ನವದೆಹಲಿ: ಉತ್ತರ ಪ್ರದೇಶದಲ್ಲಿ ಚಿತ್ರಗಳನ್ನು ನಿರ್ಮಿಸಲು ಬಾಲಿವುಡ್ ನ ಮುಖ್ಯ ಗಣ್ಯರ ಭೇಟಿಗಾಗಿ ಮುಂಬೈಗೆ ಆಗಮಿಸಿರುವ ಯುಪಿ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಶಿವಸೇನೆ ತೀವ್ರ ವಾಗ್ದಾಳಿ ನಡೆಸಿದೆ.


COMMERCIAL BREAK
SCROLL TO CONTINUE READING

ಮುಂಬೈನ ಚಲನಚಿತ್ರ ನಗರವನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸುವುದು ಸುಲಭವಲ್ಲ. ದಕ್ಷಿಣ ಭಾರತದಲ್ಲಿ ಚಲನಚಿತ್ರೋದ್ಯಮವೂ ದೊಡ್ಡದಾಗಿದೆ. ಪಶ್ಚಿಮ ಬಂಗಾಳ ಮತ್ತು ಪಂಜಾಬ್‌ನಲ್ಲೂ ಚಲನಚಿತ್ರ ನಗರಗಳಿವೆ. ಯೋಗಿ ಜಿ ಈ ಸ್ಥಳಗಳಿಗೆ ಭೇಟಿ ನೀಡುತ್ತಾರೆಯೇ ಮತ್ತು ನಿರ್ದೇಶಕರೊಂದಿಗೆ ಅಲ್ಲಿನ ಕಲಾವಿದರೊಂದಿಗೆ ಮಾತನಾಡುತ್ತಾರೆಯೇ? ಅಥವಾ ಅವರು ಅದನ್ನು ಮುಂಬೈನಲ್ಲಿ ಮಾತ್ರ ಮಾಡಲಿದ್ದಾರೆಯೇ? ಎಂದು ಶಿವಸೇನೆ ಮುಖಂಡ ಸಂಜಯ್ ರೌತ್ ಪ್ರಶ್ನಿಸಿದ್ದಾರೆ.


ಸರ್ಕಾರಿ ನೌಕರರಿಗೆ ಬಿಸಿ ಮುಟ್ಟಿಸಿದ ಯೋಗಿ ಸರ್ಕಾರ!


ವಾಜಪೇಯಿ ಚಿತಾಭಸ್ಮ ವಿಸರ್ಜನೆಗೆ ವ್ಯಯಿಸಿದ್ದ 2.54 ಕೋಟಿ ರೂ ಪಾವತಿಸದ ಯೋಗಿ ಸರ್ಕಾರ


ಸೆಪ್ಟೆಂಬರ್‌ನಲ್ಲಿ ಗೌತಮ್ ಬುದ್ಧ ನಗರದಲ್ಲಿ ಚಲನಚಿತ್ರ ನಗರವನ್ನು ಸ್ಥಾಪಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಅವರು ಅನಾವರಣಗೊಳಿಸಿದ್ದರು ಎಂದು ಪಿಟಿಐ ವರದಿ ಮಾಡಿದೆ. ಯಮುನಾ ಎಕ್ಸ್‌ಪ್ರೆಸ್‌ವೇಯ ಉದ್ದಕ್ಕೂ ಸೆಕ್ಟರ್ 21 ರಲ್ಲಿ ಇಷ್ಟು ದೊಡ್ಡ ಸೌಲಭ್ಯವನ್ನು ಸರ್ಕಾರ ಅನುಮೋದಿಸಿದೆ ಎಂದು ವರದಿಯಾಗಿದೆ.


ಅವರ ಮುಂಬೈ ಭೇಟಿಯು ಉತ್ತರ ಪ್ರದೇಶದ ಅಭಿವೃದ್ಧಿಗಾಗಿ ಮುಂಬೈ ಮೂಲದ ಸಂಸ್ಥೆಗಳಿಂದ ಹೂಡಿಕೆ ಪಡೆಯುವ ಗುರಿಯನ್ನು ಹೊಂದಿದೆ. ಬುಧವಾರ ಮುಂಜಾನೆ, ಅವರು ಲಕ್ನೋ ಮುನ್ಸಿಪಲ್ ಕಾರ್ಪೊರೇಷನ್ ಬಾಂಡ್ ನ ಪಟ್ಟಿಯನ್ನು ಗುರುತಿಸಿ ಬಿಎಸ್ಇಯಲ್ಲಿ ಆರಂಭಿಕ ಗಂಟೆ ಬಾರಿಸಿದರು.



ಮಂಗಳವಾರ ಸಂಜೆ ಮುಂಬೈಗೆ ಆಗಮಿಸಿದ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಈಗಾಗಲೇ ಕೈಲಾಶ್ ಖೇರ್ ಮತ್ತು ನಟ ಅಕ್ಷಯ್ ಕುಮಾರ್ ಅವರಂತಹ ಕಲಾವಿದರನ್ನು ಭೇಟಿ ಮಾಡಿದ್ದಾರೆ. "ನಾವು ಉತ್ತರಪ್ರದೇಶದಲ್ಲಿ ವಿಶ್ವ ದರ್ಜೆಯ ಚಲನಚಿತ್ರ ನಗರವನ್ನು ನಿರ್ಮಿಸಲು ಬಯಸುತ್ತೇವೆ. ಈ ನಿಟ್ಟಿನಲ್ಲಿ ಹಲವಾರು ನಿರ್ಮಾಪಕರು, ನಿರ್ದೇಶಕರು, ನಟರು ಮತ್ತು ಚಲನಚಿತ್ರೋದ್ಯಮಕ್ಕೆ ಸಂಬಂಧಿಸಿದ ಇತರ ತಜ್ಞರೊಂದಿಗೆ ನಾವು ಚರ್ಚೆ ನಡೆಸಿದ್ದೇವೆ" ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಸುದ್ದಿ ಸಂಸ್ಥೆ ಎಎನ್‌ಐ ಹೇಳಿದ್ದಾರೆ.


ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಮಂಗಳವಾರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಮುಂಬೈನಲ್ಲಿ ಭೇಟಿಯಾಗಿದ್ದಾರೆ.