ಕಾರಣದಿಂದ ಕ್ಲೇಮ್ ರಿಜೆಕ್ಟ್ ಮಾಡಲಾಗುವುದಿಲ್ಲ ಎಂಬುದಾಗಿ ಸ್ಪಷ್ಟಪಡಿಸಿವೆ. ಅಷ್ಟೇ ಅಲ್ಲ ಪಾಲಸಿ ಧಾರಕರು ಈ ಪರಿಸ್ಥಿತಿಯಲ್ಲಿ ಯಾವುದೇ ರೀತಿಯ ವದಂತಿಗಳನ್ನು ಪಾಲಸಿ ಧಾರಕರು ನಂಬಬಾರದು ಎಂದು ಹೇಳಿವೆ. 


ಇದಕ್ಕೂ ಮೊದಲು ಲಾಕ್ ಡೌನ್ ಅವಧಿಯಲ್ಲಿ ಒಂದು ವೇಳೆ ವಿಮಾ ಪಾಲಸಿಯ ಪ್ರಿಮಿಯಂ ಪಾವತಿಸದೇ ಹೋದಲ್ಲಿ ಪಾಲಸಿ ಲ್ಯಾಪ್ಸ್ ಆಗುವ ಭಯ ಕಾದಲಾರಂಭಿಸಿತ್ತು. ಈ ಕುರಿತು ಸ್ಪಷ್ಟನೆ ನೀಡಿದ್ದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಪಾಲಸಿಧಾರಕರಿಗೆ ಭಾರಿ ನೆಮ್ಮದಿಯನ್ನು ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಲಾಕ್ ಡೌನ್ ಅವಧಿಯಲ್ಲಿ ಮೋಟರ್ ವೆಹಿಕಲ್ ಥರ್ಡ್ ಪಾರ್ಟಿ ಇನ್ಸುರೆನ್ಸ್ ಅಥವಾ ಹೆಲ್ತ್ ಇನ್ಸುರನ್ಸ್ ಪಾಲಸಿಯನ್ನು ರಿನ್ಯೂ ಮಾಡದೆ ಹೋದಲ್ಲಿ ಅವರಿಗೆ ಏಪ್ರಿಲ್ 21ರವರೆಗೆ ಪ್ರಿಮಿಯಂ ಪಾವತಿಸಲು ಕಾಲಾವಕಾಶ ನೀಡಲಾಗುವುದು ಎಂದು ಹೇಳಿದ್ದರು.